Bengaluru News: ಶಾಮನೂರು ಶುಗರ್ಸ್ ಕಾರ್ಖಾನೆಗೆ ಜಾಮೀನು ಮಂಜೂರು ಮಾಡಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ವಿಧಾನಮಂಡಲದ ಮೂರನೇ ಅದಿವೇಶನದಲ್ಲೂ ಉತ್ತರ ಸಿಕ್ಕಿಲ್ಲ. ಹೀಗಾಗಿ ಬಿ.ಪಿ.ಹರೀಶ್ ಅವರು ವಿಧಾನಸಭೆಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹರೀಶ್, ಸಭಾಧ್ಯಕ್ಷರೇ ಸತತ ಮೂರನೇಯ ಅಧಿವೇಶನದಲ್ಲಿ ನಾನು ಈ ಪ್ರಶ್ನೆ ಕೇಳಿದ್ದೇನೆ. ಈ ವರೆಗೆ ನನಗೆ ಉತ್ತರ ನೀಡಿಲ್ಲ. ಪ್ರಶ್ನೆಗಳ ಪಟ್ಟಿಯಲ್ಲೂ ಇಲ್ಲ. ಯಾವ ಕಾರಣದಿಂದ ಹೀಗೆ ಮಾಡಲಾಗುತ್ತಿದೆ. ಉತ್ತರ ಕೊಡದಂತೆ ತಡೆಯುತ್ತಿರುವವರು ಯಾರು..? ಎಂದು ಹರೀಶ್ ಪ್ರಶ್ನಿಸಿದ್ದಾರೆ.
ಶಾಮನೂರು ಸಕ್ಕರೆ ಕಾರ್ಖಾನೆಗೆ 50 ಎಕರೆ ಜಮೀನು ಮಂಜೂರು ಮಾಡಲಾಗಿದೆ. 20 ಎಕರೆ ಜಮೀನಿನಿಂದ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸಲಾಗಿದೆ. ಸರ್ಕಾರಿ ಜಮೀನು ಕೂಡ ಅಲ್ಲಿದೆ. 3.5 ಕೋಟಿ ರೂಪಾಯಿ ಪಾವತಿಸುವಂತೆ ನೋಟೀಸ್ ಕೊಟ್ಟರೂ, ಆ ದುಡ್ಡಿನ್ನು ಕಟ್ಟಲಾಗಿಲ್ಲ. ಆದರೂ ರೈತರ ಜಮೀನು ಕಿತ್ತು ಕಾರ್ಖಾನೆ ಕೊಡಲಾಗುತ್ತಿದೆ ಎಂದು ಹರೀಶ್ ಆರೋಪಸಿದ್ದಾರೆ.
ಇದು ಶಾಮರೂನು ಅವರ ಪರ ಇರುವ ವಿಷ ಅಂತಾ ನೀವೆಲ್ಲರೂ ಅವರ ಪರ ನಿಂತಿದ್ದೀರಾ..? ಎಂದು ಹರೀಶ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಭಾಧ್ಯಕ್ಷ ಯು.ಟಿ.ಖಾದರ್, ಈ ವಿಷಯದ ಬಗ್ಗೆ ನೀವು ಈಗಾಗಲೇ ನನ್ನನ್ನು ಭೇಟಿ ಮಾಡಿ, ಚರ್ಚಿಸಿದ್ದೀರಿ. ಈ ಬಗ್ಗೆ ಸಮಿತಿ ರಚಿಸಿದ್ದೇನೆ. ಅವರು ನೀಡುವ ವರದಿ ಆಧರಿಸಿ, ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.