Monday, July 22, 2024

Latest Posts

ಎಲ್ಲೂ ಜಾಗ ಸಿಗದೆ ಅತಂತ್ರರಾಗ್ತಾರಾ ಈ ಮೂವರು ಅತೃಪ್ತ ಶಾಸಕರು??

- Advertisement -

ಬೆಂಗಳೂರು: ಅತೃಪ್ತ ಶಾಸಕರಲ್ಲಿ ಮೂವರು ಶಾಸಕರನ್ನು ಮಾತ್ರ ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳಬೇಡಿ ಅಂತ ಬಿಜೆಪಿ ಕಾರ್ಯಕರ್ತರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಒತ್ತಾಯ ಹೇರುತ್ತಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಈ 3 ಶಾಸಕರು ಕಾಂಗ್ರೆಸ್ ನಲ್ಲೂ ಇರದೇ ಬಿಜೆಪಿಯಲ್ಲೂ ಸ್ಥಾನ ಸಿಗದೆ ಅತಂತ್ರ ಸ್ಥಿತಿ ತಲುಪಲಿದ್ದಾರಾ ಅನ್ನೋ ಮಾತು ಕೇಳಿ ಬರುತ್ತಿದೆ.

ಮೈತ್ರಿ ವಿರುದ್ಧ ಬೇಸರಗೊಂಡು ರಾಜೀನಾಮೆ ನೀಡಿ ಮುಂಬೈ ಸೇರಿರುವ ಶಾಸಕ ಪೈಕಿ ಮೂವರು ಶಾಸಕರು ಬಿಜೆಪಿ ಸೇರ್ಪಡೆಗೆ ಬಿಜೆಪಿ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ ಸೋಮಶೇಖರ್, ಕೆ.ಆರ್ ಪುರಂ ಕ್ಷೇತ್ರದ ಬೈರತಿ ಬಸವರಾಜು ಹಾಗೂ ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನರನ್ನು ಯಾವುದೇ ಕಾರಣಕ್ಕೂ ಬಿಜೆಪಿ ಸೇರಿಸಿಕೊಳ್ಳಬೇಡಿ ಅಂತ ಬಿಜೆಪಿ ಕಾರ್ಯಕರ್ತರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಒತ್ತಾಯ ಮಾಡುತ್ತಿದ್ದಾರೆ. ಇ-ಮೇಲ್ ಮತ್ತು ಟ್ವಿಟ್ಟರ್ ಮೂಲಕ ಈಗಾಗಲೇ ಸಾವಿರಾರು ಬಿಜೆಪಿ ಕಾರ್ಯಕರ್ತರು ಈ ಬಗ್ಗೆ ಮನವಿ ಮಾಡಿದ್ದು, ಈ ಮೂವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇರುವುದರಿಂದ ಇವರನ್ನು ಬಿಜೆಪಿ ಸೇರಿಸಿಕೊಳ್ಳಬೇಡಿ. ಇದರಿಂದಾಗಿ ಪಕ್ಷಕ್ಕೆ ಮುಜುಗರವುಂಟಾಗುವುದು ಖಚಿತ. ಅಷ್ಟೇ ಅಲ್ಲದೇ ಒಂದು ವೇಳೆ ಇವರು ಬಿಜೆಪಿ ಸೇರ್ಪಡೆಗೊಂಡರೆ ಬಿಜೆಪಿಯ ಇತರೆ ಮುಖಂಡರು ಇವರೊಂದಿಗೆ ವೇದಿಕೆ ಹಂಚಿಕೊಳ್ಳೋದಕ್ಕೂ ಮುಜುರಪಡುತ್ತಾರೆ ಅಂತ ಕಾರ್ಯಕರ್ತರು ಅಮಿತ್ ಶಾಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಈ ಮೂವರು ಶಾಸಕರಿಗೆ ಬಿಜೆಪಿಯಲ್ಲಿ ಸ್ಥಾನ ಸಿಗದೆ, ಒಂದು ವೇಳೆ ಅನರ್ಹಗೊಂಡರೆ ಕಾಂಗ್ರೆಸ್ ನಲ್ಲೂ ಇರಲಾಗದೇ ಅತಂತ್ರರಾಗ್ತಾರಾ ಅನ್ನೋದು ಇದೀಗ ಉದ್ಭವವಾಗಿರುವ ಪ್ರಶ್ನೆ.

ಉಲ್ಟಾ ಆಗುತ್ತಾ ಕುಮಾರಸ್ವಾಮಿ ಲೆಕ್ಕಾಚಾರ?? ಏನಾಗುತ್ತೆ ಮಂಗಳವಾರ? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=BTagA5xtEeM
- Advertisement -

Latest Posts

Don't Miss