ಬಾಲಿವುಡ್ ನಟನ ವಾಟ್ಸಪ್ ಖಾತೆ ಬ್ಲಾಕ್: ಕಾರಣವೇನು..?

Movie News: ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಸೇರಿ ಹಲವು ಭಾಷೆಗಳಲ್ಲಿ ನಟಿಸಿ, ಸಮಾಜ ಸೇವೆಯಲ್ಲಿ ಮುಂದಾಗಿರುವ ನಟ ಸೋನು ಸೂದ್ ವಾಟ್ಸಪ್‌ ಖಾತೆಯನ್ನು ಕೆಲ ಗಂಟೆಗಳ ಕಾಲ ಬ್ಲಾಕ್ ಮಾಡಲಾಗಿತ್ತು. 61 ಗಂಟೆಗಳ ಬಳಿಕ ಅವರ ವಾಟ್ಸಪ್ ಖಾತೆ ಸರಿಯಾಗಿದೆ.

ಹಾಗಾದ್ರೆ ಯಾಕೆ ಇವರ ವಾಟ್ಸಾಪ್‌ ಖಾತೆ ಬ್ಲಾಕ್ ಆಗಿದೆ ಅಂತಾ ನೋಡೋದಾದ್ರೆ, ನಾವು ವಾಟ್ಸಪ್‌ ರೂಲ್ಸ್ ಬ್ರೇಕ್ ಮಾಡಿದ್ರೆ ವಾಟ್ಸಪ್ ಖಾತೆ ಬ್ಲಾಕ್ ಮಾಡಲಾಗತ್ತೆ. ಸೋನು ಕೂಡ ಯಾವುದೋ ರೂಲ್ಸ್ ಬ್ರೇಕ್ ಮಾಡಿದ ಕಾರಣಕ್ಕೆ ಈ ಎಡವಟ್ಟು ಸಂಭವಿಸಿದೆ.

ಸೋನು ಖಾತೆ ಸರಿಯಾಗುತ್ತಿದ್ದಂತೆ 61 ಗಂಟೆಯೊಳಗೆ ಅವರಿಗೆ 9,483 ಮೆಸೇಜ್‌ಗಳು ಬಂದಿದೆ. ಯಾಕಿಷ್ಟು ಮೆಸೇಜ್..? ಯಾರು ಕಳಿಸಿರಬಹುದು ಅಂತಾ ಕೇಳಿದ್ರೆ, ಇವರ ಬಳಿ ಸಹಾಯ ಕೇಳಿ, ಇವರಿಗೆ ವಾಟ್ಸಾಪ್ ಮಾಡುವವರು ಹಲವರಿದ್ದಾರೆ. ಹಾಗಾಗಿ ಸೋನುಗೆ ಇಷ್ಟು ಮೆಸೇಜ್ ಬಂದಿದೆ. ಕೊರೋನಾ ಸಮಯದಲ್ಲಿ ಸೋನು ಸೂದ್, ಹಲವರಿಗೆ ತಮ್ಮದೇ ದುಡ್ಡಿನಿಂದ ಸಹಾಯ ಮಾಡಿದ್ದಾರೆ. ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಹಲವರನ್ನು ಅವರವರ ಊರುಗಳಿಗೆ, ತಮ್ಮದೇ ಖರ್ಚಿನಲ್ಲಿ ಸೋನು ಸೂದ್ ಕಳಿಸಿಕೊಟ್ಟಿದ್ದಾರೆ.

ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

ಮತದಾನ ಜಾಗೃತಿ ಮೂಡಿಸಿ ಗಮನಸೆಳೆದ ಪುಟಾಣಿಗಳು

ನೇಹಾಗೆ ಆದಂತಹ ಘಟನೆ ಇನ್ನೊಬ್ಬರಿಗೆ ಆಗಬಾರದು ಅನ್ನೋದು ನಮ್ಮ ಬೇಡಿಕೆ: ಮುರುಗೇಶ್ ನಿರಾಣಿ

About The Author