Tuesday, April 29, 2025

Latest Posts

Health tips: ಸಂಧಿವಾತ ಮಂಡಿನೋವಿಗೆ ಈ ಮನೆಮದ್ದುಗಳೇ ಪರಿಹಾರ..!

- Advertisement -

Health tips: ಮನುಷ್ಯನಿಗೆ ವಯಸ್ಸಾಗುತ್ತಿದ್ದಂತೆ, ಅವನ ದೇಹದಲ್ಲಿನ ಅಂಗಾಂಗಗಳು, ಮೂಳೆ ಎಲ್ಲವೂ ಶಕ್ತಿ ಕಳೆದುಕೊಳ್ಳುತ್ತಾ ಹೋಗುತ್ತದೆ. 10 ವರ್ಷಗಳ ಹಿಂದೆ ನೀವು ಗಟ್ಟಿಮುಟ್ಟಾಗಿದ್ದಿರಬಹುದು. ಆದರೆ ಆ ಗಟ್‌ಟಿತನ ಈಗಿರುವುದಿಲ್ಲ. ಇದು ಸಹಜ ಕೂಡ. ಹೀಗೆ ವಯಸ್ಸಾದಂತೆ ಸಂಧಿವಾತ ಶುರುವಾಗಿ, ಮಂಡಿನೋವು, ಸೊಂಟ ನೋವು ಎಲ್ಲ ಬರಲು ಶುರುವಾಗುತ್ತದೆ. ಹಾಗಾಗಿ ವೈದ್ಯರಾಗಿರುವ ಡಾ.ಕಿಶೋರ್ ಅವರು ಸಂಧಿವಾತಕ್ಕೆ ಏನು ಮನೆಮದ್ದು ಮಾಡಬಹುದು ಅಂತಾ ಹೇಳಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ಯಾವಾಗ ನಮ್ಮ ದೇಹದ ತೂಕ ಹೆಚ್ಚಾಗುತ್ತದೆಯೋ, ಆಗಲೇ ನಮ್ಮ ದೇಹಕ್ಕೆ ರೋಗವೆಂಬ ಬಾಧೆ ಅಂಟುಕೊಳ್ಳುತ್ತದೆ. ಹಾಗಾಗಿಯೇ ನಮ್ಮ ದೇಹದ ತೂಕ ಹೆಚ್ಚದಂತೆ ನಾವು ಗಮನ ಹರಿಸಬೇಕು. ಅದಕ್ಕಾಗಿ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ವ್ಯಾಯಾಮ, ಯೋಗ ಮಾಡಬೇಕು. ತುಂಬ ಆರಾಮದಾಯಕವಾದ ಜೀವನದಿಂದಲೇ ನಮ್ಮ ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ಹಾಗಾಗಿ ವ್ಯಾಯಾಮ, ಜಾಗಿಂಗ್,ವಾಕಿಂಗ್ ಮಾಡಬೇಕು. ಶಿಸ್ತಿನ ಬದುಕನ್ನು ರೂಢಿಸಿಕೊಳ್ಳಬೇಕು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss