Saturday, July 27, 2024

Latest Posts

ಮಾಡೆಲ್ಗಳ 8 ಹಿಡನ್ ಬ್ಯೂಟಿ ಸಿಕ್ರೇಟ್ಸ್ ಇದೇ ನೋಡಿ.. ಭಾಗ 1

- Advertisement -

ಬ್ಯೂಟಿ ಬಗ್ಗೆ ಮಾಡೆಲ್‌ಗಳಿಗಿಂತ ಹೆಚ್ಚು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಯಾಕಂದ್ರೆ ಅವರ ಕೆಲಸವೇ ಬ್ಯೂಟಿಫುಲ್ ಆಗಿ ಕಾಣೋದು. ಹಾಗಾಗಿ ಅವರು ಹಲವು ಬ್ಯೂಟಿ ಹ್ಯಾಕ್‌ಗಳನ್ನು ಬಳಸುತ್ತಾರೆ. ಹಾಗಾದ್ರೆ ಮಾಡೆಲ್‌ಗಳ 8 ಹಿಡೆನ್ ಬ್ಯೂಟಿ ಸಿಕ್ರೇಟ್ಸ್ ಬಗ್ಗೆ ತಿಳಿಯೋಣ ಬನ್ನಿ..

ಮೊದಲನೇಯ ಸಿಕ್ರೇಟ್ ವಾರಕ್ಕೊಮ್ಮೆ ತಪ್ಪದೇ, ಹೇರ್ ಮಾಸ್ಕ್ ಹಾಕೋದು. ಮಾಡೆಲ್‌ಗಳು ಬ್ಯೂಟಿ ಪಾರ್ಲರ್‌ಗಳಿಗೆ ಹೋಗಿ, ಅಥವಾ ಅವರ ಬ್ಯೂಟಿಷಿಯನ್ ಬಳಿ ವಾರಕ್ಕೊಮ್ಮೆಯಾದರೂ ತಪ್ಪದೇ, ಹೇರ್ ಮಾಸ್ಕ್ ಹಾಕಿಸಿಕೊಳ್ಳುತ್ತಾರೆ. ಹೇರ್ ಮಾಸ್ಕ್ ಹಾಕಿದ್ರೆ ಕೂದಲು ಉತ್ತಮವಾಗಿರತ್ತೆ ಅಂತಾ ಎಲ್ಲರಿಗೂ ಗೊತ್ತು. ಆದ್ರೆ ಎಲ್ಲರೂ ಪ್ರತೀ ವಾರ ಈ ಟಿಪ್ಸ್ ಫಾಲೋ ಮಾಡಲ್ಲ. ಹಾಗಾಗಿ ಅದರ ಎಫೆಕ್ಟ್ ಹೇಗಿರತ್ತೆ ಅಂತಾ ನಿಮಗೆ ಗೊತ್ತಿರೋದಿಲ್ಲ.

ಚಳಿಗಾಲಕ್ಕೆ ತಿನ್ನಬಹುದಾದ ಆರೋಗ್ಯಕರ ಸ್ವೀಟ್ ಶೇಂಗಾ ಚಿಕ್ಕಿ

ಆದ್ರೆ ಮಾಡೆಲ್‌ಗಳು ವಾರಕ್ಕೊಮ್ಮೆಯಾದ್ರೂ ಹೇರ್ ಮಾಸ್ಕ್ ಅಪ್ಲೈ ಮಾಡ್ತಾರೆ. ಉತ್ತಮ ಶ್ಯಾಂಪೂವಿನಿಂದ ವಾರಕ್ಕೆರಡು ಬಾರಿ, ಕ್ಲೀನ್ ಆಗಿ ತಮ್ಮ ಹೇರ್ ವಾಶ್ ಮಾಡುತ್ತಾರೆ. ಅವರು ಪ್ರತಿದಿನ ಸ್ಟ್ರೇಟ್ನರ್, ಹೇರ್ ಡ್ರೈಯರ್ ಬಳಸಲೇಬೇಕಾದ ಕಾರಣ, ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರಲೇಬೇಕಾಗುತ್ತದೆ. ಹಾಗಾಗಿ ವಾರಕ್ಕೊಮ್ಮೆ ತಪ್ಪದೇ, ಹೇರ್ ಮಾಸ್ಕ್ ಬಳಸುತ್ತಾರೆ.

ಎರಡನೇಯ ಸಿಕ್ರೇಟ್  ಸನ್‌ಸ್ಕ್ರೀನ್ ಲೋಶನ್ ಬಳಸೋದು. ಸೂರ್ಯನ ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳೋಕ್ಕೆ ಸನ್‌ಸ್ಕ್ರೀನ್ ಲೋಶನ್ ಬಳಸಲೇಬೇಕು. ಹಾಗಾಗಿ ಮಾಡೆಲ್‌ಗಳು ಹೈ ಕ್ವಾಲಿಟಿ ಸನ್‌ಸ್ಕ್ರೀನ್ ಲೋಶನ್ ಬಳಸುತ್ತಾರೆ. ಇದರಿಂದ ಅವರ ತ್ವಚೆ ಯಾವಾಗಲೂ, ಮೃದುವಾಗಿರುತ್ತದೆ. ಹೊಳಪಿನಿಂದ ಕೂಡಿರುತ್ತದೆ.

ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡತ್ತೆ ಈ ಸೂಪ್ಗಳು.. – ಭಾಗ 2

ಮೂರನೇಯ ಸಿಕ್ರೇಟ್ ರಾತ್ರಿ ಮಲಗುವಾಗ ಮಾಯಶ್ಚರೈಸಿಂಗ್ ಕ್ರೀಮ್ ಬಳಸೋದು. ಹಲವು ಮಾಡೆಲ್‌ಗಳು ನೈಟ್ ಸ್ಕಿನ್ ಲೈಟೆನಿಂಗ್ ಕ್ರೀಮ್, ಮಾಯಶ್ಚರೈಸಿಂಗ್ ಕ್ರೀಮ್ ಬಳಸುತ್ತಾರೆ. ಯಾಕಂದ್ರೆ ರಾತ್ರಿ ಹೊತ್ತು, ನಮ್ಮ ಸ್ಕಿನ್ ಇಂಪ್ರೂವ್‌್ಗೊಳ್ಳಲು ಉತ್ತಮವಾದ ಸಮಯವಾಗಿರುತ್ತದೆ. ಹಾಗಾಗಿ ಆ ಸಮಯದಲ್ಲಿ ಅದರ ಆರೈಕೆ ಮಾಡಿದ್ರೆ, ಅದು ಸುಂದರವಾಗುತ್ತದೆ. ಹಾಗಾಗಿ ನೈಟ್ ಕ್ರೀಮ್ ಬಳಸೋದು ಅತ್ಯಗತ್ಯ.

ನಾಲ್ಕನೇಯ ಸಿಕ್ರೇಟ್ ಮಾಡೆಲ್‌ಗಳು ಟಿಂಟೆಡ್ ಮಾಯಶ್ಚರೈಸಿಂಗ್ ಕ್ರೀಮ್ ಬಳಸುತ್ತಾರೆ. ಇದು ಲೈಟ್ ವೇಯ್ಟ್ ಆಗಿರುತ್ತದೆ. ಇದನ್ನು ಬಳಸೋದ್ರಿಂದ ಮುಖದ ಹೊಳಪು ಹೆಚ್ಚುತ್ತದೆ. ಹಾಗಾಗಿ ಮಾಡೆಲ್‌ಗಳು ಮೇಕಪ್ ಮಾಡದೇ ಇರುವಾಗ ಈ ಕ್ರೀಮ್ ಬಳಸುತ್ತಾರೆ. ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಸಿಗುವ ಟಿಂಟೆಡ್ ಕ್ರೀಮ್‌ಗೆ ಯಾವುದೇ ಸೈಡ್ ಎಫೆಕ್ಟ್ ಇರೋದಿಲ್ಲ. ಹಾಗಾಗಿ ಅವರು ಈ ಕ್ರೀಮ್ ಬಳಸುತ್ತಾರೆ. ಈ ಬಗ್ಗೆ ಇನ್ನೂ ಹೆಚ್ಚಿನವ ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ.

- Advertisement -

Latest Posts

Don't Miss