Sunday, September 8, 2024

Latest Posts

ವೇಗಿ ಬುಮ್ರಾ ಮತ್ತೆ ನಂ.1 ಬೌಲರ್ 

- Advertisement -

ಲಂಡನ್:  ಆಂಗ್ಲರ ವಿರುದ್ಧ ಅತ್ಯದ್ಭುತ  ಪ್ರದರ್ಶನ ನೀಡಿದ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಏಕದಿನ  ರಾಂಕಿಂಗ್‍ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.  ಮೊನ್ನೆ ಓವೆಲ್ ಮೈದಾನದಲ್ಲಿ  ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ  ವೇಗಿ ಬುಮ್ರಾ ಕೇವಲ 19 ರನ್ ನೀಡಿ 6 ವಿಕೆಟ್ ಪಡೆದು ಮಿಂಚಿದರು. ಇದೀಗ ಐಸಿಸಿ ಏಕದಿನ ರ್ಯಾಂಕಿಂಗ್‍ನಲ್ಲಿ  ಬುಮ್ರಾ ಮೂರು ಸ್ಥಾನ ಜಿಗಿದಿದ್ದಾರೆ.

2020 ಫೆಬ್ರವರಿಯಲ್ಲಿ ಬುಮ್ರಾ ನಂ.1 ಪಟ್ಟವನ್ನು ಕಳೆದುಕೊಂಡಿದ್ದರು. ಅಂದು 730 ದಿನಗಳ ಕಾಲ ನಂ.1 ಆಗಿದ್ದರು. ದೀರ್ಘಾವಧಿವರೆಗೂ ಇದ್ದ 9ನೇ ಬೌಲರ್ ಎನಿಸಿದ್ದರು.  ಇದೀಗ 2 ವರ್ಷದ ನಂತರ ಬುಮ್ರಾ ಅಗ್ರಸ್ಥಾನಕ್ಕೇರಿದ್ದಾರೆ.

ಈ ಹಿಂದೆ ಟಿ20 ಆವೃತ್ತಿಯಲ್ಲೂ ಬುಮ್ರಾ ಮೊದಲ ಸ್ಥಾನದಲ್ಲಿದ್ದರು. ಟೆಸ್ಟ್‍ನಲ್ಲಿ ಮೂರನೆ ಸ್ಥಾನದಲ್ಲಿದ್ದಾರೆ. ಭಾರತ ಕ್ರಿಕೆಟ್ ದಂತಕತೆ ಕಪಿಲ್ ದೇವ್ ನಂತರ ಏಕದಿನ ಆವೃತ್ತಿಯಲ್ಲಿ ನಂ.1 ಸ್ಥಾನಕ್ಕೇರಿದ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ.  ಮಾನಿಂದರ್ ಸಿಂಗ್, ಮಾಜಿ ನಾಯಕ ಅನಿಲ್ ಕುಂಬ್ಳೆ ಮತ್ತು ರವೀಂದ್ರ ಜಡೇಜಾ ಅಗ್ರ ರಾಂಕ್ ಪಡೆದ ಬೌಲರ್‍ಗಳಾಗಿದ್ದಾರೆ. ನ್ಯೂಜಿಲೆಂಡ್‍ನ ಟ್ರೆಂಟ್ ಬೌಲ್ಟ್ ಎರಡನೆ ಸ್ಥಾನದಲ್ಲಿದ್ದಾರೆ.  ಪಾಕಿಸ್ಥಾನದ  ಶಾಹೀನ್ ಅಫ್ರೀದಿ ಮೂರನೆ ಸ್ಥಾನಕ್ಕಿಳಿದಿದ್ದಾರೆ.

ಮೂರನೆ ಸ್ಥಾನಕ್ಕೆ ಜಿಗಿದ ಟೀಮ್ ಇಂಡಿಯಾ

ಇಂಗ್ಲೆಂಡ್ ವಿರುದ್ದ  10 ವಿಕೆಟ್‍ಗಳ ಭರ್ಜರಿ ಗೆಲುವು ಸಾಸುತ್ತಿದ್ದಂತೆ , ಭಾರತ ಐಸಿಸಿ ಏಕದಿನ ರಾಂಕಿಂಗ್‍ನಲ್ಲಿ ಮೂರನೆ ಸ್ಥಾನಕ್ಕೇರಿದೆ. ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಭಾರತ 105 ಅಂಕಗಳನ್ನು ಪಡೆದಿತ್ತು. ಇದೀಗ ಮೂರು ಸ್ಥಾನ ಜಿಗಿದು  108 ಅಂಕ ಪಡೆದಿದೆ. ಜೊತೆಗೆ ಪಾಕಿಸ್ಥಾನ ತಂಡವನ್ನು ಹಿಂದಿಕ್ಕಿದೆ.  ನ್ಯೂಜಿಲೆಂಡ್ ತಂಡ  126 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್ 122 ಅಂಕಗಳೊಂದಿಗೆ ಎರಡನೆ ಸ್ಥಾನದಲ್ಲಿದೆ.

ಇನ್ನು ಬ್ಯಾಟಿಂಗ್ ರ್ಯಾಂಕಿಂಗ್‍ನಲ್ಲೂ ಸಾಕಷ್ಟು ಬದಲಾವಣೆ ಯಾಗಿದೆ. ಇಂಗ್ಲೆಂಡ್  ವಿರುದ್ಧ 76 ರನ್ ಹೊಡೆದ ನಾಯಕ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ಅವರೊಂದಿಗೆ ಅಂತರವನ್ನು ಕಡಿಮೆ ಮಾಡಿಕೊಂಡಿದ್ದಾರೆ.  ಶಿಖರ್ ಧವನ್ 12ನೇ ಸ್ಥಾನಕ್ಕೆ ಜಿಗಿದಿದ್ದಾರೆ.  ಟಿ20 ಆವೃತ್ತಿಯಲ್ಲಿ ಸೂರ್ಯಕುಮಾರ್ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಯದನೆ ಸ್ಥಾನ ಪಡೆದಿದ್ದಾರೆ.

 

- Advertisement -

Latest Posts

Don't Miss