ಛತ್ತೀಸ್‌ಘಡ್: ಮದುವೆ ಮನೆ ಅಂದ್ರೆ ಅಲ್ಲಿ ಬರೀ ಸಂಭ್ರಮವಿರತ್ತೆ. ಯಾವುದಾದರೂ ಸಣ್ಣಪುಟ್ಟ ವಿಷಯಕ್ಕೆ ಸಣ್ಣ ಪುಟ್ಟ ಮನಸ್ತಾಪಗಳು ಬರಬಹುದು, ಹೋಗಬಹುದು. ಕೆಲವೊಮ್ಮೆ ದೊಡ್ಡ ದೊಡ್ಡ ಗಲಾಟೆ ನಡೆದಿದ್ದೂ ನೋಡಿದ್ದೇವೆ. ಆದರೆ ಇಲ್ಲೊಂದು ಮದುವೆಯಲ್ಲಿ ಸಂಭ್ರಮದಿಂದ ವಧು ವರನ ಜೊತೆ ಸ್ಟೇಜ್‌ನಲ್ಲಿ ಸ್ಟೆಪ್ ಹಾಕುತ್ತಿದ್ದ ವ್ಯಕ್ತಿ, ಹಠಾತ್ತನೆ ಕುಸಿದು ಬಿದ್ದು, ಪ್ರಾಣ ಕಳೆದುಕೊಂಡಿದ್ದಾರೆ.
ಇಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಯಾಗಿದ್ದ, ದಿಲೀಪ್ ರೌಜಗರ್ ಮೃತ ವ್ಯಕ್ತಿಯಾಗಿದ್ದು, ಛತ್ತೀಸ್‌ಘಡದ ರಾಜಾನಂದ ಗಾಂವ್ ಜಿಲ್ಲೆಯ ಢೋಂಗರಘಡ ಎಂಬಲ್ಲಿ ಮದುವೆ ಕಾರ್ಯಕ್ರಮವಿತ್ತು. ಈ ವೇಳೆ ದಿಲೀಪ್ ತಮ್ಮ ಸೊಸೆಯ ಮದುವೆಯಲ್ಲಿ ಖುಷಿ ಖುಷಿಯಾಗಿ ಡಾನ್ಸ್ ಮಾಡುತ್ತಿದ್ದರು. ಹೀಗೆ ಡಾನ್ಸ್ ಮಾಡುತ್ತ ಮಾಡುತ್ತ ಕುಸಿದು ಬಿದ್ದಿದ್ದಾರೆ.
ನಂತರ ಆಸ್ಪತ್ರೆಗೆ ಕೊಂಡೊಯ್ದಾಗ, ವೈದ್ಯರು ಅವರು ಈಗಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಹೇಳಿದ್ದಾರೆ. ಇವರು ನೃತ್ಯ ಮಾಡುವ ಸಂದರ್ಭ ಮತ್ತು ಕುಸಿದು ಬೀಳುವ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದೆ.
10 May 2023 : 🇮🇳 : BSP engineer got 💔attack💉 while dancing at niece's wedding, died#heartattack2023 #TsunamiOfDeath pic.twitter.com/b0dNv3k2Av
— Anand Panna (@AnandPanna1) May 10, 2023
ವರದಕ್ಷಿಣೆಯಲ್ಲಿ ಬೈಕ್ ಕೇಳಿದ್ದಕ್ಕೆ, ಅಪ್ಪನಿಂದಲೇ ಚಪ್ಪಲಿ ಏಟು ತಿಂದ ವರ: ವೀಡಿಯೋ ವೈರಲ್