International celeb News: ಅಮೆರಿಕದ ನೀಲಿ ಚಿತ್ರ ತಾರೆ ಜೆಸ್ಸಿ ಜೇನ್(43) ಮತ್ತು ಆಕೆಯ ಬಾಯ್‌ಫ್ರೆಂಡ್ ನಟ ಬ್ರೇಟ್ ಒಂದೇ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮಿತಿ ಮೀರಿ ಮಾದಕ ವಸ್ತು ಸೇವನೆ ಮಾಡಿದ್ದಕ್ಕಾಗಿ, ಇವರಿಬ್ಬರ ಜೀವ ಹೋಗಿದೆ ಎಂದು ವರದಿಯಾಗಿದೆ. ಜೆಸ್ಸಿ ಬ್ರೇಟ್ ಜೊತೆ ಲೀವ್ ಇನ್ ರಿಲೇಶಿನ್‌ಶಿಪ್‌ನಲ್ಲಿ ಇದ್ದಳು. ಹಾಗಾಗಿ ಈಕೆ ಬಾಯ್‌ಫ್ರೆಂಡ್ ಮನೆಯಲ್ಲಿಯೇ ಇರುತ್ತಿದ್ದಳು. ಇಬ್ಬರೂ ಅಗತ್ಯಕ್ಕಿಂತ ಹೆಚ್ಚು ಮಾದಕ ವಸ್ತುವನ್ನು ಸೇವಿಸಿದ್ದಕ್ಕೆ, ಇವರಿಬ್ಬರು ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ.
ಇಬ್ಬರ ಶವವೂ ಒಂದೇ ಜಾಗದಲ್ಲಿ ಸಿಕ್ಕ ಕಾರಣ, ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಜೆಸ್ಸಿ 2003ರಲ್ಲಿ ನೀಲಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಟಿವಿ ಕಾರ್ಯಕ್ರಮಗಳಲ್ಲೂ ಆಕೆ ಭಾಗವಹಿಸಿದ್ದರು.
ಮಕ್ಕಳ ವರ್ತನೆಗೆ ಮನನೊಂದು ಸಾಕುಪ್ರಾಣಿ ಹೆಸರಿಗೆ 23 ಕೋಟಿ ರೂ. ಆಸ್ತಿ ಬರೆದಿಟ್ಟ ವೃದ್ಧೆ