ಇದೇ ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರೋ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹೊಸ ಜರ್ಸಿಯಲ್ಲಿ ಕಾಣಿಸಿಕೊಳ್ಳಲಿದೆ. ಇನ್ನು ಜರ್ಸಿ ತೊಟ್ಟು ಖಡಕ್ ಪೋಸ್ ಕೊಟ್ಟಿರೋ ಕೊಹ್ಲಿ ಬಾಯ್ಸ್ ಸಖತ್ತಾಗಿ ಕಾಣ್ತಿದ್ದಾರೆ.
ಭಾನುವಾರ ನಡೆಯಲಿರೋ ಭಾರತ- ಇಂಗ್ಲೆಂಡ್ ಹೈವೋಲ್ಟೇಜ್ ಪಂದ್ಯದಲ್ಲಿ ಜರ್ಸಿ ಬದಲಿಸಲಿದ್ದಾರೆ ಬ್ಲೂ ಬಾಯ್ಸ್. ಇಂಗ್ಲೆಂಡ್ ಜರ್ಸಿ ಹಾಗೂ ಟೀಂ ಇಂಡಿಯಾ ಜರ್ಸಿಯ ಬಣ್ಣ ನೋಡೋಕೆ ಒಂದೇ ರೀತಿಯಲ್ಲಿದ್ದು ಅನಾವಶ್ಯಕ ಗೊಂದಲ ಎದುರಾಗಬಾರದೆಂಬ ಉದ್ದೇಶದಿಂದ ಆರೆಂಜ್ ಜರ್ಸಿ ಆಯ್ಕೆ ಮಾಡಿಕೊಳ್ಳಲಾಗಿದೆ. ಬ್ಲೂ ಜರ್ಸಿ ತೊಟ್ಟು ವಿಶ್ವಕಪ್ ನಲ್ಲಿ ಸಾಲು ಸಾಲು ಗೆಲುವು ದಾಖಲಿಸಿರೋ ಟೀಂ ಇಂಡಿಯಾ, ಈ ಆರೆಂಜ್ ಜರ್ಸಿ ಮತ್ತಷ್ಟು ಅದೃಷ್ಟ ತಂದುಕೊಡುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.
ಜರ್ಸಿ ಯಾವುದಾದರೇನು ಭಾನುವಾರ ನಡೆಯೋ ಪಂದ್ಯದಲ್ಲಿ ಟೀಂ ಇಂಡಿಯಾ ಎಂದಿನಂತೆ ತನ್ನ ಸಾಮರ್ಥ್ಯ ತೋರಿ ಆಂಗ್ಲರ ಹೆಡೆಮುರಿ ಕಟ್ಟುತ್ತೆ ಅಂತಿದ್ದಾರೆ ದೇಶದ ಕ್ರಿಕೆಟ್ ಪ್ರೇಮಿಗಳು.
ಐಸಿಸಿ ಲಿಸ್ಟ್ ನಲ್ಲಿ ಮೊದಲ ಸ್ಥಾನ ಯಾರಿಗೆ?? ಮಿಸ್ ಮಾಡದೇ ಈ ವಿಡಿಯೋ ನೋಡಿ