ಕೋಟಾ: ಚಿಕ್ಕ ಮಕ್ಕಳು ಎಲ್ಲಾದರೂ ಹೊರಗಡೆ ಹೋಗುವಾಗ, ಅಥವಾ ಶಾಲೆಗೆ ಹೋಗುವಾಗ, ಹೊರಗೆ ಯಾರಾದರೂ ಏನಾದರೂ ಕೊಟ್ಟರೆ, ಅದನ್ನ ತಿನ್ನಬೇಡ ಅಂತಾ ಹೇಳ್ತಾರೆ. ಯಾಕಂದ್ರೆ ಹಾಗೆ ತಿನ್ನಲು ಕೊಟ್ಟ ತಿಂಡಿಯಲ್ಲಿ ಮತ್ತು ಬರುವ ಔಷಧಿ ಹಾಕಿರುತ್ತಾರೆ. ಇದೇ ರೀತಿಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
10ನೇ ತರಗತಿ ಬಾಲಕಿ ಪ್ರವಾಸಕ್ಕೆ ಹೋದಾಗ, ಆಕೆಯನ್ನು ಅಪಹರಿಸಿ ಎರಡು ಬಾರಿ ಮಾರಾಟ ಮಾಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಕಟ್ನಿ ಎಂಬ ಗ್ರಾಮದವಳಾದ ಈ ಹೆಣ್ಣುಮಗಳು 10ನೇ ತರಗತಿ ಪರೀಕ್ಷೆ ಮುಗಿಸಿ, ಪ್ರವಾಸಕ್ಕೆಂದು ಹೊರಟಿದ್ದಳು. ರೈಲ್ವೆಯಲ್ಲಿ ಕೆಲ ಯುವಕರು ಈಕೆಗೆ ಪರಿಚಯವಾಗಿದ್ದರು. ಅವರು ಉದ್ಯಾನವನ ತೋರಿಸುವುದಾಗಿ ಹೇಳಿ, ಅವಳನ್ನು ಕರೆದೊಯ್ದಿದ್ದಾರೆ. ಅಲ್ಲಿ ಆಕೆಗೆ ಅವರು ತಿಂಡಿ ಮತ್ತು ನೀರು ಕೊಟ್ಟಿದ್ದಾರೆ. ಅದನ್ನು ಸೇವಿಸಿದ ಬಾಲಕಿ, ಪ್ರಜ್ಞಾಹೀನಳಾಗಿದ್ದಾಳೆ.
ಆಕೆಗೆ ಮರಳಿ ಪ್ರಜ್ಞೆ ಬಂದಾಗ, ಆಕೆಯನ್ನು ಓರ್ವ ವ್ಯಕ್ತಿಗೆ 2 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆ ವ್ಯಕ್ತಿಯೊಂದಿಗೆ ಇನ್ನೋರ್ವ ವ್ಯಕ್ತಿ ಮತ್ತು ಓರ್ವ ಮಹಿಳೆ ಇದ್ದು, ಅವರು ಈಕೆಯನ್ನು ಹೊಟೇಲ್ ರೂಮಿಗೆ ಕರೆತಂದಿದ್ದಾರೆ. ಅಲ್ಲಿ ಬೆದರಿಕೆ ಹಾಕಿ, ಆ ವ್ಯಕ್ತಿಯೊಂದಿಗೆ ಈಕೆಯನ್ನು ಮದುವೆ ಮಾಡಲಾಗಿದೆ. ಮದುವೆಯಾಗಿ 4 ತಿಂಗಳಾದ ಬಳಿಕ, ಈಕೆಯ ಪತಿಯಾದವನು ಆಕಸ್ಮಿಕವಾಗಿ ಪಾಯ್ಸನ್ ಸೇವಿಸಿ ಸಾವನ್ನಪ್ಪಿದ್ದಾನೆ.
ನಂತರ ಆ ಮನೆಯವರು ಇನ್ನೊಂದು ಮದುವೆ ನೆಪದಲ್ಲಿ ಈಕೆಯನ್ನು ಇನ್ನೋರ್ವ ವ್ಯಕ್ತಿಗೆ 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆತನೊಂದಿಗೆ ವಿವಾಹವಾದ ಬಳಿಕ, ಬಾಲಕಿಗೆ ಈ ವಿಷಯ ತಿಳಿದು ಬಂದಿದೆ. ಇದರಿಂದ ಮನನೊಂದ ಬಾಲಕಿ, ನೇಣಿಗೆ ಶರಣಾಗಲು ಹೋಗಿದ್ದಾಳೆ. ಆದರೆ ಅದು ಸಾಧ್ಯವಾಗದೇ, ಬಾಲಕಿ ಬದುಕುಳಿದಿದ್ದಾಳೆ. ಬಳಿಕ ಆ ಮನೆಯಿಂದ ಓಡಿಹೋಗಿದ್ದಾಳೆ. ಸ್ಥಳೀಯ ರೈಲು ನಿಲ್ದಾಣದಲ್ಲಿ ಆಕೆಯನ್ನು ಗಮನಿಸಿದ ರೈಲ್ವೆ ಸಿಬ್ಬಂದಿ, ಆಕೆಯ ಕಥೆಯನ್ನು ಕೇಳಿ, ಮಕ್ಕಳ ರಕ್ಷಣಾ ಕೇಂದ್ರಕ್ಕೆ ವಿಷಯ ಮುಟ್ಟಿಸಿದ್ದಾರೆ. ಸದ್ಯ ಬಾಲಕಿ, ಪೊಲೀಸರ ವಶದಲ್ಲಿದ್ದು, ಈಕೆಯನ್ನು ಈಕೆಯ ಪೋಷಕರಿಗೆ ತಲುಪಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸ್ಕೂಟರ್ಗೆ ಸೀಟ್ ಬೆಲ್ಟ್ ಇಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸ್..?