Bollywood News: ಇನ್‌ಸ್ಟಾಗ್ರಾಮ್‌ನಲ್ಲಿ ಸೆಲೆಬ್ರಿಟಿಗಳ ಹೆಸರಿನ ನಕಲಿ ಖಾತೆ ಸೃಷ್ಟಿಸುವುದು ಕಾಮನ್. ಆದರೆ ಹೀಗೆ ನಕಲಿ ಖಾತೆ ಸೃಷ್ಟಿಸಿ, ಅದಕ್ಕೆ ಬ್ಲೂಟಿಕ್ ಖರೀದಿಸಿ, ಇದು ಆ ಸೆಲೆಬ್ರಿಟಿಯದ್ದೇ ಖಾತೆ ಎನ್ನುವ ರೀತಿ ಬಿಂಬಿಸಿ, ಹಣ ಪಡೆದು ಮೋಸ ಮಾಡುವ ಕಾಲಸ ಶುರುವಾಗಿದೆ.
ಸಾಮಾನ್ಯ ಜನರ ಇನ್ನೊಂದು ಅಕೌಂಟ್ ಓಪೆನ್ ಮಾಡಿ, ಅದರಲ್ಲಿ ಅಶ್ಲೀಲವಾಗಿ ಪೋಸ್ಟ್ ಹಾಕುವುದು, ದುಡ್ಡು ಹೊಡೆಯುವುದೆಲ್ಲ ಆಗಿದೆ. ಆದರೆ ಸೆಲೆಬ್ರಿಟಿಗಳಿಗೂ ಈ ರೀತಿಯಾಗಿ ಮಾಡಲಾಗುತ್ತಿದ್ದು, ಬಾಲಿವುಡ್ ನಟಿ ವಿದ್ಯಾಬಾಲನ್ ಹೆಸರಿನಲ್ಲಿ ಫೇಕ್ ಇನ್‌ಸ್ಟಾ ಅಕೌಂಟ್ ಓಪೆನ್ ಮಾಡಿ, ಕಳ್ಳರು ಹಣ ಕೇಳುತ್ತಿದ್ದಾರೆನ್ನಲಾಗಿದೆ.
ಈ ಬಗ್ಗೆ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿರುವ ವಿದ್ಯಾ ಬಾಲನ್, ನನನ್ನ ಹೆಸರಿನಲ್ಲಿ ನಕಲಿ ಖಾತೆ ಓಪೆನ್ ಮಾಡಿ, ಜನರ ಬಳಿ ದುಡ್ಡು ಕೇಳಿ, ನನ್ನ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಇಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ವಿದ್ಯಾಬಾಲನ್ ಮನವಿ ಮಾಡಿದ್ದಾರೆ.
ಕ್ಲಾಸಿನಲ್ಲಿ ಮೊಬೈಲ್ ಬಳಕೆ ನಿಷೇಧ ಮಾಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್