Wednesday, February 5, 2025

Latest Posts

BSY ಮೊಮ್ಮಗಳು ಸೌಂದರ್ಯ ನೇಣಿಗೆ ಶರಣು..!

- Advertisement -

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ(BS Yediyurappa)ನವರ ಮೊಮ್ಮಗಳು ಇಂದು ಬೆಳಗ್ಗೆ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಯಡಿಯೂರಪ್ಪನವರ ಮಗಳಾದ ಪದ್ಮ ಮರಿಸ್ವಾಮಿ(Padma Mariswami)ಮಗಳು ಸೌಂದರ್ಯ(Soundarya)(30) ಮೃತಪಟ್ಟಿರುವ ದುರ್ದೈವಿ. 2018ರಲ್ಲಿ ಡಾ ನೀರಜ್(Dr. Neeraj)ರನ್ನು ಮದುವೆಯಾಗಿದ್ದಳು. ಪತಿ ಪತ್ನಿ ಇಬ್ಬರು ಬೌರಿಂಗ್ ಆಸ್ಪತ್ರೆಯಲ್ಲಿ(Bowring Hospital)ವೈದ್ಯರಾಗಿದ್ದರು. ಇಂದು ಬೆಳಗ್ಗೆ 8 ಗಂಟೆಗೆ ಪತಿ ಡಾ. ನೀರಜ್ ಕೆಲಸಕ್ಕೆ ಹೋಗಿದ್ದರು, ಆಗ ಅಲ್ಲಿನ ಕೆಲಸದವರು 10 ಗಂಟೆಯಾದರೂ ರೂಮ್ ಬಾಗಿಲು ತೆಗೆಯದೇ ಇರುವುದನ್ನು ಗಮನಿಸಿದ ಕೆಲಸದವರು ಪತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಫ್ಯಾನಿಗೆ ನೇಣು ಹಾಕಿಕೊಂಡಿರುವ ದೃಶ್ಯ ಕಂಡುಬಂದಿದೆ.ಶಾಂಗ್ರಿ-ಲಾ ಹೋಟೆಲ್(Shangri-La HOTEL) ಬಳಿಯ ಅಪಾರ್ಟ್ಮೆಂಟ್ ಒಂದರಲ್ಲಿ ಇಂತಹ ದುರ್ಘಟನೆ ನಡೆದಿದೆ. ಪೋಸ್ಟ್ಮಾರ್ಟಮ್ ರಿಪೋರ್ಟ್ ಬಳಿಕ ಅಬ್ಬಿಗೆರೆಯಲ್ಲಿರುವ ಪತಿ ಡಾ. ನೀರಜ್ ನಿವಾಸಕ್ಕೆ  ಮೃತದೇಹವನ್ನು ರವಾನಿಸಲಾಗಿದೆ.

- Advertisement -

Latest Posts

Don't Miss