Big relief ಚಿತ್ರಮಂದಿರಗಳಿಗೆ ಫುಲ್ ಹೌಸ್ ಪ್ರದರ್ಶನಕ್ಕೆ ಅವಕಾಶ..!

ಚಿತ್ರಮಂದಿರಗಳಿಗೆ ಬಿಗ್ ರಿಲೀಫ್ (Big relief) ಸಿಕ್ಕಿದಂತಾಗಿದೆ. ಕೊರೋನಾ (corona) ಕಾರಣದಿಂದಾಗಿ ರಾಜ್ಯದಲ್ಲಿ ನೈಟ್ ಕರ್ಫ್ಯೂ (Night curfew) ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ತರಲಾಗಿತ್ತು. ಇದೇ ವೇಳೆ ಚಿತ್ರಮಂದಿರಗಳಿಗೂ ಸಹ 50:50 ರೂಲ್ಸ್ (50:50 Rules also for theaters) ಜಾರಿಗೆ ತಂದಿದ್ದರು. ಇದರಿಂದ ಸಿನಿಮಾರಂಗಕ್ಕೆ ಬಾರಿ ಹೊಡೆದು ಉಂಟಾಗಿತ್ತು. ಈಗ ಇದಕ್ಕೆಲ್ಲಾ ಬಿಗ್ ರಿಲೀಫ್ ಸಿಕ್ಕಿದಂತಾಗಿದೆ. ಚಿತ್ರ ಮಂತ್ರಿಗಳಿಗೆ ಶೇಕಡ 100 ರಷ್ಟು ಭರ್ತಿಗೆ ಅವಕಾಶ ಮಾಡಿಕೊಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ (Film Chamber of Commerce) ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇಂದು ಇದರ ಬಗ್ಗೆ ಚರ್ಚೆ ನಡೆಸಿದ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ನಾಳೆಯಿಂದ ಚಿತ್ರ ಮಂತ್ರಿಗಳಲ್ಲಿ ಫುಲ್ ಹೌಸ್ ಪ್ರದರ್ಶನಕ್ಕೆ ಅವಕಾಶ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಕೆ ಸುಧಾಕರ್ (Health Minister K Sudhakar) ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗಿದೆ, ನಾಳೆಯಿಂದ ಎಲ್ಲಾ ಚಿತ್ರ ಮಂದಿರಗಳಲ್ಲಿ 100 ರಷ್ಟು ಸೀಟು ಭರ್ತಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಬಿಡುಗಡೆಗೆ ಸಜ್ಜಾಗಿದೆ ಎಂದಿದ್ದ ಕನ್ನಡ ಸಿನಿಮಾಗಳು ನಿಟ್ಟುಸಿರು ಬಿಡುವಂತಾಗಿದೆ. ಇನ್ನು ಎಲ್ಲಾ ಚಿತ್ರಮಂದಿರಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು, ಚಿತ್ರಮಂದಿರಗಳ ಒಳಗಡೆ ತಿಂಡಿ ತಿಳಿದುಕೊಳ್ಳಲು ಅವಕಾಶವಿಲ್ಲ ಎಂದು ಹೇಳಲಾಗಿದೆ.

About The Author