ಬಾಗಲಕೋಟೆ: ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡದೇ ನಿರ್ಲಕ್ಷ್ಯವಹಿಸಲಾಗುತ್ತಿದೆ ಅಂತ ಮೈತ್ರಿ ಸರ್ಕಾರದ ವಿರುದ್ಧ ಕಿಡಿ ಕಾರಿರೋ ಬಿಜೆಪಿ ಶಾಸಕ ಈಶ್ವರಪ್ಪ, ಜನ ನಿಮ್ಮನ್ನು ಯಾವ ಗುಂಡಿಯಲ್ಲಿ ಮುಚ್ಚುತ್ತಾರೋ ಗೊತ್ತಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ಶಾಸಕ ಕೆ.ಎಸ್ ಈಶ್ವರಪ್ಪ, ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಯತ್ತ ಜಿಲ್ಲಾ ಉಸ್ತುವಾರಿ ಸಚಿವರೂ ಗಮನ ಹರಿಸುತ್ತಿಲ್ಲ ಅಂತ ಆರೋಪಿಸಿದ್ರು. ಅಲ್ಲದೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಸಿಎಂ ಕುಮಾರಸ್ವಾಮಿ ಮೊದಲು ಪರಸ್ಪರ ಮಾತನಾಡಲಿ, ಕೊನೇ ಪಕ್ಷ ಅವರ ಪಕ್ಷದ ಬಗ್ಗೆಯಾದ್ರೂ ಚರ್ಚೆ ಮಾಡೋದಕ್ಕೆ ಮಾತನಾಡಲಿ ನೋಡೋಣ. ಅಭಿವೃದ್ಧಿಯ ಮಾತು ಆಮೇಲೆ ಅಂತ ಉಭಯ ನಾಯಕರ ನಡುವಿನ ಅಸಮಾಧಾನದ ಬಗ್ಗೆ ಟೀಕೆ ಮಾಡಿದ್ರು. ಅಲ್ಲದೆ ಜನ ನಿಮ್ಮನ್ನು ಯಾವ ಗುಂಡಿಯಲ್ಲಿ ಮುಚ್ಚುತ್ತಾರೋ ಗೊತ್ತಿಲ್ಲ ಅಂತ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಮಹಿಳೆಯರಿಗೆ ಸುಮಲತಾ ಕೊಡ್ತಿದ್ದಾರೆ ಸಿಹಿ ಸುದ್ದಿ..! ಮಿಸ್ ಮಾಡದೇ ಈ ವಿಡಿಯೋ ನೋಡಿ