Tuesday, July 16, 2024

Latest Posts

‘ರಾಮಲಿಂಗಾ ರೆಡ್ಡಿ ಬಂಡೆ ಇದ್ದಹಾಗೆ’- ಬಿಜೆಪಿ ಶಾಸಕ ವಿಶ್ವನಾಥ್

- Advertisement -

ಬೆಂಗಳೂರು: ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಒಂಥರಾ ಬಂಡೆ ಇದ್ದಹಾಗೆ. ಅವರ ನಿರ್ಧಾರ ಬದಲಿಸೋಕೆ ಸಾಧ್ಯವಿಲ್ಲ ಅಂತ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ನಿವಾಸಕ್ಕೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ವಿಶ್ವನಾಥ್, ನಾನು ರಾಜಕೀಯದ ಬಗ್ಗೆ ಚರ್ಚೆ ಮಾಡಲು ರಾಮಲಿಂಗಾರೆಡ್ಡಿಯವರನ್ನು ಭೇಟಿ ಮಾಡಿಲ್ಲ. ರೆಡ್ಡಿ ಸಂಘದ ಚುನಾವಣೆಗೆ ಕುರಿತಾಗಿ ಚರ್ಚಿಸಲು ಬಂದಿದ್ದೆ. ಇನ್ನು ರಾಮಲಿಂಗಾರೆಡ್ಡಿ ಬಿಜೆಪಿ ಸೇರ್ಪಡೆಯಾಗ್ತಾರಾ ಅನ್ನೋ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ರಾಮಲಿಂಗಾರೆಡ್ಡಿಯವರು ಒಂಥರಾ ಬಂಡೆ ಇದ್ದ ಹಾಗೆ. ಅವರು ಏನೇ ನಿರ್ಧಾರ ಮಾಡಿದರೂ ಅದನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಅಂತ ಬಿಜೆಪಿ ಶಾಸಕ ಎಚ್.ವಿಶ್ವನಾಥ್ ಹೇಳಿದ್ದಾರೆ.

ಇನ್ನು ವಿಶ್ವನಾಥ್ ಈ ಹೇಳಿಕೆಯಿಂದಾಗಿ, ರಾಮಲಿಂಗಾರೆಡ್ಡಿ ಬಿಜೆಪಿ ಸೇರೋ ನಿರ್ಧಾರ ಮಾಡಿದ್ದಾರೋ ಅಥವಾ ಕಾಂಗ್ರೆಸ್ ನಲ್ಲೇ ಉಳಿಯಲು ಇಚ್ಛಿಸಿದ್ದಾರೋ ಅನ್ನೋ ಗೊಂದಲ ಸೃಷ್ಟಿಸಿದೆ.

ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದಿಂದ ಯಾರಿಗೆ ಲಾಭ…?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=2sm–Kx0pDg
- Advertisement -

Latest Posts

Don't Miss