Monday, December 23, 2024

Latest Posts

ಮುಂಬೈ ವಿರುದ್ದ ಕರ್ನಾಟಕಕ್ಕೆ ಭರ್ಜರಿ ಜಯ..!

- Advertisement -

ತಿರುವನಂತಪುರಂ : ವಿಜಯ್ ಹಜಾರೆ ಟೂರ್ನಿಯ  ತನ್ನ ಮೂರನೇ ಪಂದ್ಯದಲ್ಲಿ ಕರ್ನಾಟಕ  ತಂಡವು ಮುಂಬೈ ವಿರುದ್ದ ಜಯ ಸಾಧಿಸಿದೆ. ಟಾಸ್ ಗೆದ್ದ ಮುಂಬೈ ನಾಯಕ ಶಂಸ್ ಮುಲಾನಿ ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ಮುಂಬೈಗೆ ಯಶಸ್ವಿ ಜೈಸ್ವಾಲ್ ಹಾಗೂ ಅರ್ಮಾನ್ ಜಾಫರ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 95 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಉತ್ತಮ ಓಪನಿಂಗ್ ನೀಡಿದ್ದರು. ಈ ನಡುವೆ 43 ರನ್​ಗಳಿಸಿದ್ದ ಅರ್ಮಾನ್ ಜಾಫರ್ ಮೊದಲಿಗರಾಗಿ ಹೊರನಡೆದರೆ, ಮತ್ತೊಂದೆಡೆ ಯಶಸ್ವಿ ಜೈಸ್ವಾಲ್ 61 ಅರ್ಧಶತಕ ಬಾರಿಸಿ ಮಿಂಚಿದರು.ಇನ್ನು ಸೂರ್ಯಕುಮಾರ್ ಯಾದವ್ 8 ಹಾಗೂ ಶಂಸ್ ಮುಲಾನಿ 9 ಅವರನ್ನು ಔಟ್ ಮಾಡುವ ಮೂಲಕ ಪ್ರವೀಣ್ ದುಬೆ ಕರ್ನಾಟಕಕ್ಕೆ ಬ್ಯಾಕ್ ಟು ಬ್ಯಾಕ್ ಯಶಸ್ಸು ತಂದುಕೊಟ್ಟರು. ಆ ಬಳಿಕ ಸಂಪೂರ್ಣ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಕರ್ನಾಟಕ ಬೌಲರುಗಳು ರನ್​ ಗತಿಯನ್ನು ನಿಯಂತ್ರಿಸಿದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ತಮೊರೆ ಅಜೇಯ 46 ರನ್​ ಬಾರಿಸುವ ಮೂಲಕ ಮುಂಬೈ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 208 ರನ್​ ಕಲೆಹಾಕಿದರು. ಕರ್ನಾಟಕ ಪರ ಪ್ರವೀಣ್ ದುಬೆ 10 ಓವರ್​ನಲ್ಲಿ ಕೇವಲ 29 ರನ್​ ನೀಡಿ 4 ವಿಕೆಟ್ ಪಡೆದು ಮಿಂಚಿದರು.

209 ರನ್​ಗಳ ಸಾಧಾರಣ ಗುರಿ ಪಡೆದ ಕರ್ನಾಟಕಕ್ಕೆ ಆರಂಭಿಕರಾದ ರವಿ ಕುಮಾರ್ ಸಮರ್ಥ್ ಹಾಗೂ ರೋಹನ್ ಕದಮ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ 25 ಓವರ್​ಗಳಲ್ಲಿ 95 ರನ್​ ಕಲೆಹಾಕಿದ ಈ ಜೋಡಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಹಂತದಲ್ಲಿ ಕದಮ್ 44 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಸಿದ್ಧಾರ್ಥ್ ಕೇವಲ 17 ರನ್​ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಮನೀಷ್ ಪಾಂಡೆ 5 ವಿಕೆಟ್ ರನ್​ಗಳಿಸಿ ಕೈಚೆಲ್ಲಿದರು. ಇದಾಗ್ಯೂ ಮತ್ತೊಂದೆಡೆ ರವಿ ಕುಮಾರ್ ಸಮರ್ಥ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.ಕರುಣ್ ನಾಯರ್  ಜೊತೆಗೂಡಿ 77 ರನ್​ಗಳ ಜೊತೆಯಾಟವಾಡಿದ ರವಿ ಕುಮಾರ್ ಸಮರ್ಥ್ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಅಂತಿಮವಾಗಿ 129 ಎಸೆತಗಳಲ್ಲಿ 9 ಬೌಂಡರಿಯೊಂದಿಗೆ ಅಜೇಯ 96 ರನ್​ ಬಾರಿಸಿದ ರವಿ ಕುಮಾರ್ ಸಮರ್ಥ್ 45.3 ಓವರ್​ಗಳಲ್ಲಿ ತಂಡವನ್ನು ಗುರಿ ತಲುಪಿಸಿದರು. ಇದರೊಂದಿಗೆ 3 ವಿಕೆಟ್ ಕಳೆದುಕೊಂಡು 211 ರನ್​ಗಳಿಸುವ ಮೂಲಕ ಕರ್ನಾಟಕ ತಂಡವು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

- Advertisement -

Latest Posts

Don't Miss