ನಾವು ಈಗಾಗಲೇ ನಿಮ್ಮ ಮುಖದ ಸೌಂದರ್ಯ ಇಮ್ಮಡಿಗೊಳಿಸೋಕ್ಕೆ ಏನೇನು ಮಾಡಬೇಕು ಅನ್ನೋ ಬಗ್ಗೆ ಬ್ಯೂಟಿ ಟಿಪ್ಸ್ ಕೊಟ್ಟಿದ್ದೇವೆ. ಇಂದು ಕೂಡ ಅಂಥದ್ದೇ ಒಂದು ಟಿಪ್ಸ್ ಕೊಡಲಿದ್ದೇವೆ. ಮುಲ್ತಾನಿ ಮಿಟ್ಟಿ ಬಳಸಿ ಹೇಗೆ ನಮ್ಮ ಸೌಂದರ್ಯ ಅಭಿವೃದ್ಧಿ ಮಾಡಿಕೊಳ್ಳಬಹುದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮುಲ್ತಾನಿ ಮಿಟ್ಟಿಗೆ ಮೊಸರು ಮತ್ತು ನಿಂಬೆ ಹಣ್ಣು ಸೇರಿಸಿ ಫೇಸ್‌ಪ್ಯಾಕ್ ತಯಾರಿಸಿ. ಇದನ್ನ ಅಪ್ಲೈ ಮಾಡಿ, 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಹೀಗೆ ವಾರದಲ್ಲಿ ಎರಡು ಬಾರಿ ಮಾಡಿದ್ರೆ ಸಾಕು. ನಿಮ್ಮ ಮುಖ ಕಾಂತಿಯುತವಾಗುತ್ತೆ. ಇನ್ನು ಫೇಸ್‌ಪ್ಯಾಕ್ ಹಾಕಿದ ಬಳಿಕ, ಮಾಯ್ಶರೈಸಿಂಗ್ ಕ್ರೀಮ್ ಹಚ್ಚೋದನ್ನ ಮರೀಬೇಡಿ.
ಮುಲ್ತಾನಿ ಮಿಟ್ಟಿಗೆ ಶ್ರೀಗಗಂಧದ ಪುಡಿ ಅಥವಾ ಪೇಸ್ಟ್ ಮತ್ತು ದನದ ಹಸಿ ಹಾಲು ಸೇರಿಸಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ. ಇದನ್ನ ಅಪ್ಲೈ ಮಾಡಿ, 15 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ. ಇದು ಕೂಡ ನಿಮ್ಮ ತ್ವಚೆಯ ಆರೋಗ್ಯಕ್ಕೆ ಉತ್ತಮ.
ಮುಲ್ತಾನಿ ಮಿಟ್ಟಿಯನ್ನ ಡೈರೆಕ್ಟ್ ಆಗಿ ಮುಖಕ್ಕೆ ಅಪ್ಲೈ ಮಾಡಬೇಡಿ. ಬದಲಾಗಿ ಕೈಗೆ ಕೊಂಚ ಹಚ್ಚಿಕೊಂಡು, 15 ನಿಮಿಷ ಬಿಟ್ಟು ವಾಶ್ ಮಾಡಿಕೊಂಡು ನೋಡಿ. ನಿಮಗೆ ಯಾವುದೇ ಅಲರ್ಜಿ ಆಗದಿದ್ದಲ್ಲಿ ಮಾತ್ರ ಮುಖಕ್ಕೆ ಅಪ್ಲೈ ಮಾಡಿ. ಪ್ರತೀ ಕ್ರೀಮ್, ಫೇಸ್‌ಪ್ಯಾಕ್, ಸೋಪ್ ಎಲ್ಲವನ್ನೂ ಇದೇ ರೀತಿ ಪ್ರಯೋಗ ಮಾಡಿ. ಇನ್ನು ನಿಮಗೆ ಮುಲ್ತಾನಿ ಮಿಟ್ಟಿ ಬಳಸಿದರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.