- Advertisement -
Bollywood News: ಎಲ್ ಆ್ಯಂಡ್ ಟಿ ಸಂಸ್ಥೆಯ ಮುಖ್ಯಸ್ಥ ಎಸ್.ಎನ್.ಸುಬ್ರಹ್ಮಣ್ಯನ್ ಅವರು ಉದ್ಯೋಗಿಗಳು ವಾರಕ್ಕೆ 90 ಗಂಂಟೆ ಕೆಲಸ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯನ್ನು ಬಾಲಿವುಡ್ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ವಿರೋಧಿಸಿದ್ದಾರೆ. ಸುಬ್ರಹ್ಮಣ್ಯನ್, ಭಾನುವಾರವೂ ನಿಮ್ಮಿಂದ ಕೆಲಸ ಮಾಡಿಸದಿರುವುದಕ್ಕೆ ನನಗೆ ವಿಷಾದವಿದೆ. ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು. ನಾನು ಭಾನುವಾರ ದುಡಿಯುತ್ತೇನೆ. ಅದರಂತೆ ನೀವೂ ಭಾನುವಾರ ದುಡಿಯಬೇಕು ಎಂದು ತಮ್ಮ ಅನಿಸಿಕೆ ಹೇಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ದೀಪಿಕಾ, ಅವರು ಪರಿಸ್ಥಿತಿಯನ್ನು ಇನ್ನಷ್ಟು ಕೆಟ್ಟದಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಭಾನುವಾರವೂ ಕೆಲಸ ಮಾಡಬೇಕು ಎಂಬ ಹೇಳಿಕೆ ಬಗ್ಗೆಯೂ ಪ್ರತಿಕ್ರಿಯಿಸಿರುವ ದೀಪಿಕಾ, ಇಷ್ಟು ದೊಡ್ಡ ಪೋಸ್ಟ್‌ನಲ್ಲಿ ಇರುವವರು, ಿಂಥ ಮಾತನಾಡುವುದನ್ನು ಕಂಡು ಆಶ್ಚರ್ಯವಾಗುತ್ತದೆ ಎಂದು ಹೇಳಿದ್ದಾರೆ.
- Advertisement -