ಬಿಗ್‌ಬಾಸ್ ಸೀಸನ್ 9ರಲ್ಲಿ ವಿನ್ನರ್ ಆಗಿರುವ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ, ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಈ ವೇಳೆ ವೀಕೆಂಡ್‌ನಲ್ಲಿ ಕಿಚ್ಚಾ ಸುದೀಪ್ ಬರುವ ಬಗ್ಗೆ ಮಾತನಾಡಿದ ರೂಪೇಶ್ ಶೆಟ್ಟಿ, ಅವರು ಬಂದಾಗ ಹೇಗೆ ಫೀಲ್ ಆಗುತ್ತಿತ್ತು ಅಂತಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ರೂಪೇಶ್, ಮೊದಲ ಸಲ ವೀಕೆಂಡ್ ಬಂದಾಗ, ಕಿಚ್ಚ ಸುದೀಪ್ ಸರ್ ಬರ್ತಾರೆ, ನಮ್ಮೆಲ್ಲರ ಹೆಸರು ತೊಗೊಂಡು ಮಾತಾಡ್ತಾರೆ ಅಂತಾ ಖುಷಿಯಾಗ್ತಿತ್ತು. ಆದ್ರೆ ಅವರು ವೀಕೆಂಡ್‌ನಲ್ಲಿ ನಾವು ವಾರದ ದಿನಗಳಲ್ಲಿ ಮಾಡಿದ ತಪ್ಪುಗಳ ಬಗ್ಗೆ ಹೇಳುತ್ತಿದ್ದರು. ಹಾಗಾಗಿ ನಂತರದ ದಿನಗಳಲ್ಲಿ, ಅವರು ಬರ್ತಾರೆ ಅಂದ್ರೆ, ನಾನು ಈ ವಾರ ಏನು ತಪ್ಪು ಮಾಡಿದ್ದೀನಿ ಅಂತಾ ಯೋಚಿಸೋಕ್ಕೆ ಶುರು ಮಾಡುತ್ತಿದ್ದೆ.
ಆದ್ರೆ ಬರುಬರುತ್ತ ನನಗೆ ಅರ್ಥವಾಗಿದ್ದೇನೆಂದರೆ, ನಾನು ಮಾಡಿದ ತಪ್ಪಿಗೆ ಅವರು ನಮ್ಮನ್ನು ಬೈಯ್ಯುತ್ತಿರಲಿಲ್ಲ. ಬದಲಾಗಿ ಹೊರಗಡೆ ಜನ ನಮ್ಮ ಬಗ್ಗೆ ಏನು ಮಾತನಾಡುತ್ತಿರಬಹುದು ಅನ್ನೋ ಬಗ್ಗೆ ಹಿಂಟ್ ಕೊಡ್ತಿದ್ರು. ಮತ್ತು ಅದನ್ನು ನಾವು ಸರಿಪಿಡಿಸಿಕೊಂಡು ಹೋಗಬೇಕು ಅನ್ನೋ ಸೂಚನೆ ಕೊಡ್ತಿದ್ರು. ನಾನು ಹೇಗೆ ಆಟ ಆಡ್ತಾ ಇದೀನಿ, ನಾನು ಹೇಗೆ ಇರಬೇಕು ಅನ್ನೋ ಬಗ್ಗೆ ಅವರು ಸೂಚನೆ ಕೊಡ್ತಿದ್ದಾರೆ ಅಂತಾ ನನಗೆ ಆಮೇಲೆ ಗೊತ್ತಾಯ್ತು. ನಾನು ಚೆನ್ನಾಗಿ ಆಡಿದ್ದೇನೆಂದು ಜನಾ ಹೇಳ್ತಾರೆ ಅದಕ್ಕೆ ಸುದೀಪ್ ಸರ್ ಮಾರ್ಗದರ್ಶನಾನೇ ಕಾರಣ ಅಂತಾ ರೂಪೇಶ್ ಹೇಳಿದ್ದಾರೆ.
ಚಳಿಗಾಲದಲ್ಲಿ ಯಥೇಚ್ಛವಾಗಿ ದೊರೆಯುವ ಪ್ಲಮ್ ಹಣ್ಣು..ಹಲವು ಆರೋಗ್ಯಕಾರಿ ಲಾಭಗಳು..ಒಮ್ಮೆ ನೋಡಿ..!