Beauty Tips: ಹಲವರಿಗೆ ಡಾರ್ಕ್ ಸರ್ಕಲ್ ಹೆಚ್‌ಚಾಗಿ ಕಂಡು ಬರುತ್ತದೆ. ಏನೇ ಮನೆ ಮದ್ದು ಮಾಡಿದರೂ, ಆ ಕಣ್ಣಿನ ಸುತ್ತಲೂ ಇರುವ ಕಪ್ಪು ಕಲೆ ಹೋಗುವುದೇ ಇಲ್ಲ. ಹಾಗಾದ್ರೆ ಈ ಡಾರ್ಕ್ ಸರ್ಕಲ್ ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.
ವೈದ್ಯೆಯಾಗಿರುವ ಡಾ.ದೀಪಿಕಾ ಅವರು ಈ ಬಗ್ಗೆ ವಿವರಿಸಿದ್ದಾರೆ. ಕಣ್ಣಿನ ಸುತ್ತಲೂ ಕಪ್ಪು ಕಲೆ ಬರಲು ಅನುವಂಶಿಕತೆಯೂ ಕಾರಣವಾಗಿರುತ್ತದೆ. ಹೆಚ್ಚು ಒತ್ತಡಭರಿತವಾದ ಜೀವನವಿದ್ದರೆ, ಅದರಿಂದಲೂ ಕಣ್ಣಿನ ಸುತ್ತಲೂ ಕಪ್ಪು ಕಲೆ ಬರುತ್ತದೆ. ನಿದ್ರಾಹೀನತೆ ಸಮಸ್ಯೆ ಇದ್ದಾಗಲೂ ಡಾರ್ಕ್ ಸರ್ಕಲ್ ಬರುತ್ತದೆ.
ಹೀಗಿರುವಾಗ ವೈದ್ಯರು ಹೇಳುವುದೇನೆಂದರೆ, ಡಾರ್ಕ್ ಸರ್ಕಲ್ ಹೋಗಲು, ನಾವು ಸೇರಮ್, ಮಾಯಿಶ್ಚರೈಸರ್ ಸೇರಿ ಕೆಲವು ಕ್ರೀಮ್ ಅಡ್ವೈಸ್ ಮಾಡುತ್ತೇವೆ. ಆದರೆ ಡಾರ್ಕ್ ಸರ್ಕಲ್ ಬರಲು ಕಾರಣವೇನು ಅಂತಾ ನಾವು ಮೊದಲು ತಿಳಿಯಬೇಕು. ಬಳಿಕ ಅದಕ್ಕೆ ನಾವು ಚಿಕಿತ್ಸೆ ನೀಡಲು ಸಾಧ್ಯ. ಹಾಗಾಗಿ ಆದಷ್ಟು ವೈದ್ಯರ ಬಳಿಯೇ ನಿಮ್ಮ ಸಮಸ್ಯೆಗೆ ಪರಿಹಾರ ಹುಡುಕಿ ಅಂತಾರೆ ವೈದ್ಯೆ ಡಾ.ದೀಪಿಕಾ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.