Bollywood News: ಬಾಲಿವುಡ್ ಬ್ಯೂಟಿ ಹೇಮಾಮಾಲಿನಿ ಮತ್ತು ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ತಮ್ಮ 12 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
2012 ಇಸಾ ಡಿಯೋಲ್ ಉದ್ಯಮಿ ಭರತ್ ತಖ್ತಾನಿ ಎಂಬುವವನೊಂದಿಗೆ ವಿವಾಹವಾಗಿದ್ದರು. 2017ರಲ್ಲಿ ಮಗಳು ರಾಧ್ಯಾ ಹುಟ್ಟಿದ್ರೆ, 2019ರಲ್ಲಿಯೂ ಇವರಿಗೆ ಒಂದು ಮಗು ಜನಿಸಿತ್ತು. ಆದರೆ ಇದೀಗ ಇಶಾ ಸಂಸಾರದಲ್ಲಿ ಬಿರುಕು ಮೂಡಿದ್ದು, ದಾಂಪತ್ಯ ಜೀವನ ಅಂತ್ಯವಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಇಶಾ, ನಾವಿಬ್ಬರು ಬೇರೆ ಬೇರೆಯಾಗುವ ಬಗ್ಗೆ ಒಪ್ಪಿಗೆ ಪಡೆದೇ, ಬೇರೆಯಾಗುತ್ತಿದ್ದೇವೆ. ಈ ಸಮಯದಲ್ಲಿ ನಾವು ಗೌಪತ್ಯೆಯನ್ನು ಕಾಪಾಡಿಕೊಳ್ಳಬೇಕಿದೆ. ಏಕೆಂದರೆ, ನಮಗೆ ನಮ್ಮ ಜೀವನದ ಜೊತೆಗೆ, ನಮ್ಮ ಮಕ್ಕಳ ಭವಿಷ್ಯವೂ ಮುಖ್ಯವಾಗಿರುತ್ತದೆ ಎಂದು ಹೇಳಿದ್ದಾರೆ.
ಹಲವು ದಿನಗಳಿಂದ ಇಶಾ ಡಿವೋರ್‌ಸ್ ತೆಗೆದುಕೊಳ್ಳುತ್ತಿದ್ದಾರೆಂದು ಸುದ್ದಿ ಹಬ್ಬಿತ್ತು. ಆದರೆ ಇದೀಗ ಆ ಸುದ್ದಿ ಸತ್ಯವಾಗಿದ್ದು, ಇಶಾ ಪತಿಯಿಂದ ಡಿವೋರ್ಸ್ ಪಡೆಯುತ್ತಿದ್ದಾರೆ.
ಒಂದು ಫೋಟೋ ಅಪ್ಲೋಡ್ ಮಾಡಿ ಡಿವೋರ್ಸ್ ವದಂತಿಗೆ ಉತ್ತರಿಸಿದ ಐಶ್ವರ್ಯಾ ರೈ
ನಾಗಿನ್ ಧಾರಾವಾಹಿಯಲ್ಲಿ ನಟಿಸಲಿದ್ದಾರಂತೆ ನಟಿ ಅಂಕಿತಾ: 1 ಎಪಿಸೋಡ್‌ಗೆ ಎಷ್ಟು ಸ್ಯಾಲರಿ ಗೊತ್ತಾ..?
ಅದ್ದೂರಿಯಾಗಿ ನೆರವೇರಿತು “ರವಿಕೆ ಪ್ರಸಂಗ” ಚಿತ್ರದ ಪ್ರೀ ರಿಲೀಸ್ ಇವೆಂಟ್ .