Sunday, September 20, 2026

ಜಿಲ್ಲಾ ಸುದ್ದಿಗಳು

ಶಕ್ತಿಪೀಠ ಹುಲಿಗಿಯಲ್ಲಿ ಅದ್ದೂರಿ ರಥೋತ್ಸವ: ಲಕ್ಷಾಂತರ ಭಕ್ತರ ಸಮಾಗಮ!

ಕೊಪ್ಪಳ ತಾಲೂಕಿನ ಶಕ್ತಿಪೀಠವೆಂದೇ ಪ್ರಸಿದ್ಧಿ ಪಡೆದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ಮಹಾ ರಥೋತ್ಸವ ಭಕ್ತಿಯಿಂದ ಹಾಗೂ ಅದ್ದೂರಿ ಸಂಭ್ರಮದ ನಡುವೆ ಜರುಗಿತು. ಗೋಧೂಳಿ ಸಮಯದಲ್ಲಿ ನಡೆದ ಮಹಾರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳೊಂದಿಗೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ...

IFS ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ರ‍್ಯಾಂಕ್: ಅಥಣಿಯ ರೈತ ಪುತ್ರನ ಭರ್ಜರಿ ಸಾಧನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮ ಇಂದು ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಸಾಮಾನ್ಯ ರೈತನ ಪುತ್ರ ಬಸವರಾಜ್ ಕೆಂಪವಾಡ ಅವರು ಯುಪಿಎಸ್ಸಿ ನಡೆಸಿದ ಇಂಡಿಯನ್ ಫಾರೆಸ್ಟ್ ಸರ್ವೀಸ್ (IFS-2025) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ. ಕೇವಲ ಒಂದು ಎಕರೆ ಜಮೀನನ್ನೇ ನಂಬಿಕೊಂಡು ಜೀವನ...

ಮೈಸೂರಿಗರಿಗೆ ನೀರಿನ ಸಂಕಷ್ಟ? ಬರಿದಾಗುತ್ತಿದೆಯಾ ಕೆಆರ್‌ಎಸ್..!

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಬೇಸಿಗೆ ತೀವ್ರತೆಯ ನಡುವೆಯೇ ನೀರಿನ ಅಭಾವದ ಆತಂಕ ಹೆಚ್ಚಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸುವ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 100 ಅಡಿಗೂ ಕೆಳಗೆ ಇಳಿದಿರುವುದು ಆತಂಕ...

ʼGBAʼ ಹೊಸ ರೂಲ್ಸ್! ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ

ಬೆಂಗಳೂರು ನಗರದಲ್ಲಿನ ಆಸ್ತಿ ಮಾಲೀಕರಿಗೆ GBA ಮಹತ್ವದ ಇ-ಖಾತಾ ಅಪ್‌ಡೇಟ್ ನೀಡಿದೆ. ಇ-ಖಾತಾ ಪಡೆಯುವುದು ಸುಲಭ. ಆಸ್ತಿ ದಾಖಲೆಗಳ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್ ಮಾಡಲಾಗಿದೆ. ಮತ್ತು ಪಾರದರ್ಶಕಗೊಳಿಸಲಾಗಿದೆ. ಇ-ಖಾತಾ ವ್ಯವಸ್ಥೆಯ ಮೂಲಕ ಮನೆ ಮಾಲೀಕರು ಇದೀಗ ತಮ್ಮ ಆಸ್ತಿ ದಾಖಲೆಗಳನ್ನು ಮನೆಲ್ಲೇ ಕುಳಿತು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಪಡೆಯುತ್ತಿದ್ದಾರೆ. GBA ಈಗಾಗಲೇ...

ಕುಡಿದ ಮತ್ತಿನಲ್ಲಿ ಹಳೆ ವೈಷಮ್ಯಕ್ಕೆ ಬ*ಲಿ: ರಾಜಿಯಾದ್ರೂ ಮುಗಿಯದ ಸೇಡು..!

ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪಕ್ಕದ ಮನೆಯ ವ್ಯಕ್ತಿಯನ್ನ ಹತ್ಯೆ ಮಾಡಿದ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದೆ. ನಿಂಗಪ್ಪ ಚನ್ನಬಸಪ್ಪ ಕರಿಗಾರ್ (40) ಕೊಲೆಯಾದ ದುರ್ದೈವಿ. ಶಿವು ನಿಂಗಪ್ಪ ಪಟ್ಟೇದವರ ಎಂಬಾತನೇ ಹತ್ಯೆಗೈದ ಆರೋಪಿಯಾಗಿದ್ದು, ಘಟನೆ...

ಗೋವಾ ಕಡಲಲ್ಲಿ ಕಾರವಾರದ ಬೋಟ್ ಮುಳುಗಡೆ: 22 ಮೀನುಗಾರರು ಕೂದಲೆಳೆ ಅಂತರದಲ್ಲಿ ಪಾರು!

ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಆಳಸಮುದ್ರದ ಮೀನುಗಾರಿಕಾ ಬೋಟ್ ಮುಳುಗಡೆ. ಕಾರವಾರ ಮೂಲದ ಪರ್ಶಿಯನ್ ಮಾದರಿಯ ಆಳಸಮುದ್ರ ಮೀನುಗಾರಿಕಾ ಬೋಟ್ ಗೋವಾದ ಬೇತುಲ್ ಸಮುದ್ರ ಪ್ರದೇಶದಲ್ಲಿ ಮುಳುಗಡೆಯಾದ ಘಟನೆ ನಡೆದಿದೆ. ಅದೃಷ್ಟವಶಾತ್, ಬೋಟ್‌ನಲ್ಲಿದ್ದ ಎಲ್ಲಾ 22 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ‘ಶ್ರೀ ಅಮ್ಮ’ ಹೆಸರಿನ ಈ ಮೀನುಗಾರಿಕಾ ಬೋಟ್ ಕಾರವಾರ ತಾಲೂಕಿನ ಮುದಗಾ...

ನಮ್ಮೂರ ಐಪಿಎಲ್ ಸೀಸನ್ 2 ಚಾಂಪಿಯನ್ಸ್: ಇ-3 ಪ್ಯಾಂಥರ್ಸ್ ವಿಜಯೋತ್ಸವ!

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಮೂರು ದಿನಗಳ ಕಾಲ ನಡೆದ ‘ನಮ್ಮೂರ ಐಪಿಎಲ್’ ಸೀಸನ್–2 ಕ್ರಿಕೆಟ್ ಲೀಗ್ ಭರ್ಜರಿ ಯಶಸ್ಸಿನೊಂದಿಗೆ ಅಂತ್ಯಗೊಂಡಿತು. ರಾಜರಾಜೇಶ್ವರಿ ನಗರ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘ ಹಾಗೂ ರಾಜರಾಜೇಶ್ವರಿ ನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಿರಿಯ ರಾಜಕೀಯ ಮುಖಂಡ ಜಿ. ಎಚ್. ರಾಮಚಂದ್ರ ಹಾಗೂ ಅವರ ಪುತ್ರ ಜಗದೀಶ್ ಆರ್....

ಮುನ್ನೆಚ್ಚರಿಕೆ ಇಲ್ಲದೆ ರಸ್ತೆ ಬಂದ್ | ಹೆದ್ದಾರಿಯಲ್ಲಿ ಸಾರ್ವಜನಿಕರ ಪರದಾಟ!

ಯಾವುದೇ ಮುನ್ನಚ್ಚರಿಕೆಯನ್ನು ನೀಡದೇ ರಸ್ತೆ ಬಂದ್‌ ಮಾಡಿ ಏಕಾಏಕಿ ಮಹಾನಗರ ಪಾಲಿಕೆಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ಕಿತ್ತುಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಲ್ಲೇನು ಹೇಳೊರಿಲ್ವಾ ಕೇಳೊರಿಲ್ವಾ ಈಗಾಗಲೇ ಫ್ಲೈಓವರ್ ಕಾಮಗಾರಿಯಿಂದ ಹುಬ್ಬಳ್ಳಿ ಜನತೆ ಕಂಗಲಾಗಿ ಹೋಗಿದ್ದಾರೆ, ಇಂತಹ ಸಂಧರ್ಭದಲ್ಲಿ ಹುಬ್ಬಳ್ಳಿ ಪ್ರತಿಷ್ಠಿತ ದೇಸಾಯಿ ವೃತ್ತದ ಸೇತುವೆ ಸಂಚಾರ ಬಂದ್ ಮಾಡಿರುವುದರಿಂದ ಹುಬ್ಬಳ್ಳಿ ನಗರದ ಸಂಚಾರ ವ್ಯವಸ್ಥೆಯೇ ಅಸ್ಥವ್ಯಸ್ಥವಾಗಿದೆ...

ಪ್ರೀತಿ ಗಲಾಟೆಗೆ 18ನೇ ವರ್ಷಕ್ಕೆ ಬಾಳು ಅಂತ್ಯ!

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ. ಪ್ರೀತಿಸಿದವನ ಜೊತೆಗೆ ಮದುವೆಯಾಗಲು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಮನನೊಂದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ನಡೆದಿದೆ. ಶ್ವೇತಾ ಕೊಟೆನ್ನವರ ಆತ್ಮಹತ್ಯೆ ಮಾಡಿಕೊಂಡುರುವ ಯುವತಿಯಾಗಿದ್ದು, ಈಕೆಗೆ ಕೇವಲ 18 ವರ್ಷ ವಯಸ್ಸಾಗಿತ್ತು ಅಷ್ಟೇ. ಈಕೆ ಹುಬ್ಬಳ್ಳಿ ತಾಲೂಕಿನ...

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವ್ಯತ್ಯಯ, ತುಮಕೂರಲ್ಲಿ ಕರೆಂಟ್ ಇರಲ್ಲ!

ತುಮಕೂರು ನಗರದಲ್ಲಿ ಮೇ 10ರಂದು ವಿದ್ಯುತ್ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಪ್ರಕಟಿಸಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಬೆಸ್ಕಾಂ ನಗರ ಉಪವಿಭಾಗ–1ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ರಸ್ತೆ ಹಾಗೂ ಹೆದ್ದಾರಿ ಅಭಿವೃದ್ಧಿ ಕಾರ್ಯಗಳ ಕಾರಣದಿಂದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ...
- Advertisement -spot_img

Latest News

ಸಿಎಂ ಹುದ್ದೆ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೆ ಬೇರೆ?

ಕರ್ನಾಟಕ ರಾಜಕಾರಣದಲ್ಲಿ ಮತ್ತೊಮ್ಮೆ ಸಿಎಂ ಹುದ್ದೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಬೆಂಗಳೂರಿನಲ್ಲಿ ನಡೆದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಅವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ...
- Advertisement -spot_img