Friday, December 27, 2024

Latest Posts

ಮೃತ ನೇಹಾ ಹಿರೇಮಠ್ ಮನೆಗೆ ಭೇಟಿ ನೀಡಿ, ಸಾಂತ್ವಾನ ಹೇಳಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

- Advertisement -

Hubballi: ಹುಬ್ಬಳ್ಳಿ: ಹುಬ್ಬಳ್ಳಿ ಕಾಂಗ್ರೆಸ್ ಕಾರ್ಪೋರೇಟರ್ ನಿರಂಜನಯ್ಯ ಅವರ ಪುತ್ರಿ ನೇಹಾಳನ್ನು ಫಯಾಜ್ ಎಂಬ ವ್ಯಕ್ತಿ ಕೊಲೆ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಹಿರಿಯ ನಾಯಕ, ಬಸನಗೌಡ ಪಾಟೀಲ್ ಯತ್ನಾಳ್ ಹುಬ್ಬಳ್ಳಿಯ ನೇಹಾ ನಿವಾಸಕ್ಕೆ ಭೇಟಿ ನೀಡಿದ್ದಾರೆ. ನೇಹಾ ತಂದೆ ತಾಯಿಗೆ ಶಾಸಕರು ಸಾಂತ್ವನ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದ ಯತ್ನಾಳ್, ಸಿದ್ದರಾಮಯ್ಯನವರಿಗೆ ಮಾನವೀಯತೆ ಇದ್ದರೇ ಅವರ ಹೇಳಿಕೆಯನ್ನು ವಾಪಸ್ ಪಡೆದು, ನೇಹಾ ಕುಟುಂಬದ ಕ್ಷಮೆಯಾಚಿಸಲಿ. ಮಗುವನ್ನು ಕಳೆದುಕೊಂಡು ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳುವುದು ಬಿಟ್ಟು ಓಲೈಕೆ ರಾಜಕಾರಣ ಮಾಡಬೇಡಿ ಎಂದಿದ್ದಾರೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪೊಲೀಸ್ ಎನ್ ಕೌಂಟರ್ ನಿಲ್ಲಿಸುವುದಾಗಿ ಹೇಳಿಕೊಂಡಿದೆ. ಆದರೆ, ಹುಬ್ಬಳ್ಳಿಯ ಘಟನೆ ಖಂಡಿಸುತ್ತಿರುವ ಕಾಂಗ್ರೆಸ್ ಸಚಿವರು, ಮುಖಂಡರು ಇಂತಹ ಘಟನೆಗೆ ಕಾರಣ ಆದವರನ್ನು ಎನ್ ಕೌಂಟರ್ ಮಾಡಬೇಕು ಎಂದು ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ನ ಸಚಿವರೇ ಪ್ರಣಾಳಿಕೆ ಓದಿಲ್ಲ ಅಥವಾ ಒಂದು ಕೋಮಿನ ಮತ ಸೆಳೆಯಲು ಪ್ರಣಾಳಿಕೆ ರಚಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಇವರ ಈ ರೀತಿಯಾದ ನಿಲುವುಗಳಿಂದಲೇ ಕರ್ನಾಟಕದಲ್ಲಿ ಕಾನೂನು-ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಯತ್ನಾಳ್ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನೇಹಾ-ಫಯಾಜ್ ಫೋಟೋ, ರೀಲ್ಸ್ ವೈರಲ್

ನಟಿ ಹರ್ಷಿಕಾ ಮತ್ತು ಭುವನ್ ಮೇಲೆ ಹಲ್ಲೆ ಯತ್ನ: ನಾವೇನು ಪಾಕಿಸ್ತಾನದಲ್ಲಿದ್ದೇವಾ..? ಎಂದು ಬೇಸರ..

ಇಂಥ ಕೆಲಸಕ್ಕೆ ಎನ್‌ಕೌಂಟರ್ ಕಾನೂನು ಬರಲೇಬೇಕು: ಸಚಿವ ಸಂತೋಷ್ ಲಾಡ್ ಆಗ್ರಹ

- Advertisement -

Latest Posts

Don't Miss