www.karnatakatv.net:ದೀಪಾವಳಿ ಹಬ್ಬವನ್ನು ಗಮನದಲ್ಲಿ ಇಟ್ಟುಕೊಂಡು ಭಜರಂಗಿ2 ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಅಕ್ಟೋಬರ್ 29ರಂದು ಭಜರಂಗಿ2 ಚಿತ್ರಮಂದಿರಗಳಿಗೆ ಗ್ರ‍್ಯಾಂಡ್ ಎಂಟ್ರಿ ಕೊಟ್ಟಿತ್ತು. ಫಸ್ಟ್ ಡೇ ಫಸ್ಟ್ ಶೋ ನೋಡಿದ ಶಿವರಾಜ್‌ಕುಮಾರ್ ಫ್ಯಾನ್ಸ್ ಗಳು ಫುಲ್ ಖುಷಿಯಾಗಿದ್ದರು. ಕಥೆ, ಚಿತ್ರಕಥೆ, ಶಿವಣ್ಣನ ನಟನೆ, ಹರ್ಷ ನಿರ್ದೇಶಕನಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಅದರಲ್ಲೂ ಸಿನಿಮಾಗಾಗಿ ಬಳಸಿದ ಗ್ರಾಫಿಕ್ಸ್ ಕಂಡು ಥ್ರಿಲ್ ಆಗಿದ್ದರು.
ಫ್ಯಾನ್ಸ್ ಶೋ ಮುಗಿಯುತ್ತಿದ್ದಂತೆ ಭಜರಂಗಿ2 ತಂಡಕ್ಕೆ ಹಾಗೂ ಶಿವರಾಜ್‌ಕುಮಾರ್ ಅವರಿಗೆ ದೊಡ್ಡ ಆಘಾತವೇ ಎದುರಾಗಿತ್ತು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಸುದ್ದಿ ಬರಸಿಡಿಲಿನಂತೆ ಬಂದೆರಗಿತ್ತು. ಭಜರಂಗಿ2 ಬೊಂಬಾಟ್ ಅಂತಿದ್ದ ಶಿವಣ್ಣನ ಅಭಿಮಾನಿಗಳಲ್ಲಿ ಬೇಸರ ಆವರಿಸಿಕೊಂಡಿತ್ತು. ಅಂದಿನಿoದ ಭಜರಂಗಿ2 ಅಷ್ಟೇ ಅಲ್ಲದೆ ಇನ್ನಾವುದೆ ಸಿನಿಮಾ ನೋಡಲು ಪ್ರೇಕ್ಷಕರಿಗೆ ಮನಸ್ಸಾಗಿರಲಿಲ್ಲ. ಆದರೆ, ದೀಪವಳಿ ಹಬ್ಬದಂದು ಪುನೀತ್ ಸಾವಿನ ನೋವಿನಿಂದ ಹೊರಬಂದು, ಭಜರಂಗಿ೨ ಸಿನಿಮಾ ನೋಡುತ್ತಿದ್ದಾರೆ. ತೆರೆಕಂಡ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನವಾಗುತ್ತಿದೆ.
ಅಕ್ಟೋಬರ್ 29ರಂದು ಭಜರಂಗಿ2 ಸಿನಿಮಾ ಸುಮಾರು 350ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ಗ್ರ‍್ಯಾಂಡ್ ಓಪನಿಂಗ್ ಕಂಡಿದ್ದ ಸಿನಿಮಾ, ಫಸ್ಟ್ ಡೇ ಫಸ್ಟ್ ಶೋನೇ ಶೇ.90ರಷ್ಟು ಚಿತ್ರಮಂದಿರ ತುಂಬಿತ್ತು. ಆದರೆ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ದಿಢೀರ್ ನಿಧನದಿಂದ ಚಿತ್ರಮಂದಿರಕ್ಕೆ ಹೋಗುವ ಮನಸ್ಸು ಪ್ರೇಕ್ಷಕರಿಗೆ ಇರಲಿಲ್ಲ, ಇತ್ತ ಇಡೀ ಚಿತ್ರತಂಡ ಕೂಡ ಮಂಕಾಗಿತ್ತು. ಕಳೆದ ಎರಡು ದಿನಗಳಿಂದ ನಿಧಾನವಾಗಿ ಪ್ರೇಕ್ಷಕರು ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.
ಇದರ ಬಗ್ಗೆ ಚಿತ್ರದ ನಿರ್ದೇಶಕ ಎ.ಹರ್ಷ ಖುಷಿ ವ್ಯಕ್ತಪಡಿಸಿದ್ದಾರೆ. ಸಿನಿಮಾ ಮತ್ತೆ ಚೇತರಿಸಿಕೊಂಡು ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಬಗ್ಗೆ ಮಾಹಿತಿ ಹಂಚಿಕೊoಡಿದ್ದಾರೆ, ” ಭಜರಂಗಿ ಸಿನಿಮಾ ಸುಮಾರು 375 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಎರಡನೇ ವಾರ 15 ಚಿತ್ರಮಂದಿರಗಳು ಕಡಿಮೆ ಆಗಿರಬಹುದು. ಉಳಿದಂತೆ 350 ಚಿತ್ರಮಂದಿರಗಳಲ್ಲಿ 300 ಥಿಯೇಟರ್‌ಗಳು ದೀಪಾವಳಿ ಹಬ್ಬದಂದು ಹೌಸ್‌ಫುಲ್ ಆಗಿವೆ. ಈ ಬೆಳವಣೆಗೆ ನಮ್ಮಲ್ಲಿ ಮತ್ತೆ ಉತ್ಸಾಹ ತಂದಿದೆ. ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಇಡೀ ರಾಜ್ಯ ಕಂಗಾಲಾಗಿತ್ತು. ನಡೆಯಬಾರದ್ದು ನಡೆದು ಹೋಗಿತ್ತು. ಇಂತಹ ದು:ಖದ ಸಂದರ್ಭದಲ್ಲಿ ಸಿನಿಮಾ ನೋಡಿ ಅಂತ ಹೇಳುವುದು ಎಷ್ಟು ಸರಿ. ಜನರೇ ಮಂಕಾಗಿ ಹೋಗಿದ್ದರು. ಅವರು ಚಿತ್ರಮಂದಿರಕ್ಕೆ ಬರಲಿಲ್ಲ. ನಮಗೂ ಅವರನ್ನು ಕರೆಯುವ ಮನಸ್ಸು ಇರಲಿಲ್ಲ. ಆದರೆ ಭಾನುವಾರ ಸೆಕೆಂಡ್ ಶೋಯಿಂದಲೇ ನಿಧಾನವಾಗಿ ಚಿತ್ರಮಂದಿರಕ್ಕೆ ಬರಲು ಶುರು ಮಾಡಿದ್ದರು. ಬುಧವಾರ ಕೆಲವೆಡೆ ಹೌಸ್‌ಫುಲ್ ಆಗಿತ್ತು. ಆದರೆ, ಇವತ್ತು ಇಷ್ಟು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರು ಸಿನಿಮಾ ನೋಡ್ತಿರೋದು ಖುಷಿ ಕೊಟ್ಟಿದೆ.” ಎಂದು ಖುಷಿ ವ್ಯಕ್ತಪಡಿಸಿದ್ದಾರೆ ಹರ್ಷ.
ಸಿನಿಮಾ ಬಗ್ಗೆ ಶಿವಣ್ಣನೂ ರಿಪೋರ್ಟ್ ತೆಗೆದುಕೊಳ್ಳುತ್ತಿದ್ದಾರೆ’ “ಶಿವಣ್ಣನೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದೇನೆ. ಇಂತಹ ದು:ಖದ ಸಂದರ್ಭದಲ್ಲೂ ನಮಗೆ ಧೈರ್ಯ ತುಂಬುತ್ತಿದ್ದಾರೆ. ಶಿವಣ್ಣ ಮಾನಸಿಕವಾಗಿ ತುಂಬಾನೇ ಸ್ಟಾçಂಗ್ ಇದ್ದಾರೆ. ಭಜರಂಗಿ2 ಸಿನಿಮಾ ಹೇಗಿದೆ. ಪ್ರೇಕ್ಷಕರು ಥಿಯೇಟರ್‌ಗೆ ಬರುತ್ತಿದ್ದಾರಾ? ಅಂತ ಅವರೇ ವಿಚಾರಿಸಿಕೊಳ್ಳುತ್ತಿದ್ದಾರೆ. ನಾನು ನಿರಂತರವಾಗಿ ಶಿವರಾಜ್‌ಕುಮಾರ್ ಅವರೊಂದಿಗೆ ಮಾತಾಡುತ್ತಿದ್ದೇನೆ. ಸಿನಿಮಾ ಚೆನ್ನಾಗಿ ಆಗುತ್ತೆ ಅಂತ ಧೈರ್ಯ ತುಂಬಿದ್ದಾರೆ.” ಎಂದು ನಿರ್ದೇಶಕ ಹರ್ಷ ಹೇಳಿದ್ದಾರೆ.
ಇನ್ನೂ ಕಲೆಕ್ಷನ್ ವಿಷಯದಲ್ಲಿ ಭಜರಂಗಿ2 ಸಿನಿಮಾಗೆ ಮೊದಲವಾರ ಸ್ವಲ್ಪ ಹಿನ್ನಡೆಯಾದರು, ಎರಡನೆ ವಾರದಿಂದ ಕೊಂಚ ಚೇತರಿಕೆ ಕಾಣುತ್ತಿದೆ ಎನ್ನಲಾಗುತ್ತಿದೆ ಚಿತ್ರತಂಡ.
ರೂಪೇಶ್, ಫಿಲಂ ಬ್ಯೂರೋ, ಕರ್ನಾಟಕ ಟಿವಿ.