Sunday, September 8, 2024

Latest Posts

13th Bangalore ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬೊಮ್ಮಾಯಿ ಚಾಲನೆ..!

- Advertisement -

ಬೆಂಗಳೂರಿನ (Bengaluru) ಜಿಕೆವಿಕೆಯಲ್ಲಿ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (13th Bengaluru International Film Festival) ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು (ಮಾರ್ಚ್​ 3) ಸಂಜೆ ಚಾಲನೆ ನೀಡಿದ್ದಾರೆ. ಈ ಬಾರಿ 55 ದೇಶಗಳ 200ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣುತ್ತಿವೆ. ಬೆಂಗಳೂರಿನ ಒರಾಯನ್​ ಮಾಲ್​ನಲ್ಲಿರುವ ಪಿವಿಆರ್​ನಲ್ಲಿ ಈ ಸಿನಿಮೋತ್ಸವ ನಡೆಯಲಿದೆ. ಎಲ್ಲಾ ಸಿನಿಮಾಗಳು ಇಲ್ಲಿಯೇ ಪ್ರದರ್ಶನ ಕಾಣಲಿದೆ. ಈಗಾಗಲೇ ಯಾವ ಸಿನಿಮಾ ಯಾವ ಸಮಯದಲ್ಲಿ ಪ್ರದರ್ಶನ ಕಾಣುತ್ತಿದೆ ಎನ್ನುವ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಹಲವು ರಾಷ್ಟ್ರಗಳಲ್ಲಿ ಹಲವು ರೀತಿಯ ಸಿನಿಮಾಗಳು ತಯಾರಾಗುತ್ತವೆ. ಪ್ರತಿ ದೇಶದ ಸಿನಿಮಾಗಳು ಅಲ್ಲಿಯ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಈ ರೀತಿ 55 ದೇಶಗಳ ಸಿನಿಮಾಗಳನ್ನು ಒಂದೇ ಕಡೆ ನೋಡುವ ಅವಕಾಶ ಈ ಬಾರಿಯ ಬೆಂಗಳೂರು ಚಲನಚಿತ್ರೋತ್ಸದಲ್ಲಿ ಆಗುತ್ತಿದೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ (Nirmala Sitharaman)​, ರಾಜೀವ್ ಚಂದ್ರಶೇಖರ್ (Rajiv Chandrasekhar) ​ ಅವರು ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ವಿಶೇಷ ಅತಿಥಿಯಾಗಿ ಭಾರತಿ ವಿಷ್ಣುವರ್ಧನ್ ಭಾಗಿಯಾಗಿದ್ದಾರೆ. ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್ (Karnataka Flim Academy Sunil Puranik), ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಮೊದಲಾದವರು ಪಾಲ್ಗೊಂಡಿದ್ದಾರೆ. ಈ ಬಾರಿಯ ಬೆಂಗಳೂರು ಸಿನಿಮೋತ್ಸವಕ್ಕೆ ವಿಶೇಷ ರೀತಿಯಲ್ಲಿ ಏರಿಯಲ್​ ಬ್ಯಾನರ್​ ಡಿಸ್​ಪ್ಲೇ ಪ್ರದರ್ಶನ ಮಾಡಲಾಯಿತು. ಪುನೀತ್​ ರಾಜ್​ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಅವರು 46ನೇ ವಯಸ್ಸಿಗೆ ಹೃದಯಾಘಾತದಿಂದ ಮೃತಪಟ್ಟರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ. ಈ ಕಾರಣಕ್ಕೆ ಸಿನಿಮೋತ್ಸವದಲ್ಲಿ ಪುನೀತ್​ ಅವರಿಗೆ ಮೌನಾಚರಣೆ ಮೂಲಕ ನಮನ ಸಲ್ಲಿಸಿ ಫಿಲ್ಮ್​ ಫೆಸ್ಟಿವಲ್ ಆರಂಭ ಮಾಡಿದೆ. ಈ ದೇಶ ಬಲಿಯೋದಕ್ಕೆ ಹಾಗೂ ಬೆಳೆಯೋದಕ್ಕೆ ಕನ್ನಡ ಚಿತ್ರರಂಗದ ಅವಶ್ಯಕತೆ ಮುಖ್ಯವಾಗಿದೆ. ನನಗೆ ಬ್ಲಾಕ್ ಆ್ಯಂಡ್​ ವೈಟ್ ಸಿನಿಮಾಗಳೆ ತುಂಬಾ ಇಷ್ಟ. ಪುನೀತ್ ಸಣ್ಣ ವಯಸ್ಸಲ್ಲೆ ಸಾಧನೆ ಮಾಡಿದ್ದರು. ಸ್ವಾಮಿ ವಿವೇಕಾನಂದ ಅವರು ಕೂಡ ಸಣ್ಣ ವಯಸ್ಸಲ್ಲೇ ಸಾಧನೆ ಮಾಡಿದ್ದರು’ ಎಂದು ಸಿಎಂ ಬೊಮ್ಮಾಯಿ ಎಂದಿದ್ದಾರೆ.

- Advertisement -

Latest Posts

Don't Miss