Bollywood News: ಬಾಲಿವುಡ್ ಹೆಸರಾಂತ ಗಾಯಕ ಉದೀತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಕೂಡ ಗಾಯಕರು. ಈ ಹಿಂದೆ ರಿಯಾಲಿಟಿ ಶೋನಲ್ಲಿ ಆ್ಯಂಕರ್ ಆಗಿದ್ದ ಆದಿತ್ಯ, ಶೋನಲ್ಲಿ ಜಡ್ಜ್ ಆಗಿದ್ದ ನೇಹಾ ಕಕ್ಕರ್ ಅವರನ್ನು ವಿವಾಹವಾಗಲಿದ್ದಾರೆಂಬ ಸುದ್ದಿ ಇತ್ತು. ಆದರೆ ಅದು ಸತ್ಯವಾಗಲಿಲ್ಲ. ಇಬ್ಬರು ಬೇರೆ ಬೇರೆ ಜೀವನ ಸಂಗಾತಿಯನ್ನು ಹುಡುಕಿಕೊಂಡರು. ಅಲ್ಲದೇ, ಅಭಿಮಾನಿಯ ಎದುರು ಸಿಟ್ಟು ತೋರಿಸಿ, ಆದಿತ್ಯ ಈ ಮೊದಲು ಸುದ್ದಿಯಾಗಿದ್ದರು.
ಇದೀಗ ಮತ್ತೆ ಅದೇ ವಿಷಯಕ್ಕೆ ಆದಿತ್ಯ ಟ್ರೋಲ್ ಆಗಿದ್ದು, ಫ್ಯಾನ್ ಮೊಬೈಲ್ ತೆಗೆದು ಎಸೆದಿದ್ದಾರೆ. ಸ್ಟೇಜ್ ಪರ್ಫಾಮೆನ್ಸ್ ನೀಡುತ್ತಿದ್ದ ವೇಳೆ ಅಭಿಮಾನಿಯ ಮೇಲೆ ಸಿಟ್ಟಾದ ಆದಿತ್ಯ, ಆ ವ್ಯಕ್ತಿಯ ಫೋನ್ ಕಸಿದು, ದೂರ ಬಿಸಾಕಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರು ಆಕ್ರೋಶ ಹೊರಹಾಕಿದ್ದಾರೆ.
ಛತ್ತೀಸ್‌ಘಡದ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಆದಿತ್ಯ ನಾರಾಯಣ್ ಹಾಡು ಹಾಡುತ್ತ, ಕಾರ್ಯಕ್ರಮ ನೀಡುತ್ತಿದ್ದರು. ಇವರ ಹಾಡಿಗೆ ಎಲ್ಲ ವಿದ್ಯಾರ್ಥಿಗಳು ಎಂಜಾಯ್ ಮಾಡುತ್ತಿದ್ದರು. ಆದರೆ ಅಲ್ಲೊಬ್ಬ ವಿದ್ಯಾರ್ಥಿ, ಆದಿತ್ಯ ಪರ್ಫಾಮೆನ್ಸ್‌ನ್ನು ತಮ್ಮ ಮೊಬೈಲ್‌ನಲ್ಲಿ ಶೂಟ್ ಮಾಡುತ್ತಿದ್ದ. ಏಕಾಏಕಿ ಸಿಟ್ಟಾದ ಆದಿತ್ಯ, ಕೋಪದಲ್ಲಿ ಬಂದು ಮೊಬೈಲ್ ತೆಗೆದು ಎಸೆದಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆ, ಜನ ಆದಿತ್ಯ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಇಷ್ಟು ಸಿಟ್ಟೇಕೆ..? ಎಂದು ಪ್ರಶ್ನಿಸಿದ್ದಾರೆ.
ಕಳೆದ ತಿಂಗಳು ಇದೇ ರೀತಿ ಸ್ಟೇಜ್ ಪರ್ಫಾಮೆನ್ಸ್ ಕೊಡುವಾಗ, ಪಾಕಿಸ್ತಾನದ ಗಾಯಕ ಅಭಿಮಾನಿಗಳತ್ತ ತಮ್ಮ ಮೈಕ್ ಬಿಸಾಕಿ, ಸ್ಟೇಜ್‌ನಿಂದ ಎದ್ದು ಹೋಗಿದ್ದರು. ಈ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.
अपने कॉन्सर्ट के दौरान #adityanaran ने फैन से फोन छीनकर फेका… देखें वीडियो
.
.
.#livemusic #liveshow #adityanarayan #uditnarayan #chhattisgarh #raipur #durg #bhilai #inhnews pic.twitter.com/ffgJXg7nO0— Inh 24X7 (@24x7Inh) February 11, 2024
ಪೋರ್ನ್ ಸ್ಟಾರ್ ಜಾನಿ ಸಿನ್ಸ್ ಜೊತೆ ನಟಿಸಿದ ನಟ ರಣ್ವೀರ್ ಸಿಂಗ್: ವೀಡಿಯೋ ವೈರಲ್