Sunday, March 3, 2024

Latest Posts

ರಾಜೀನಾಮೆ ವಾಪಸ್ ಪಡೆಯೋ ಸುಳಿವು ನೀಡಿದ ಕೈ ಶಾಸಕರು

- Advertisement -

ಬೆಂಗಳೂರು: ಸ್ಪೀಕರ್ ಕಚೇರಿಗೆ ಒಟ್ಟಿಗೆ ಬಂದು ರಾಜೀನಾಮೆ ನೀಡಿ ಹೋಗಿದ್ದ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಕೆ ಸುಧಾಕರ್ ಮತ್ತು ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ರಾಜೀನಾಮೆ ಹಿಂಪಡೆಯೋ ಬಗ್ಗೆ ಸುಳಿವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕಾಂಗ್ರೆಸ್ ನ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್, ನಾನು ಕೆಲ ಕಾರಣಗಳಿಂದ ರಾಜೀನಾಮೆ ನೀಡಿದ್ದೇನೆ. ನಾನು ಮತ್ತು ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಒಂದೇ ದಿನ ಬಂದು ರಾಜೀನಾಮೆ ನೀಡಿದ್ದೇವೆ. ಆದ್ರೆ ಈಗ ರಾಜೀನಾಮೆ ವಾಪಸ್ ಪಡೆಯುವಂತೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಸೇರಿದಂತೆ ಇತರೆ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಎಲ್ಲರೂ ನಮ್ಮ ಮನವೊಲಿಸುವ ಯತ್ನ ಮಾಡಿದ್ದಾರೆ ಅಂತ ಶಾಸಕ ಎಂಟಿಬಿ ಹೇಳಿದ್ರು. ಇನ್ನು ಶಾಸಕ ಸುಧಾಕರ್ ಎಲ್ಲಿದ್ದಾರೆ ಅನ್ನೋ ಕುರಿತಾಗಿ ಪ್ರತಿಕ್ರಿಯಿಸಿದ ಎಂಟಿಬಿ ನಾಗರಾಜ್, ಸುಧಾಕರ್ ಬೇರೆ ಎಲ್ಲೋ ಇದ್ದಾರೆ, ಅವರೊಂದಿಗೆ ಮಾತನಾಡಿ ರಾಜೀನಾಮೆ ಹಿಂಪಡೆಯೋ ಬಗ್ಗೆ ನಿರ್ಧಾರ ತಿಳಿಸುತ್ತೇವೆ. ಅಸಮಾಧಾನದಿಂದ ರಾಜೀನಾಮೆ ನೀಡಿರೋ ನಾವು ಕಾಂಗ್ರೆಸ್ ಪಕ್ಷದಲ್ಲೇ ಇರುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಬಳಿಕ ಮಾತನಾಡಿದ ಎಂಟಿಬಿ ನಾಗರಾಜ್, ಅಸಮಾಧಾನ ಎಲ್ಲಾ ಪಕ್ಷಗಳಲ್ಲಿಯೂ ಇದೆ. ಎಲ್ಲರೂ ಕುಳಿತು ಸಮಾಧಾನದಿಂದ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳೋದಕ್ಕೆ ಯತ್ನಿಸುತ್ತೇವೆ. ಸುಧಾಕರ್ ಜೊತೆಗೂ ಚರ್ಚಿಸಿ ಅವರ ಮನವೊಲಿಸೋ ನಿಟ್ಟಿನಲ್ಲಿ ಮಾತನಾಡುವೆ ಅಂತ ಹೇಳಿದ ಎಂಟಿಬಿ ನಾಗರಾಜ್, ತಮ್ಮ ರಾಜೀನಾಮೆ ವಾಪಸ್ ಪಡೆಯೋ ಬಗ್ಗೆ ಸುಳಿವು ನೀಡಿದ್ದಾರೆ. ಆದ್ರೆ ದಿನೇ ದಿನೇ ಬದಲಾಗುತ್ತಿರುವ ರಾಜಕೀಯ ಸನ್ನಿವೇಶದಿಂದಾಗಿ ಶಾಸಕರು ಇದರ ಹೊರತಾಗಿ ಬೇರೆ ನಿರ್ಧಾರ ಕೈಗೊಂಡರೂ ಆಶ್ಚರ್ಯವೇನಿಲ್ಲ.

ಉಲ್ಟಾ ಆಯ್ತಾ ಕುಮಾರಸ್ವಾಮಿ ಲೆಕ್ಕಾಚಾರ..? ಏನಾಗುತ್ತೆ ಮಂಗಳವಾರ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=BTagA5xtEeM
- Advertisement -

Latest Posts

Don't Miss