Wednesday, April 16, 2025

Latest Posts

ಮುನಿಸು ಮರೆತು ಒಂದಾದ ಬಾಲಿವುಡ್‌ ನಟ ನವಾಜುದ್ದೀನ್ ಸಿದ್ಧಿಕಿ ದಂಪತಿ

- Advertisement -

Bollywood News: ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಕೆಲ ಕಾರಣಗಳಿಂದ ತಮ್ಮ ಪತ್ನಿಯಿಂದ ದೂರಾಗಿದ್ದರು. ಇದೀಗ ಪತಿ ಪತ್ನಿ ಮತ್ತೆ ಒಂದಾಗಿದ್ದಾರೆ.

ನವಾಜುದ್ದೀನ್ ಸಿದ್ಧಿಕಿ ಪತ್ನಿ ಆಲಿಯಾ ಸಿದ್ಧಕಿ, ತಮ್ಮ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ಕೆಲ ವರ್ಷಗಳ ಹಿಂದೆ ಪತಿಯಿಂದ ದೂರವಾಗಿದ್ದರು. ಅಲ್ಲದೇ, ಮೂರನೇಯ ವ್ಯಕ್ತಿಯಿಂದ ಇವರ ಸಂಬಂಧ ಮುರಿದು ಬಿದ್ದಿತ್ತು ಅಂತಲೂ ಹೇಳಲಾಗುತ್ತದೆ. ಆಲಿಯಾ, ನವಾಜುದ್ದೀನ್ ಮತ್ತು ಆತನ ತಾಯಿಯ ಮೇಲೆ ದಾರ್ಜನ್ಯ ಕೇಸ್ ಹಾಕಿ, ಬೇರೆ ಮನೆಯಲ್ಲಿ ಮಕ್ಕಳೊಂದಿಗೆ ವಾಸಿಸುತ್ತಿದ್ದರು.

ದುಬೈನಲ್ಲಿ ಮಕ್ಕಳು ಶಾಲೆ ಕಲಿಯುತ್ತಿದ್ದರು. ಆದರೆ ನಾನು ದುಬೈನಲ್ಲಿ ಶಾಲೆಯನ್ನು ಬಿಡಿಸಿ, ಇಬ್ಬರು ಮಕ್ಕಳನ್ನು ಭಾರತಕ್ಕೆ ಕರೆತಂದೆ, ಈ ಕಾರಣಕ್ಕಾಗಿ ನವಾಜುದ್ದೀನ್ ನನ್ನನ್ನು ಮತ್ತು ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿದ್ದರು ಎಂದು ಆರೋಪಿಸಿದ್ದಳು. ಬಳಿಕ ನಿಹಾರಿಕಾ ಸಿಂಗ್ ಜೊತೆ ನವಾಜುದ್ದೀನ್ ಅಫೇರ್‌ ಇಟ್ಟುಕೊಂಡಿದ್ದಾರೆಂಬ ಸುದ್ದಿಯೂ ಕೇಳಿಬಂದಿತ್ತು.

ಬಳಿಕ ಹಿಂದಿ ಬಿಗ್‌ಬಾಸ್‌ನಲ್ಲಿ ಬಂದಿದ್ದ ಆಲಿಯಾ, ಮೂರನೇಯ ವ್ಯಕ್ತಿಯಿಂದಾಗಿ ನಮ್ಮ ಸಂಬಂಧ ಹಾಳಾಗಿತ್ತು. ಆದರೆ ಈಗ ಎಲ್ಲವೂ ಸರಿಯಾಗಿದೆ. ಮಕ್ಕಳಿಗಾಗಿ ನಾವು ಒಂದಾಗಿ ಬಾಳುತ್ತಿದ್ದೇವೆ ಎಂದು ಹೇಳಿದ್ದರು.

ಈ ದಂಪತಿಗೆ ಓರ್ವ ಮಗಳು ಮತ್ತು ಓರ್ವ ಮಗನಿದ್ದಾನೆ. ಸದ್ಯ ಇವರಿಬ್ಬರು ಒಟ್ಟಾಗಿದ್ದು, ತಮ್ಮ 14ನೇ ವರ್ಷದ ಮ್ಯಾರೇಜ್ ಆ್ಯನಿವರ್ಸರಿಯನ್ನು ಭರ್ಜರಿಯಾಗಿ ಸೆಲೆಬ್ರೇಟ್ ಮಾಡಿದ್ದು, ಅದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಕಷ್ಟಕ್ಕೆ ಸ್ಪಂದಿಸುವ ಡಿ.ಕೆ.ಸುರೇಶ್ ಬೇಕೊ? ವೈಟ್ ಕಾಲರ್ ಡಾ.ಮಂಜುನಾಥ್ ಬೇಕೋ?ನೀವೇ ನಿರ್ಧರಿಸಿ ಎಂದ ಸಿಎಂ

ಮೇಡಂ ಟುಸ್ಸಾಡ್ಸ್‌ನಲ್ಲಿರುವ ತಮ್ಮ ಮೇಣದ ಪ್ರತಿಮೆ ಅನಾವರಣಗೊಳಿಸಿದ ನಟ ಅಲ್ಲು ಅರ್ಜುನ್

ನಾವೆಲ್ಲರೂ ಲಿಂಗಾಯತರು ನಮ್ಮನ್ನು ಬೆಳೆಸಿದ್ದು ಪ್ರಹ್ಲಾದ್ ಜೋಶಿ: ಶಾಸಕ ಎಂ.ಆರ್.ಪಾಟೀಲ್

- Advertisement -

Latest Posts

Don't Miss