Sunday, September 8, 2024

Latest Posts

ದಲಿತ ಆದಿವಾಸಿ ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ: ಜಿಗ್ನೇಶ್ ಮೇವಾನಿ

- Advertisement -

Hubli News: ಹುಬ್ಬಳ್ಳಿ ಬಿಜೆಪಿ ಭದ್ರಕೋಟೆಯಾಗಿದ್ದರೂ ಕೂಡ, ಕಾಂಗ್ರೆಸ್ ಈ ಜಾಗದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.  ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ವಿಶ್ವಮಾನವರ ದಿನಾಚರಣೆ ಆಚರಿಸಲಾಗಿದ್ದು, ಹಲವು ಕಾಂಗ್ರೆಸ್ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಬಂದಿದ್ದು, ಇವರಲ್ಲಿ ಅಸೂಟಿ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಸಚಿವ ಸಂತೋಷ್ ಲಾಡ್, ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, ಕೋನರೆಡ್ಡಿ ಸೇರಿ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ಶಾಸಕ ಜಿಗ್ನೇಶ್ ಮೇವಾನಿ, ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಅಂಬೇಡ್ಕರ್ ಅಮೂಲ್ಯವಾದ ಸಂವಿಧಾನ ನೀಡಿದ್ದಾರೆ. ಜಾತಿ ನಿರ್ಮೂಲನೆಗೆ ಅವರು ಯತ್ನಿಸಿದರು. ಬಿಜೆಪಿಯವರು ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟರು. ಈ ವೇಳೆ ಮೋದಿ ಮಾತನಾಡಲಿಲ್ಲ. ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡೋದಾಗಿ ಹೇಳಿದ್ರು. ನಾಯಿ ಬೊಗಳುತ್ತಿರುತ್ತೆ ನಾವು ತಲೆ ಕೆಡಿಸಿಕೊಳ್ಳಲ್ಲ ಅಂದರು. ಇದೆಲ್ಲ ನೋಡಿದಾಗ ಬಿಜೆಪಿ ದೃಷ್ಟಿಯಲ್ಲಿ ದಲಿತರು ನಾಯಿಗೆ ಸಮಾನ ಎನ್ನುವಂತಾಗಿದೆ. ಹೀಗಾಗಿ ಮೋದಿ ಸರ್ಕಾರವನ್ನು ಕಿತ್ತು ಹಾಕಬೇಕಿದೆ ಎಂದು ಜಿಗ್ನೇಶ್ ಹೇಳಿದರು.

ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರಗಳಾಗಿವೆ. ದಲಿತ ಮತ್ತು ಆದಿವಾಸಿಗಳ ಸಂಖ್ಯೆ ಹೆಚ್ಚಿದೆ. ಅದಕ್ಕೆ ಅನುಗುಣವಾಗಿ ಅವರಿಗೆ ಸೌಲಭ್ಯಗಳು ಸಿಕ್ಕಿಲ್ಲ. ಎಲ್ಲ ರಂಗಳಲ್ಲಿಯೂ ದಲಿತ, ಆದಿವಾಸಿಗಳು ಹಿಂದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಾತಿ ಜನಗಣತಿ ಬಗ್ಗೆ ಮಾತನಾಡುತ್ತಿದೆ. ಬಿಜೆಪಿ ಅತಿ ಹೆಚ್ಚು ವಿರೋಧಿಸೋದು ಅಂಬೇಡ್ಕರ್ ಅವರನ್ನ. ಅಂಬೇಡ್ಕರ್ ರ ಸಂವಿಧಾನವನ್ನು ಬಿಜೆಪಿ ವಿರೋಧಿಸುತ್ತೆ. ದಲಿತ ಆದಿವಾಸಿ ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ ಎಂದು ಬಿಜೆಪಿ ವಿರುದ್ಧ ಜಿಗ್ನೇಶ್ ಮೇವಾನಿ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಗ್ಯಾರಂಟಿ ಶಾಶ್ವತ ಗ್ಯಾರಂಟಿ. ದೇಶ ಮತ್ತು ಬದುಕು ಕಟ್ಟುವ ಗ್ಯಾರಂಟಿ: ಬಸವರಾಜ ಬೊಮ್ಮಾಯಿ

ವಿಕಸಿತ ಭಾರತ ಸಂಕಲ್ಪದ‌ ಮಾರ್ಗದರ್ಶಿ ಪ್ರಣಾಳಿಕೆಯಾಗಿದೆ: ಬಿಜೆಪಿ ಪ್ರಣಾಳಿಕೆಯನ್ನು ಹಾಡಿ ಹೊಗಳಿದ ಜೋಶಿ

- Advertisement -

Latest Posts

Don't Miss