Sunday, June 22, 2025

Latest Posts

ಬೇಸಿಗೆಯಲ್ಲಿ ಮಡಿಕೆ ನೀರು ಕುಡಿದರೆ ಆಗುವ ಮ್ಯಾಜಿಕ್ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ..

- Advertisement -

ಬೇಸಿಗೆ ಕಾಲ ಆರಂಭವಾಗಿದೆ. ಈ ಬಿರು ಬಿಸಿಲಿಗೆ ಎಷ್ಟು ನೀರು ಕುಡಿದರೂ ಸಾಲದು. ಕೆಲವರು ಬೇಸಿಗೆಗೆ ಸಹಕಾರಿಯಾಗಲಿ ಅಂತಾ ಫ್ರಿಜ್ ಖರೀದಿಸಿ ಬಿಡುತ್ತಾರೆ. ಫ್ರಿಜ್ ನೀರು ಕುಡಿದರಷ್ಟೇ ಅವರಿಗೆ ಸಮಾಧಾನವಾದಂತೆ. ಯಾಕಂದ್ರೆ ಕೋಲ್ಡ್ ಆಗಿರುವ ಫ್ರಿಜ್ ನೀರು, ಬೇಸಿಗೆಯ ದಾಹ ಕಡಿಮೆ ಮಾಡುತ್ತದೆ ಅನ್ನೋ ಭಾವನೆ ಅವರದ್ದು. ಆದ್ರೆ ಬೇಸಿಗೆಯಲ್ಲಿ ಫ್ರಿಜ್ ಬದಲು ಮಣ್ಣಿನ ಮಮಡಿಕೆ ನೀರು ಕುಡಿಯುವುದು ತುಂಬಾ ಉತ್ತಮ ಎನ್ನಲಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

ಇಂದಿನ ಕಾಲದಲ್ಲಿ ಸ್ಟೀಲ್ ಪಾತ್ರೆ, ಫ್ರಿಜ್ ಬಂದಿರುವುದರಿಂದ ಜನ ಸ್ಟೀಲ್ ಪಾತ್ರೆಯಲ್ಲಿ ಅಡುಗೆ ಮಾಡಿ ಊಟ ಮಾಡುತ್ತಿದ್ದಾರೆ. ಫ್ರಿಜ್ ನೀರು ಕುಡಿದು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದರೆ ನಿಮಗೆ ಈಗಲೂ ಮಣ್ಣಿನ ಮಡಿಕೆ ಸಿಗುತ್ತದೆ. ಅದರಲ್ಲಿ ನೀರು ಹಾಕಿಟ್ಟು ಕುಡಿದರೆ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳಿದೆ.

ಹಿಂದಿನ ಕಾಲದ ಜನ ಗಟ್ಟಿಮುಟ್ಟಾಗಿ ಕೆಲಸ ಮಾಡಿಕೊಂಡು ಸಿಂಪಲ್ ಆದ ಜೀವನ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆಗ ಫ್ರಿಜ್, ವಾಶಿಂಗ್ ಮಷಿನ್, ಇಸ್ತ್ರೀ ಪೆಟ್ಟಿಗೆ, ವ್ಯಾಕ್ಯೂಮ್ ಕ್ಲೀನರ್ ಎಲ್ಲಾ ಇರಲಿಲ್ಲ. ಆದರೂ ಕೂಡ ತಮ್ಮ ಮನೆಯ ಕೆಲಸಗಳನ್ನು ಮಾಡುವಷ್ಟು ಜನ ಶಕ್ತರಾಗಿದ್ದರು. ಈ ಶಕ್ತಿಗೆ ಕಾರಣ ಮಣ್ಣಿನ ಮಡಿಕೆ. ಮಣ್ಣಿನ ಮಡಿಕೆಯಲ್ಲಿ ನೀರು ಕುಡಿಯುತ್ತಿದ್ದರು, ಅಡಿಗೆ ಮಾಡಿ ಊಟ ಮಾಡುತ್ತಿದ್ದರು.

ಮಣ್ಣಿನ ಮಡಿಕೆಯ ನೀರು ಕುಡಿಯುವುದರಿಂದ ದೇಹ ತಂಪಾಗಿರುತ್ತದೆ. ಮಣ್ಣಿನಲ್ಲಿರುವ ಉತ್ತಮ ಗುಣಗಳು ದೇಹಕ್ಕೆ ಸಿಗುತ್ತದೆ. ನಿಮಗೆ ಅಜೀರ್ಣ ಸಮಸ್ಯೆ ಇದ್ದಲ್ಲಿ ಪ್ರತಿದಿನ ಮಣ್ಣಿನ ಮಡಿಕೆಯಲ್ಲಿ ಶೇಖರಿಸಿಟ್ಟ ನೀರು ಕುಡಿಯಿರಿ. ಇನ್ನು ಮಣ್ಣಿನ ಮಡಿಕೆಯನ್ನು ಬಳಸುವುದಷ್ಟೇ ಅಲ್ಲದೇ, ಅದನ್ನು ಶುದ್ಧವಾಗಿ ತೊಳೆಯುವುದು ಕೂಡಾ ಮುಖ್ಯ. ಇಲ್ಲವಾದಲ್ಲಿ ಮಡಿಕೆಯಲ್ಲಿರುವ ಕೊಳಕು ನೀರು ಕುಡಿಯುವುದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ.

ಬೆಂಗಳೂರಿನಲ್ಲಿ ಜೀನಿ ಮಿಲ್ಲೆಟ್ ಮಿಕ್ಸ್ Home Delivery ಗಾಗಿ ಸಂಪರ್ಕಿಸಿ

9113649531

ಸಾವಯವ ಕಡಲೆಕಾಯಿ ಎಣ್ಣೆ

ಮರದ ಗಾಣದಿಂದ ತಯಾರಿಸಿದ ಗಾಣದ ಕಡೆಲೆಕಾಯಿ ಎಣ್ಣೆಗಾಗಿ ಸಂಪರ್ಕಿಸಿ

ಬೆಂಗಳೂರಿನಲ್ಲಿ Home delivery

8147130507 / 7349360507

ತಲಕಾಡಿನ ರೈತ ಮಹದೇವಪ್ಪ ತಾನೆ ನೋನಿ ಹಣ್ಣನ್ನ ಬೆಳೆದು ತಯಾರಿಸುತ್ತಿರುವ ಭಗವಾನ್

Noni ಹೋಂ ಡೆಲಿವರಿಗಾಗಿ  ಸಂಪರ್ಕಿಸಿ

8147130507 / 7349360507

- Advertisement -

Latest Posts

Don't Miss