- Advertisement -
Movie News: ಸ್ಯಾಂಡಲ್‌ವುಡ್ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ 2.50 ಲಕ್ಷ ರೂಪಾಯಿ ಕಳ್ಳತನವಾಗಿದೆ. ಬೆಂಗಳೂರಿನ ಗುರುಕಿರಣ್ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಡಿಸೆಂಬರ್ 31ರಂದು ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ದುಡ್ಡನ್ನು ಬೀರುವಿನಲ್ಲಿ ಇಟ್ಟಿದ್ದು, ಜನವರಿ 5ರ ಬಳಿಕ ದುಡ್ಡು ಕಾಣೆಯಾಗಿದೆ.
ಎರಡು ದಿನ ಇಡೀ ಮನೆ ಹುಡುಕಾಡಿರೂ ಇವರಿಗೆ ಹಣ ಸಿಗಲಿಲ್ಲ. ಆಗ ಕಸ್ತೂರಿ ಶೆಟ್ಟಿಯವರು ಚಂದ್ರಲೈಔಟ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಮನೆಕೆಲಸದಾಕೆಯ ಮೇಲೆ ಕಸ್ತೂರಿ ಶೆಟ್ಟಿ ಅನುಮಾನ ವ್ಯಕ್ತಪಡಿಸಿದ್ದು, ಮನೆಗೆಲಸದಾಕೆಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
- Advertisement -