Saturday, June 14, 2025

Latest Posts

Bengaluru News: ಕ್ರೀಡಾಂಗಣದಲ್ಲಿ ತಮಗಾದ ಕರಾಳ ಅನುಭವ ಬಿಚ್ಚಿಟ್ಟ ರ್ಯಾಪರ್ ಚಂದನ್ ಶೆಟ್ಟಿ

- Advertisement -

Bengaluru News: ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಲ್ತುಳಕ್ಕೆ 11 ಜನ ಸಾವನ್ನಪ್ಪಿದ್ದು, ಹಲವರು ಅಸ್ವಸ್ಥಗ“ಂಡಿದ್ದರು. ಇದೇ ಘಟನೆಯ ಕರಾಳತೆಯನ್ನು ರ್ಯಾಪರ್ ಚಂದನ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ಇವತ್ತು ಬೆಳಿಗ್ಗೆಯಿಂದ ತುಂಬ ಖುಷಿಯಾಗಿದ್ದೆ, 18 ವರ್ಷಗಳಿಂದ ಕಾದಿದ್ದ ದಿನ ಬಂದಿದೆ ಅಂತಾ. ನಾನು ಕೂಡ ಆರ್ಸಿಬಿ ಸಂಭ್ರಮಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ಹೋಗಿ ಬಂದೆ. ಗೇಟ್ ನಂಬರ್ 3ಕ್ಕೆ ಹೋಗ್ಲಿಕ್ಕೆ ನನಗೆ ಪಾಸ್ ಸಿಕ್ಕಿತ್ತು. ಆದರೆ ಗೇಟ್ ದಾಟಿ ಅಲ್ಲಾಾ, ಅದರ ಹತ್ತಿರವೂ ನನಗೆ ಹೋಗಲು ಸಾಧ್ಯವಾಗಲಿಲ್ಲ. ಅಷ್ಟು ಜನಜಂಗುಳಿ ಇತ್ತು. ಅಲ್ಲಿಂದ ಹೇಗೋ ಮಾಡಿ ಗೇಟ್ ನಂಬರ್ 10ರ ಬಳಿ ಬಂದೆ.ಅಲ್ಲಿ ಇನ್ನೂ ತುಂಬಾ ರಶ್ ಇತ್ತು. ಈ ವೇಳೆ ನನಗೇ ಉಸಿರುಗಟ್ಟಿದ ಹಾಗಾಗಿತ್ತು ಅಂತಾ ಚಂದನ್ ಶೆಟ್ಟಿ ತಮ್ಮ ಅನುಭವ ಹೇಳಿಕ“ಂಡಿದ್ದಾರೆ.

ಆ 11 ಜೀವಗಳು ಕಾಲ್ತುಳಿತಕ್ಕೆ ಸಿಲುಕಿ ಎಷ್ಟು ನರಳಿ ಸತ್ತಿರಬಹುದು ಅನ್ನೋದನ್ನ ನಾನು ಊಹಿಸಬಲ್ಲೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಕೇಳಿಕ“ಳ್ಳುತ್ತೇನೆ. ತುಂಬಾ ಬೇಜಾರಾಗುತ್ತಿದೆ. ಯಾರು ಹೊಣೆ ಅಂತಾ ಹೇಳಲು ತುಂಬಾ ಕಷ್ಟ. 18 ವರ್ಷಗಳ ನಂತರ ಕಪ್ ಗೆದ್ದ ಸಂಭ್ರಮದ ಎಕ್ಸೈಟ್ಮೆಂಟ್ ಈ ರೀತಿ ಇರತ್ತೆ ಅಂತಾ ಯಾರಿಗೂ ಗ“ತ್ತಾಗಲಿಲ್ಲ ಅನ್ಸತ್ತೆ. ಆರಾಮವಾಗಿ ಶನಿವಾರ. ರವಿವಾರ ಈ ಕಾರ್ಯಕ್ರಮ ಮಾಡಬಹುದಿತ್ತು. ಆದರೆ ಇನ್ನೂ ಯಾರು ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇದ್ದೀರಿ ಅವರೆಲ್ಲರೂ ಬೇಗ ಹುಷಾರಾಗಿ ಬರಲಿ, ಮತ್ತು ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬಯಸುತ್ತೇನೆ ಎಂದು ಚಂದನ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

- Advertisement -

Latest Posts

Don't Miss