Bollywood News: ಬಾಲಿವುಡ್ ಬೆಡಗಿ ಕಂಗನಾ ರಾಣಾವತ್‌ಗೆ ಬಿಜೆಪಿ ಲೋಕಸಭಾ ಎಲೆಕ್ಷನ್‌ಗೆ ಟಿಕೇಟ್ ಘೋಷಣೆ ಮಾಡಿದ್ದು, ಮಂಡಿ ಕ್ಷೇತ್ರದಿಂದ ಕಂಗನಾ ಸ್ಪರ್ಧಿಸಲಿದ್ದಾರೆ.
ಕಂಗನಾಳ ತವರೂರಾದ ಹಿಮಾಚಲ ಪ್ರದೇಶದ ಮಂಡಿಯಿಂದಲೇ ಕಂಗನಾಗೆ ಟಿಕೇಟ್ ಘೋಷಿಸಲಾಗಿದೆ. ಟಿಕೇಟ್ ಘೋಷಣೆಯಾಗುತ್ತಿದ್ದಂತೆ, ಕಂಗನಾ ಮಂಡಿ ಕ್ಷೇತ್ರದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಇಂದಿನಿಂದಲೇ ಬಿಜೆಪಿ ನಾಯಕರ ಜೊತೆ ಸೇರಿ, ಪ್ರಚಾರ ಕಾರ್ಯವನ್ನೂ ಆರಂಭಿಸಿದ್ದಾರೆ.
ಕಂಗನಾ ರಾಣಾವತ್ ಬಿಜೆಪಿ ಸಪೋರ್ಟರ್ ಆಗಿದ್ದು, ಅವರು ರಾಜಕೀಯಕ್ಕೆ ಬರುತ್ತಾರೆ ಅಂತಾ ಹೇಳಲಾಗಿತ್ತು. ದೇವರು ಮನಸ್ಸು ಮಾಡಿದರೆ, ನಾನು ರಾಜಕೀಯಕ್ಕೆ ಬರುವುದು ದೊಡ್ಡ ವಿಷಯವಲ್ಲ ಎಂದಿದ್ದ ಕಂಗನಾಾ, ಕೆಲ ರಾಾಜಕೀಯ ಮುಖಂಡರನ್ನು ಭೇಟಿ ಮಾಡಿಸ ಟಿಕೇಟ್‌ಗಾಗಿ ಬೇಡಿಕೆ ಇಟ್ಟಿದ್ದರು. ಇದೀಗ ಕಂಗನಾಗೆ ಲೋಕಸಭೆ ಟಿಕೇಟ್ ಘೋಷಣೆಯಾಗಿದೆ.
ಇನ್ನು ಕಂಗನಾ ಬಾಲಿವುಡ್‌ನಲ್ಲಿ ನಡೆಯುವ ನೆಪೋಟಿಸಮ್ ವಿರುದ್ಧ ಧನಿ ಎತ್ತಿಯೇ ಹಲವರ ಫೇವರಿಟ್ ಆದವರು. ಕುಟುಂಬಸ್ಥರನ್ನಷ್ಟೇ ಸಾಕುವ ಬಾಲಿವುಡ್ ಮಂದಿ, ಹೊರಗಿನಿಂದ ಬರುವ ಕಲಾವಿದರೆ, ಎಷ್ಟುಿ ಅವಮಾನ ಮಾಡುತ್ತದೆ ಅಂತಾ ಕಂಗನಾ ಇಂಚಿಂಚು ಮಾಹಿತಿ ಬಿಚ್ಚಿಟ್‌ಟು, ಎಲ್ಲ ಬಂಡವಾಳ ಬಯಲಿಗೆಳೆದಿದ್ದರು.
ಅಚ್ಛೇ ದಿನ್ ತರುವ ಭರವಸೆಯನ್ನು ಹುಸಿಗೊಳಿಸಿದ ಮೋದಿಯವರನ್ನು ಜನರು ಯಾಕೆ ನಂಬುತ್ತಾರೆ?: ಸಿಎಂ
ಬೆಳಗಾವಿಯಲ್ಲಿ ಯಾವುದೇ ವಿರುದ್ಧ ವಾತಾವರಣ ಇದ್ದರೂ ಅದನ್ನು ಶಮನ ಮಾಡುವೆ: ಜಗದೀಶ್ ಶೆಟ್ಟರ್
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಭೆ