ಚಿಕ್ಕು ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟಾ ಇಲ್ಲಾ ಹೇಳಿ. ಸಿಹಿ ಸಿಹಿಯಾದ ರಸಭರಿತ ಚಿಕ್ಕು ಎಷ್ಟು ಸ್ವಾದಿಷ್ಟವೋ ಅಷ್ಟೇ ಆರೋಗ್ಯಕರವೂ ಹೌದು. ಆದ್ರೆ ಅದನ್ನ ಆಯಾ ರೀತಿಯಲ್ಲಿ ಸೇವಿಸಿದ್ದಲ್ಲಷ್ಟೇ ನಿಮಗೆ ಅದರ ಆರೋಗ್ಯಕರ ಲಾಭ ಸಿಗುತ್ತದೆ. ಹಾಗಾದ್ರೆ ಚಿಕ್ಕು ಹಣ್ಣನ್ನ ಯಾವಾಗ ಮತ್ತು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಅನ್ನೋದನ್ನ ನಾವಿಂದು ತಿಳಿಸಿಕೊಡಲಿದ್ದೇವೆ.

ಹೃದಯ ಸಮಸ್ಯೆ ಇದ್ದವರು ಚಿಕ್ಕುಹಣ್ಣಿನ ಸೇವನೆ ಮಾಡಿದ್ದಲ್ಲಿ ಲಾಭ ಪಡಿಯಬಹುದು.
ತೂಕ ಇಳಿಸಿಕೊಳ್ಳಬೇಕು ಎನ್ನುವವರು ನಿಯಮಿತವಾಗಿ ಚಿಕ್ಕು ಹಣ್ಣಿನ ಸೇವನೆ ಮಾಡಬೇಕು.
ನೆನಪಿನ ಶಕ್ತಿ ಕಡಿಮೆ ಇರುವವರು, ಮರೆಗುಳಿಯಾಗಿದ್ದರೆ, ಕೆಲಸದಲ್ಲಿ ಏಕಾಗೃತೆಯನ್ನು ಹೊಂದಲಾಗದಿದ್ದವರು ಚಿಕ್ಕು ಹಣ್ಣಿನ ಸೇವನೆ ಮಾಡಬೇಕು. ಇದರಿಂದ ಮೆದುಳಿಗೆ ಶಕ್ತಿ ಬಂದು, ನಿಮಗೆ ಒಳ್ಳೆಯ ನಿದ್ದೆ ಬರುತ್ತದೆ. ನೆನಪಿನ ಶಕ್ತಿ ಹೆಚ್ಚಾಗುತ್ತದೆ.
ಗರ್ಭಿಣಿಯರು ಮತ್ತು ಬಾಣಂತಿಯರು ಚಿಕ್ಕು ತಿನ್ನುವುದರಿಂದ ಸ್ತನಪಾನಕ್ಕೆ ಅನುಕೂಲವಾಗುತ್ತದೆ.
ಚಿಕ್ಕುಹಣ್ಣನ್ನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ರಾತ್ರಿ ಮಲಗುವ ವೇಳೆ ತಿನ್ನಬಾರದು. ಮಧ್ಯಾಹ್ನ ಊಟವಾದ ಬಳಿಕ ಅಥವಾ ಊಟಕ್ಕು ಮುನ್ನ ಚಿಕ್ಕುಹಣ್ಣನ್ನ ಸೇವಿಸಿದರೆ ಉತ್ತಮ. ಪದೇ ಪದೇ ಶೀತ ಜ್ವರ ಬರುವಂತಿದ್ದರೆ, ಅಂಥವರು ಚಿಕ್ಕುಹಣ್ಣನ್ನ ಸೇವಿಸಬೇಡಿ. ಅಲ್ಲದೇ, ಚಿಕ್ಕು ತಿಂದರೆ ನಿಮಗೆ ಅಲರ್ಜಿಯಾಗುವಂತಿದ್ದರೆ, ವೈದ್ಯರ ಬಳಿ ಸಲಹೆ ಪಡೆದು ಬಳಿಕ ಸೇವಿಸಿ.


