Thursday, December 19, 2024

Latest Posts

Bollywood News: ಶಾಹಿದ್ ಜೊತೆ ರಶ್ಮಿಕಾ ರೊಮ್ಯಾನ್ಸ್? ಕನ್ನಡತಿಗೆ ಹೆಚ್ಚಿದ ಬಾಲಿವುಡ್ ಬೇಡಿಕೆ

- Advertisement -

Bollywood News: ಕನ್ನಡ ಚಿತ್ರರಂಗದ ಕಡೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುತ್ತಿರೋದು ಗೊತ್ತೇ ಇದೆ. ಇದು ಹೊಸ ವಿಷಯವೇನಲ್ಲ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ಕನ್ನಡ ಸಿನಿಮಾ ಮೇಕರ್ಸ್ ಮತ್ತು ಸ್ಟಾರ್ಸ್ ಕೂಡ ಇದೀಗ ಪ್ಯಾನ್ ಇಂಡಿಯಾ ಲೆವೆಲ್ ನಲ್ಲೇ ಮಿಂಚುತ್ತಿದ್ದಾರೆ. ಸದ್ಯ ನಟಿಮಣಿಗಳ ವಿಚಾರಕ್ಕೆ ಬಂದರೆ, ಕನ್ನಡತಿ ಕೊಡಗಿನ ಬೆಡಗಿ ಹಾಗು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ನ ಬಹುಬೇಡಿಕೆ ನಟಿ ಅಂದರೆ ಅತಿಶಯೋಕ್ತಿಯೇನಲ್ಲ.

ಹೌದು, ಪುಷ್ಪ 2 ದೊಡ್ಡ ಮಟ್ಟದ ಸಕ್ಸಸ್ ಆಗುತ್ತಿದ್ದಂತೆಯೇ ರಶ್ಮಿಕಾ ಮಂದಣ್ಣಗೆ ಬಾಲಿವುಡ್‌ನಿಂದ ಬಂಪರ್ ಆಫರ್ಸ್ ಬರುತ್ತಿವೆ. ಅನಿಮಲ್ ಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗಿದ್ದ ರಶ್ಮಿಕಾ, ಸಿಕಂದರ್ ಮೂಲಕ ಸಲ್ಮಾನ್ ಖಾನ್ ಜೊತೆ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಹಿಂದಿಯ ಕೆಲವು ಸಿನಿಮಾಗಳಲ್ಲೂ ರಶ್ಮಿಕಾ ಮಂದಣ್ಣ ಬಿಝಿ. ಈಗ ಹರಿದಾಡುತ್ತಿರುವ ಹೊಸ ಸುದ್ದಿ ಅಂದರೆ ಅದು ಶಾಹಿದ್ ಕಪೂರ್ ಜೊತೆ ಹೊಸ ಸಿನಿಮಾದಲ್ಲಿ ಜೋಡಿಯಾಗಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಯಾವಾಗ ಅಲ್ಲು ಅರ್ಜುನ್ ಜೊತೆ ನಟಿಸಿದ ‘ಪುಷ್ಪ 2′ ಸೂಪರ್ ಹಿಟ್ ಆಯ್ತೋ, ಅಲ್ಲಿಂದ ರಶ್ಮಿಕಾಗೆ ಬೇಡಿಕೆ ಹೆಚ್ಚಿದ್ದು ಸುಳ್ಳಲ್ಲ.

ಅಂದಹಾಗೆ, ‘ಕಾಕ್‌ಟೈಲ್’ ಸಿನಿಮಾದ ಸೀಕ್ವೇಲ್‌ನಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಿನಿಮಾದಲ್ಲಿ ರಶ್ಮಿಕಾ ಶಾಹಿದ್ ಕಪೂರ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎಂಬ ಅಂತೆ-ಕಂತೆ ಸುದ್ದಿ ಇದೆ. ಈಗಾಗಲೇ ಕಥೆಯ ಕುರಿತಂತೆ ರಶ್ಮಿಕಾ ಮಂದಣ್ಣ ಬಳಿ ಒಂದು ಹಂತದ ಚರ್ಚೆ ಕೂಡ ನಡೆದಿದೆ ಎಂಬುದು ಸುದ್ದಿ. ಅದೇನೆ ಇರಲಿ, ರಶ್ಮಿಕಾ ಮಂದಣ್ಣ ಶಾಹಿದ್ ಕಪೂರ್ ನಟನೆಯ ಕಾಕ್ ಟೈಲ್ ಸೀಕ್ವೇಲ್ ಸಿನಿಮಾದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಾ? ಅನ್ನೋ ಪ್ರಶ್ನೆ ಎದ್ದಿದೆ. ಆ ಬಗ್ಗೆ ಎಲ್ಲೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರೋದು ದಿಟ. ಸದ್ಯ ಸಿನಿಮಾ ಟೀಮ್ ಅನೌನ್ ಮಾಡುತ್ತಾ ಇಲ್ಲವಾ ಅನ್ನೋದನ್ನು ಕಾದು ನೋಡಬೇಕಿದೆ.

ಈ ಹಿಂದೆ ಬಂದಿದ್ದ ‘ಕಾಕ್‌ಟೈಲ್’ ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆಯಾಗಿದ್ದರು. ಈ ಚಿತ್ರ ಸಕ್ಸಸ್ ಕಂಡಿತ್ತು. ಇದೀಗ ಹಲವು ವರ್ಷಗಳ ಬಳಿಕ ಇದೇ ಸಿನಿಮಾದ ಸೀಕ್ವೆಲ್ ಮಾಡಲು ಚಿತ್ರತಂಡ ಪ್ಲ್ಯಾನ್‌ ಮಾಡಿದೆ. ಹೊಸ ಜೋಡಿಯ ಕಥೆ ತೋರಿಸಲು ಹೊರಟಿದೆ. ರಶ್ಮಿಕಾ ನಟಿಸಿದ್ದ ಹಿಂದಿಯ ಅನಿಮಲ್ ದೊಡ್ಡ ಸುದ್ದಿ ಮಾಡಿತ್ತು. ಅದರ ಬೆನ್ನ ಹಿಂದೆ ಸಾಲು ಸಾಲು ಹಿಂದಿ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ‘ಪುಷ್ಪ 2’ ಹಿಂದಿ ವರ್ಷನ್‌ನಲ್ಲೂ ಸಖತ್ ಕಲೆಕ್ಷನ್ ಮಾಡಿದೆ. ಸದ್ಯ ಪುಷ್ಪ 2 1500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಎಲ್ಲಾ ಮಾನದಂಡ ನೊಡಿಕೊಂಡೇ ರಶ್ಮಿಕಾ ಅವರಿಗೆ ಬಾಲಿವುಡ್ ಅಂಗಳದಲ್ಲಿ ಸಾಕಷ್ಟು ಅವಕಾಶಗಳು ಹುಡುಕಿ ಬರುತ್ತಿವೆ. ಶಾಹಿದ್ ಜೊತೆ ರಶ್ಮಿಕಾ ನಟಿಸ್ತಾರೆ ಎಂಬ ಸುದ್ದಿ ಜೋರಾಗಿದೆಯಾದರೂ ಅದನ್ನು ಸ್ವತಃ ರಶ್ಮಿಕಾ ಮಂದಣ್ಣ ಅವರೇ ಸ್ಪಷ್ಟನೆ ಕೊಡಬೇಕಿದೆ.

ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss