ಪಪ್ಪಾಯಿ ಹಣ್ಣು ತಿಂದ್ರೆ ಆರೋಗ್ಯಕ್ಕಾಗುವ ಪ್ರಯೋಜನಗಳೇನು..? ಪಪ್ಪಾಯಿ ಹಣ್ಣಿನ ಫೇಸ್‌ಪ್ಯಾಕ್ ಬಳಸಿದ್ರೆ ಏನು ಲಾಭ..? ಇವುಗಳ ಬಗ್ಗೆ ಎಲ್ಲ ನಾವು ನಿಮಗೆ ಈ ಮೊದಲೇ ತಿಳಿಸಿದ್ದೇವೆ. ಆದ್ರೆ ಇಂದು ನಾವು ಪಪ್ಪಾಯಿ ಕಾಯಿ ಬಳಸುವುದರಿಂದಲೂ ಕೆಲ ಪ್ರಯೋಜನಗಳಿದೆ. ಅದರ ಬಗ್ಗೆ ತಿಳಿಸಲಿದ್ದೇವೆ. ಹಾಗಾದ್ರೆ ಪಪ್ಪಾಯಿ ಕಾಯಿ ಬಳಕೆಯ ಪ್ರಯೋಜನಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಡಯಾಬಿಟೀಸ್ ಇದ್ದವರು ಪಪ್ಪಾಯಿ ಕಾಯಿಯ ರಸವನ್ನ ಸೇವಿಸಬೇಕು. ಹೀಗೆ ಮಾಡುವುದರಿಂದ ಡಯಾಬಿಟೀಸ್ ಕಂಟ್ರೋಲಿನಲ್ಲಿರುತ್ತದೆ. ಗ್ಯಾಸ್‌ಸ್ಟಿಕ್ ಸಮಸ್ಯೆ, ಮಲಬದ್ಧತೆ ಸಮಸ್ಯೆ ಇದ್ದವರು ಪಪ್ಪಾಯಿ ಕಾಯಿಯನ್ನ ಸೇವಿಸಬೇಕು. ಅಲ್ಲದೇ ನಿಮ್ಮ ಶರೀರದಲ್ಲಿ ವಿಟಾಮಿನ್ ಕೊರತೆ ಇದ್ದಲ್ಲಿ, ಪಪ್ಪಾಯಿ ಹಣ್ಣು ಈ ಕೊರತೆಯನ್ನು ನೀಗಿಸುತ್ತದೆ.
ಅವಶ್ಯಕತೆಗಿಂತ ಹೆಚ್ಚು ತೂಕ ಹೆಚ್ಚಳವಾಗಿದ್ರೆ, ಪಪ್ಪಾಯಿ ಕಾಯಿ ಬಳಸಿ. ನೀವು ಪಪ್ಪಾಯಿ ಕಾಯಿಯಿಂದ ಪಲ್ಯ ಮಾಡಬಹುದು. ಸಾಂಬಾರ್ ಕೂಡ ಮಾಡಿ, ತಿನ್ನಬಹುದು. ಇನ್ನು ಸ್ತನಪಾನ ಮಾಡಿಸುವ ತಾಯಂದಿರು, ಪಪ್ಪಾಯಿ ಕಾಯಿ ಪದಾರ್ಥವನ್ನ ಖಂಡಿತ ಸೇವಿಸಬೇಕು. ಯಾಕಂದ್ರೆ ಇದರಿಂದ ಹಾಲಿನ ಉತ್ಪತ್ತಿ ಅಧಿಕವಾಗುತ್ತದೆ.
ಇನ್ನು ನಿಮಗೆ ಪದೇ ಪದೇ ಜ್ವರ ಬರುತ್ತಿದ್ದರೆ, ಅಥವಾ ಶೀತವಾಗುತ್ತಿದ್ದರೆ, ನೀವು ಪಪ್ಪಾಯಿ ಕಾಯಿಯ ಪದಾರ್ಥ ಮಾಡಿ ಸೇವಿಸಿ. ಕೆಲ ಹೆಣ್ಣು ಮಕ್ಕಳಿಗೆ ಪ್ರತಿ ತಿಂಗಳು ಸರಿಯಾಗಿ ಮುಟ್ಟಾಗುವುದಿಲ್ಲ. ಅಂಥವರು ಪಪ್ಪಾಯಿ ಕಾಯಿಯ ಪದಾರ್ಥ ಸೇವಿಸಿ. ನೆನಪಿರಲಿ ವಿವಾಹಕ್ಕೂ ಮುನ್ನ ಈ ಟಿಪ್ಸ್ ಫಾಲೋ ಮಾಡಿ. ವಿವಾಹದ ಬಳಿಕ ಬೇಡ. ಇನ್ನು ಪಪ್ಪಾಯಿ ಕಾಯಿ ಮತ್ತು ಪಪ್ಪಾಯಿ ಹಣ್ಣನ್ನ ಗರ್ಭಿಣಿಯರು ತಿನ್ನಬಾರದು. ಇದರಿಂದ ಮಗುವಿನ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಇನ್ನು ನಿಮಗೆ ಪಪ್ಪಾಯಿ ಕಾಯಿಯ ಪದಾರ್ಥ ತಿಂದ್ರೆ ಅಲರ್ಜಿ ಎಂದಾದಲ್ಲಿ ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಸೇವಿಸುವುದು ಉತ್ತಮ.