Sports News: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಕಪ್ ಗೆದ್ದ ಸಂಭ್ರಮದ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗ“ಂಡಿದ್ದಾರೆ.
ಇದಕ್ಕೆಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರವೇ ನೇರ ಜವಾಬ್ದಾರಿ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ಈ ಬಗ್ಗೆ ಜೆಡಿಎಸ್ ಮಾಡಿದ ಸಾಲು ಸಾಲು Tweet ಇಂತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದು ಅತ್ಯಂತ ದುಃಖ ತಂದಿದೆ. ಈ ಅಮಾಯಕರ ಸಾವಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ. ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದೇ ಈ ದುರಂತಕ್ಕೆ ಕಾರಣ. ಸೂಕ್ತ ಭದ್ರತೆ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವೈಫಲ್ಯ ಅನುಭವಿಸಿರುವುದು ಸ್ಪಷ್ಟ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ಅವರ ಪ್ರಚಾರ ಹಾಗೂ ಕ್ರೆಡಿಟ್ ತೆಗೆದುಕೊಳ್ಳುವ ಹಪಾಹಪಿಗೆ ಅಮಾಯಕರು ಪ್ರಾಣ ಕಳೆದುಕೊಳ್ಳುವಂತೆ ಆಗಿರುವುದು ದುರದೃಷ್ಟಕರ. ಮೃತರಿಗೆ ನಮ್ಮ ತೀವ್ರ ಸಂತಾಪಗಳು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ ಸಂತಾಪಗಳು ಮತ್ತು ಸಾಂತ್ವನಗಳಿಂದ ಕಳೆದುಹೋದ 11 ಜೀವಗಳು ಮರಳಿ ಬರುವುದಿಲ್ಲ. ಈ ದುರಂತ ಘಟನೆಗೆ ನೀವೇ ನೇರ ಹೊಣೆ. ನಿಮ್ಮ ಅಸಮರ್ಥತೆ ಮತ್ತು ನಿರ್ಲಕ್ಷ್ಯ ಸಾಬೀತಾಗಿದೆ. ಅಮಾಯಕರ ಸಾವಿಗೆ ನ್ಯಾಯ ಸಿಗಬೇಕಾದರೆ ಮೊದಲು ನೀವು ಬೆಂಗಳೂರು ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ಕೊಡಿ. ಕಾಂಗ್ರೆಸ್ಸೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಇಂತಹ ದುರ್ಘಟನೆಗಳಾದ ಸಂದರ್ಭದಲ್ಲಿ ಅಲ್ಲಿನ ಸಿಎಂ ಮತ್ತು ಸಚಿವರುಗಳ ರಾಜೀನಾಮೆಗೆ ಆಗ್ರಹಿಸುವ ನೀವು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ದುರಂತ ಘಟನೆಯ ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ #RCB ತಂಡದ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಮಾಡಬಹುದಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ಸರ್ಕಾರ ವಿಧಾನಸೌಧದ ಮುಂದೆ ಆತುರಾತುರವಾಗಿ ಕಾರ್ಯಕ್ರಮ ಆಯೋಜಿಸಿ ಆರ್ಸಿಬಿ ತಂಡದ ಜೊತೆ ಸಿಎಂ, ಡಿಸಿಎಂ, ಸಚಿವರು ಮತ್ತವರ ಮಕ್ಕಳ ಫೋಟೋ ಶೂಟ್ ಶೋಕಿಗೆ ಮುಗ್ದರು ಪ್ರಾಣ ಕಳೆದುಕೊಂಡಿರುವುದು ಘೋರ ದುರಂತ. ವಿಧಾನಸೌಧ ಮುಂದೆಯೇ ಸರ್ಕಾರದ ಆಡಳಿತ ಯಂತ್ರ ಬೀಡು ಬಿಟ್ಟಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಹತ್ತಾರು ಸಾವಿರ ಸಂಖ್ಯೆಯಲ್ಲಿ ಆರ್ಸಿಬಿ ಅಭಿಮಾನಿಗಳು ಸೇರಿದ್ದ ವೇಳೆ ಸೂಕ್ತ ಬಿಗಿ ಬಂದೋಬಸ್ತ್ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವುದು ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಜಗಜ್ಜಾಹೀರುಗೊಳಿಸಿದೆ. ಕಾಲ್ತುಳಿತ ದುರಂತದಲ್ಲಿ 11 ಜನರ ಸಾವಿಗೆ ಡಿಸಿಎಂ ಡಿಕೆಶಿಯೇ ಹೊಣೆಹೊರಬೇಕು.
- ಕೆಕೆಆರ್ 2 ದಿನಗಳ ನಂತರ ಕೊಲ್ಕತ್ತಾದಲ್ಲಿ ವಿಜಯ ಪರೇಡ್ ನಡೆಸಿತು
- ಮುಂಬೈ 2 ದಿನಗಳ ಬಳಿಕ ವಿಜಯೋತ್ಸವ ಮೆರವಣಿಗೆ ಆಯೋಜಿಸಿತು
- ಸಿಎಸ್‌ಕೆ 3 ದಿನಗಳ ನಂತರ ವಿಜಯದ ಪರೇಡ್ ನಡೆಸಿತು
- ಭಾರತ ತಂಡ 5 ದಿನಗಳ ನಂತರ ತಮ್ಮ ಟಿ -20 ವಿಶ್ವಕಪ್ ವಿಜಯೋತ್ಸವ ಮೆರವಣಿಗೆ ನಡೆಸಿತು