Bigg Boss News: ಬಿಗ್ಬಾಸ್ ಸೀಸನ್ 10 ಟ್ರೋಫಿಯನ್ನು ಡಿಸರ್ವ್ ಮಾಡುವ ಕಂಟೆಸ್ಟೆಂಟ್ ಕಾರ್ತಿಕ್ ಎಂಬುದು ಹಲವರ ಮಾತಾಗಿತ್ತು. ಅದೇ ರೀತಿ ಕಾರ್ತಿಕ್ ಫ್ಯಾನ್ಸ್ ಅವರ ಕೈ ಬಿಡದೇ, ಅವರಿಗೆ ಓಟ್ ಮಾಡಿ, ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಆಗಿ ಮಾಡಿದ್ದಾರೆ. ಸದ್ಯ ಟ್ರೋಫಿ ಹಿಡಿದು ಕಾರ್ತಿಕ್ ವಿನ್ನರ್ ಆಗ ಬೀಗಿದ್ದಾರೆ.
ಮೊದಲು ಬಿಗ್‌ಬಾಸ್ ಮನೆಗೆ ಹೋಗುವಾಗ, ಸಮರ್ಥರು ಮತ್ತು ಅಸಮರ್ಥರು ಎಂದು ವಿಂಗಡಣೆ ಮಾಡಲಾಗಿತ್ತು. ಅರ್ಧ ಜನಕ್ಕೆ, ಆಡಿಯನ್ಸ್ ಬಿಗ್‌ಬಾಸ್ ಮನೆಗೆ ಹೋಗಲು ಇವರು ಸಮರ್ಥರು ಎಂದು ಓಟ್ ಕೊಟ್ಟು ಕಳಿಸಿದ್ದರು. ಆದರೆ ಇನ್ನರ್ಧ ಜನಕ್ಕೆ, ಅಸಮರ್ಥರು, ಅವರು ಬಿಗ್‌ಬಾಸ್ ಮನೆಗೆ ಹೋಗಲು ಲಾಯಕ್ಕಿಲ್ಲದವರು ಎಂದು ಆಡಿಯನ್ಸ್ ಓಟ್ ಮಾಡಿದ್ದರು.
ಆ ಅಸಮರ್ಥರಲ್ಲಿ ಟಾಪ್ 3ಯಲ್ಲಿ ಬಂದಿದ್ದ ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಕೂಡ ಇದ್ದರು. ಬಿಗ್ಬಾಸ್ ಮನೆಗೆ ಅಸಮರ್ಥರಾಗಿ ಹೋಗಿದ್ದವರಲ್ಲಿ ಮೂವರು ಟಾಪ್ ತ್ರೀಗೆ ಬಂದಿದ್ದು ವಿಶೇಷವೇ ಸರಿ. ಹೀಗೆ ಅಸಮರ್ಥರು ಎನ್ನಿಸಿಕೊಂಡು ಬಂದಿದ್ದ ಕಾರ್ತಿಕ್ ಕೂಡ, ತಮ್ಮ ಟಾಕ್ಸ್ ಪರ್ಫಾಮೆನ್ಸ್, ಆ್ಯಕ್ಟಿಂಗ್ ಸ್ಕಿಲ್ಸ್, ಬುದ್ಧಿವಂತಿಕೆಯಿಂದ ಫೈನಲ್‌ಗೆ ಬಂದು ತಲುಪಿದರು.
ಇನ್ನು ಸಂಗೀತಾ ಶೃಂಗೇರಿ ಜೊತೆ ಸ್ನೇಹದಲ್ಲಿದ್ದಾಗ, ಇದ್ದಕ್ಕಿದ್ದಂತೆ ಸಂಗೀತಾ ಜೊತೆ ಸ್ನೇಹ ಕಟ್ ಆಗಿತ್ತು. ಬಳಿಕ ಕಾರ್ತಿಕ್ ತಲೆ ಬೋಳಿಸಿಕೊಳ್ಳಬೇಕು ಎಂಬ ಟಾಸ್ಕ್ ಕೊಟ್ಟಾಗ, ಜನ ಸಂಗೀತಾ ಮೇಲೆ ಕೋಪಗೊಂಡು, ಕಾರ್ತಿಕ್‌ಗೆ ಹೆಚ್ಚು ಸಪೋರ್ಟ್ ಮಾಡಲು ಶುರು ಮಾಡಿದರು. ಇದು ಕಾರ್ತಿಕ್‌ಗೆ ಪ್ಲಸ್ ಪಾಯಿಂಟ್ ಆಯಿತು. ಇದಾದ ಬಳಿಕವೇ ಕಾರ್ತಿಕ್ ಟಾಸ್ಕ್‌ನಲ್ಲಿ ಹೆಚ್ಚು ಬುದ್ಧಿ ಉಪಯೋಗಿಸಿ, ಆಡಲು ಶುರು ಮಾಡಿದ್ದು. ಹೀಗೆ ತಮ್ಮ ಸಾಮರ್ಥ್ಯದಿಂದ ಕಾರ್ತಿಕ್ ಬಿಗ್‌ಬಾಸ್ ಟ್ರೋಫಿ ಗೆದ್ದಿದ್ದಾರೆ.
ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಬಂದು ನಟಿಯರೊಂದಿಗೆ ಪಾರ್ಟಿ ಮಾಡಿದ Vicky Jain
ಬಾಯ್‌ಫ್ರೆಂಡ್‌ನೊಂದಿಗೆ ಶವವಾಗಿ ಪತ್ತೆಯಾದ ನೀಲಿ ಚಿತ್ರ ತಾರೆ Jesse Jane