ಸ್ವೀಟ್ ಕಾರ್ನ್, ಯಾರಿಗಿಷ್ಟಾ ಇಲ್ಲಾ ಹೇಳಿ..?.. ಅದ್ರಲ್ಲೂ ಮಳೆಗಾಲ ಬೇರೆ ಶುರುವಾಗಿಬಿಟ್ಟಿದೆ. ಜಿಟಿಜಿಟಿ ಮಳೆ ಬೀಳುವಾಗ ಚಟ್‌ಪಟಾ ಕಾರ್ನ್ ತಿಂದ್ರೆ ಅದರ ಮಜಾನೇ ಬೇರೆ.
ಸಂಜೆ ಟೀ ಟೈಮ್‌ಲ್ಲಿ ಕರಿದ ಪದಾರ್ಥಗಳನ್ನ ತಿನ್ನೋ ಬದಲು ಕಾರ್ನ್ ತಿಂದರೆ ಆರೋಗ್ಯಕ್ಕೆ ಉತ್ತಮ. ಆದ್ರೆ ಕಾರ್ನ್ ಜೊತೆ ಟೀ ಕಾಫಿ ಸೇವಿಸಬೇಡಿ. ಕಾರ್ನ್ ತಿಂದು ಅರ್ಧ ಗಂಟೆ ಬಳಿಕವೇ ನೀರು ಕುಡಿಯುವುದು ಉತ್ತಮ.

ಇನ್ನು ಕಾರ್ನ್ ತಿನ್ನುವಾದ ಅದರಲ್ಲಿ ಉಪ್ಪು, ಖಾರ ಮತ್ತು ಬೆಣ್ಣೆ ಪ್ರಮಾಣ ಜಾಸ್ತಿ ಇರದಂತೆ ನೋಡಿಕೊಳ್ಳಿ. ಸ್ವೀಟ್‌ಕಾರ್ನ್ ರುಚಿ ಹೆಚ್ಚಿಸಲು ಕಾರ್ನ್‌ಗೆ ಉಪ್ಪು, ಕಾರ, ಬೆಣ್ಣೆ ಹಾಕಿಬಿಟ್ಟರೆ ನಿಮಗೆ ಪೂರ್ತಿ ಪ್ರಮಾಣದ ಆರೋಗ್ಯ ಲಾಭ ಸಿಗೋದಿಲ್ಲ.
ಅದರ ಬದಲು ಕಪ್ಪುಪ್ಪು, ಪೆಪ್ಪರ್ ಪೌಡರ್, ತುಪ್ಪ ಬಳಸಿ. ಇದು ಕೂಡ ಕಡಿಮೆ ಪ್ರಮಾಣದಲ್ಲಿರಲಿ. ಸ್ವಲ್ಪ ನಿಂಬೆರಸ ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು.
ಇನ್ನು ಕಾರ್ನ್ ಆರೋಗ್ಯಕ್ಕೆ ಒಳ್ಳೆಯದು ಅಂತಾ, ಅದರಿಂದ , ಪಲಾವ್, ರೈಸ್‌ಭಾತ್, ಬಜ್ಜಿ, ಇತ್ಯಾದಿ ಸ್ನ್ಯಾಕ್ಸ್‌ಗಳನ್ನ ಮಾಡ್ತಾರೆ. ಆದ್ರೆ ಕರಿದ ಪದಾರ್ಥಗಳಲ್ಲಿ, ಹೆಚ್ಚು ಬೇಯಿಸಿದ ಪದಾರ್ಥಗಳಲ್ಲಿ ಕಾರ್ನ್ ಬಳಸಿದ್ರೆ, ಕಾರ್ನ್ ಅದರ ಸತ್ವ ಕಳೆದುಕೊಳ್ಳುತ್ತದೆ. ಆಗ ಇಂತಹ ಪದಾರ್ಥಗಳಲ್ಲಿ ಕಾರ್ನ್ ಬಳಸಿದರೂ ನೋ ಯ್ಯೂಸ್. ಆದ್ದರಿಂದ ಕಾರ್ನ್‌ನ್ನ ಕೊಂಚ ಬೇಯಿಸಿ, ಅಥವಾ ಸುಟ್ಟು ತಿನ್ನಬಹುದು. ಸಲಾಡ್ ಮಾಡುವಾಗ ಬಳಸಿದ್ರು ಓಕೆ.

ಎನಿಮಿಯಾ ಅಂದ್ರೆ ಮನುಷ್ಯನ ದೇಹದಲ್ಲಿ ರಕ್ತದ ಕೊರತೆ ಇರುವುದು. ಸ್ವೀಟ್ ಕಾರ್ನ್‌ನಲ್ಲಿ ವಿಟಮಿನ್ ಬಿ12, ಐರನ್ ಇರುವುದರಿಂದ ದೇಹದಲ್ಲಿರುವ ರಕ್ತದ ಕೊರತೆ ನೀಗಿಸುವಲ್ಲಿ ಸ್ವೀಟ್ ಕಾರ್ನ್ ಸಹಕಾರಿಯಾಗಿದೆ.

ನಿಯಮಿತ ಪ್ರಮಾಣದ ಸ್ವೀಟ್ ಕಾರ್ನ್ ಸೇವನೆಯಿಂದ ದೇಹದಲ್ಲಿರುವ ಹೆಚ್ಚಿನ ಬೊಜ್ಜನ್ನ ಕರಗುತ್ತದೆ. ನಿಮ್ಮ ದೇಹದಲ್ಲಿರುವ ಬ್ಯಾಡ್ ಕೊಲೆಸ್ಟ್ರಾಲನ್ನ ಕಡಿಮೆ ಮಾಡುತ್ತದೆ.
ತೂಕ ಹೆಚ್ಚಿಸಲು ಇಚ್ಛಿಸುವವರು ವಾರಕ್ಕೆ ನಾಲ್ಕು ಬಾರಿ ಕಾರ್ನ್ ತಿನ್ನಬಹುದು. ಕಾರ್ನ್ ಬೇಯಿಸುವಾಗ ತುಪ್ಪ ಬಳಸಿದರೆ ಆರೋಗ್ಯಕರವಾಗಿ ತೂಕ ಹೆಚ್ಚಿಸಿಕೊಳ್ಳಬಹುದು.
ನೆನಪಿರಲಿ ಹೆಚ್ಚಾದ್ರೆ ಅಮೃತವೂ ವಿಷವೇ ಎಂಬ ಹಾಗೇ ಮಿತಿಮೀರಿ ಕಾರ್ನ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆದಲ್ಲ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ