Movie News: ಬಿಗ್‌ಬಾಸ್ ಕನ್ನಡ ಸೀಸನ್ 10 ವಿನ್ನರ್ ಕಾರ್ತಿಕ್ ಮಹೇಶ್, ಸಖತ್ ಬ್ಯುಸಿಯಾಗಿದ್ದಾರೆ. ಸರಳ ಪ್ರೇಮ ಕಥೆ ಸಿನಿಮಾದಲ್ಲಿ ಇವರದ್ದು ಪಾತ್ರಗಳಿದ್ದು, ಸಿನಿಮಾ ಪ್ರಮೋಷನ್‌ನಲ್ಲಿ ಕಾರ್ತಿಕ್ ಬ್ಯುಸಿಯಾಗಿದ್ದಾರೆ. ಅಲ್ಲದೇ, ಬಿಗ್‌ಬಾಸ್ ಟ್ರೋಫಿ ಹಿಡಿದು, ಹಲವು ಚಾನೆಲ್‌ಗಳ ಸಂದರ್ಶನವನ್ನೂ ಅಟೆಂಡ್ ಮಾಡಿದ್ದಾರೆ.
ಇದೀಗ ಅಳಿಯನಿಗಾಗಿ ಕೊಂಚ ಬಿಡುವು ಮಾಡಿಕೊಂಡಿರುವ ಕಾರ್ತಿಕ್, ತಂಗಿ ಮಗನನ್ನು ಎತ್ತಿ ಮುದ್ದಾಡಿದ್ದಾರೆ. ಈ ಬಗ್ಗೆ ಇನ್‌ಸ್ಟಾಖಾತೆಯಲ್ಲಿ ಪೋಸ್ಟ್ ಮಾಡಿರುವ ಕಾರ್ತಿಕ್ ಸಿಂಬಾ ಎಂದು ಬರೆದಿಕೊಂಡಿದ್ದಾರೆ.
ಬಿಗ್‌ಬಾಸ್ ಮನೆಯೊಳಗಿದ್ದಾಗ, ಫೈನಲಿಸ್ಟ್‌ಗಳು ಏನು ಕೇಳುತ್ತಾರೋ, ಬಿಗ್‌ಬಾಸ್ ಆ ಆಸೆ ಈಡೇರಿಸಿದ್ದರು. ಅದೇ ರೀತಿ ಕಾರ್ತಿಕ್, ನಾನು ನನ್ನ ತಂಗಿ ಮಗನನ್ನು ನೋಡಬೇಕು ಎಂದು ಹೇಳಿದ್ದರು. ಕೊನೆಗೆ ತಂಗಿ ಮಗುವನ್ನು ಬಿಗ್‌ಬಾಸ್ ತೋರಿಸಿದ್ದರು. ಬಿಗ್‌ಬಾಸ್‌ನಲ್ಲಿ ಪ್ರತಿಸ್ಪರ್ಧಿಯಾಗಿದ್ದ ತನಿಷಾ, ಕಾರ್ತಿಕ್ ತಂಗಿ ಮಗುವಿಗೆ ಗಿಫ್ಟ್ ಕೂಡ ನೀಡಿದ್ದರು.
ಚಾಮರಾಜನಗರ ಕಾರ್ತಿಕ್ ಅವರ ತಾಯಿಯ ತವರೂರು. ಅಲ್ಲೇ ಅವರ ತಂಗಿ ಮತ್ತು ಮಗು ಇರುವುದು. ಚಾಮರಾಜನಗರಕ್ಕೆ ಭೇಟಿ ನೀಡಿದ ಕಾರ್ತಿಕ್, ಅಳಿಯನ ಜೊತೆ ಸಮಯ ಕಳೆದಿದ್ದಾರೆ. ಇನ್ನು ಕೆಲ ಸಂದರ್ಶನಗಳಲ್ಲಿ ಕಾರ್ತಿಕ್, ನನ್ನ ಅಳಿಯ ನನಗೆ ಅದೃಷ್ಟ ತಂದುಕೊಟ್ಟಿದ್ದಾನೆ. ಹಾಗಾಗಿ ಅವನು ನನ್ನ ಲಕ್ಕಿ ಚಾರ್ಮ್ ಎಂದು ಹೇಳಿದ್ದಾರೆ.
ಇನ್ನು ಕಾರ್ತಿಕ್ ಬ್ಯುಸಿಯಾಗಿರುತ್ತಿದ್ದು, ಅವರ ಅಭಿಮಾನಿಗಳು ಅವರನ್ನು ಭೇಟಿಯಾಗಲು ಅವರ ಮನೆಯ ಬಳಿ ಬಂದು, ನಿರಾಸೆಯಾಗಿ ವಾಪಸ್ ಹೋಗುತ್ತಿದ್ದಾರಂತೆ. ಹಾಗಾಗಿ ಈ ಬಗ್ಗೆ ಇನ್‌ಸ್ಟಾಗ್ರಾಮ್ ಸ್ಟೇಟಸ್ ಹಾಕಿರುವ ಕಾರ್ತಿಕ್, ನಾನು ಇಲ್ಲದ ಸಮಯದಲ್ಲಿ ನನ್ನನ್ನು ನೋಡಲು ಬಂದು ನಿರಾಶರಾಗಿ ಹೋಗುತ್ತಿದ್ದೀರಿ. ನಿಮ್ಮ ಪ್ರೀತಿಯೇ ನನ್ನನ್ನು ಬ್ಯುಸಿ ಆಗಿರಿಸಿದೆ. ನಿಮಗಾಗಿ ಒಂದು ದಿನ ಮುಡಿಪಾಗಿಸಿರುವೆ. ಅತೀ ಶೀಘ್ರದಲ್ಲಿ ಅನೌನ್ಸ್ ಮಾಡುತ್ತೇನೆ. ಅಭಿಮಾನಿಗಳಿಂದ, ಅಭಿಮಾನಿಗಳಿಗಾಗಿ, ಅಭಿಮಾನಿಗಳಿಗೋಸ್ಕರ ಎಂದು ಬರೆದಿದ್ದಾರೆ.
ಮಿಸ್ಟರ್ ನಟ್ವರ್ ಲಾಲ್ ಟ್ರೇಲರ್ ಗೆ ಮೆಚ್ಚುಗೆ : ತನುಷ್ ಶಿವಣ್ಣ – ಸೋನಾಲ್ ಜೋಡಿಯ ಚಿತ್ರ ಫೆ. 23ಕ್ಕೆ ರಿಲೀಸ್




