Bollywood News: ಬಾಲಿವುಡ್ ನಟ ಬಾಬಿ ಡಿಯೋಲ್ ಇಂದು ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದು, ಇಂದು ಬಾಬಿ ನಟನೆಯ ಕಂಗುವ ಚಿತ್ರದ ಅಧೀರ ಲುಕ್ ರಿಲೀಸ್ ಮಾಡಲಾಗಿದೆ. ಇದರಲ್ಲಿ ಬಾಬಿ ಭಯಂಕರವಾಗಿ ಕಂಡಿದ್ದಾರೆ.
ತಮಿಳು ಭಾಷೆಯ ಈ ಸಿನಿಮಾವನ್ನು 38 ಭಾಷೆಯಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಮೊನ್ನೆಯಷ್ಟೇ ಕಂಗುವ ಪಾತ್ರದಲ್ಲಿರುವ ನಟ ಸೂರ್ಯ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಇನ್ನು ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಲಿಲ್ಲ. ಆಗಲೇ ಹೆಚ್ಚಿನ ಸಂಖ್ಯೆಯಲ್ಲಿ ಟಿಕೇಟ್ ಸೇಲಾಗುವ ಎಲ್ಲ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ.
ಅಷ್ಟೇ ಅಲ್ಲದೇ, ಓಟಿಟಿಯಲ್ಲಿ ಈ ಸಿನಿಮಾ ರಿಲೀಸ್ ಆಗಲು ಆಗಲೇ ಓಟಿಟಿ ರೈಟ್ಸ್ 80 ಕೋಟಿಗೆ ಸೇಲ್ ಆಗಿ ಹೋಗಿದೆ. ಜ್ನಾನ್ ವೇಲ್ ರಾಜ ನಿರ್ಮಿಸಿ, ಶಿವ ನಿರ್ದೇಶಿಸಿರುವ ಈ ಚಿತ್ರದಲ್ಲಿ, ಬಾಲಿವುಡ್ ನಟಿ ದಿಶಾ ಪಠಾಣಿ ಸೂರ್ಯನಿಗೆ ನಟಿಯಾಗಿ ಬಣ್ಣ ಹಚ್ಚಿದ್ದಾರೆ.
ಬಾಯ್‌ಫ್ರೆಂಡ್‌ನೊಂದಿಗೆ ಶವವಾಗಿ ಪತ್ತೆಯಾದ ನೀಲಿ ಚಿತ್ರ ತಾರೆ Jesse Jane
ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆಗಿ ಬಂದು ನಟಿಯರೊಂದಿಗೆ ಪಾರ್ಟಿ ಮಾಡಿದ Vicky Jain