Thursday, September 24, 2026

ಜಿಲ್ಲಾ ಸುದ್ದಿಗಳು

ಕೆರೆಗಳಲ್ಲಿ ಮೀನು ಸಾವು, ಬೆಳೆ ನಾಶ – ಕೈಗಾರಿಕಾ ತ್ಯಾಜ್ಯದ ವಿರುದ್ಧ ಆಕ್ರೋಶ!

ಶಿರಾ ವಸಂತ ನರಸಾಪುರ ಕೈಗಾರಿಕೆಯಿಂದ ಬರುವ ರಾಸಾಯನಿಕ ತ್ಯಾಜ್ಯ ಮಿಶ್ರಿತ ನೀರು, ಶಿರಾ ತಾಲೂಕಿನ ಹುಂಜಿನಾಳ ಕೆರೆ ಮಾರ್ಗವಾಗಿ ಕಳ್ಳಂಬೆಳ್ಳ, ಶಿರಾ ದೊಡ್ಡಕೆರೆ ಹಾಗೂ ಮದಲೂರು ಕೆರೆಗೆ ಹರಿಯುತ್ತಿದೆ. ಈ ಬಗ್ಗೆ ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೈಗಾರಿಕೆ ಮಾಲೀಕರ ಮೇಲೆ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ನೇತೃತ್ವದಲ್ಲಿ ದೂರು ದಾಖಲಿಸಿದ್ದಾರೆ....

ದೀಪಾವಳಿಗೆ ಮಂಕು ಹೊದಿಸಿದ ಬೀದರ್ ಸ್ನೇಹಿತರ ಭೀಕರ ಅಪಘಾತ!

ಎಲ್ಲೆಡೆ ಇಂದು ದೀಪಾವಳಿ ಸಂಭ್ರಮ. ಹಬ್ಬಕ್ಕೆ ಸ್ನೇಹಿತರೆಲ್ಲರೂ ಸೇರಿ ಖುಷಿ ಖುಷಿಯಾಗಿ ಪ್ಲಾನ್ ಮಾಡಿದ್ರು. ಎಲ್ಲರು ಸೇರಿ ದೇವಸ್ಥಾನಕ್ಕೆ ಹೋಗಿ ಬರೋಣ ಅನ್ಕೊಂಡು ಹೊರಟಿದ್ದರು. ಅಮಾವಾಸೆಯ ಕರಾಳ ಮಂಗಳವಾರ ಎಂಬಂತೆ ದೇವರ ಪಾದವೇ ಸೇರಿಕೊಂಡಿದ್ದಾರೆ. ಮಹಾರಾಷ್ಟ್ರದ ಉಮ್ಮರ್ಗಾ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಬೀದರ್ ಜಿಲ್ಲೆಗೆ ಸೇರಿದ ನಾಲ್ವರು ಯುವಕರು ದುರ್ಮರಣಕ್ಕೀಡಾಗಿದ್ದಾರೆ. ದೀಪಾವಳಿ...

K.R ಪೇಟೆ ತಾಲೂಕಿನಲ್ಲಿ ಕಳ್ಳರ ಹಾವಳಿ : ದೇಗುಲ–ಮನೆ–ಅಂಗಡಿ ಎಲ್ಲೆಡೆ ಕಳ್ಳತನ!

ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲೂಕು ಬೂಕನಕೆರೆ ಹೋಬಳಿ ವ್ಯಾಪ್ತಿಯಲ್ಲಿ, ಇತ್ತೀಚೆಗೆ ನಡೆದ ಸರಣಿ ಕಳ್ಳತನಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದೇಗುಲಗಳು, ಅಂಗಡಿಗಳು, ಹಾಗೂ ಮನೆಗಳಲ್ಲಿ ನಡೆಯುತ್ತಿರುವ ಕಳ್ಳತನಗಳಿಂದ ಸ್ಥಳೀಯರು ನಿದ್ದೆ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದೊಳಗೆ ನಾಲ್ಕು-ಐದು ಕಳ್ಳತನ ಪ್ರಕರಣಗಳು ವರದಿಯಾಗಿದ್ದು, ಕಳ್ಳರ ಹಾವಳಿಗೆ ಗ್ರಾಮಸ್ಥರು ತತ್ತರಿಸಿದ್ದಾರೆ. ಇತ್ತೀಚಿನ ಘಟನೆಯಾಗಿ, ತಾಲೂಕಿನ ಗಂಜೀಗೆರೆ...

ದುರಂತಕ್ಕೆ ತಿರುಗಿದ ದೀಪಾವಳಿ : ಮೂರು ಜೀವಗಳು ನೀರುಪಾಲು

ಮೈಸೂರಿನ ಸಾಲಿಗ್ರಾಮ ತಾಲೂಕಿನ ಭಾಸ್ಕರ ದೇವಾಲಯದ ಬಳಿ ಸೋಮವಾರ ಸಂಭವಿಸಿದ ದಾರುಣ ಘಟನೆದಲ್ಲಿ ಮೂವರು ಬಾಲಕರು ನೀರುಪಾಲಾಗಿದ್ದಾರೆ. ಸಾಲಿಗ್ರಾಮ ಪಟ್ಟಣದ ಕೋಟೆ ಬೀದಿಯ ನಿವಾಸಿಗಳಾದ 16 ವರ್ಷದ ಅಯಾನ್‌, 13 ವರ್ಷದ ಆಜಾನ್‌ ಹಾಗೂ 14 ವರ್ಷದ ಲುಕ್ಮಾನ್‌ ಮೃತಪಟ್ಟಿದ್ದಾರೆ. ಅಯಾನ್‌ ಮತ್ತು ಆಜಾನ್‌ ಕೆ.ಆರ್.ಪೇಟೆಯ ನವೋದಯ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದೀಪಾವಳಿ ರಜೆಯ ನಿಮಿತ್ತ...

ದೀಪಾಲಂಕಾರದಲ್ಲಿ ಕಂಗೊಳಿಸಿದ ಜನ ನಾಯಕನ ಬೃಹತ್ ಪ್ರತಿಮೆ!

ಕೊಪ್ಪಳ ಜಿಲ್ಲೆಯ ಐತಿಹಾಸಿಕ ಹಿನ್ನಲೆ ಹೊಂದಿರುವ ಶಿರೂರ ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಂದರ್ಭದಂದು ಸ್ಥಳೀಯರು ತೀವ್ರ ಆಕರ್ಷಣೆಗೆ ಒಳಗಾಗುವಂತಹ ದೃಶ್ಯವೊಂದು ಮೂಡಿಬಂದಿದೆ. ಶಿರೂರ ಗ್ರಾಮ ಪ್ರವೇಶದ ಬಾಗಿಲಿನಲ್ಲೇ ಪ್ರತಿಷ್ಠಾಪಿಸಲಾದ ಜನಪರ ನಾಯಕ ಕೆ.ಎಚ್. ಪಾಟೀಲರ ಪ್ರತಿಮೆ ವಿಭಿನ್ನ ರೀತಿಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಬೆಳಗುತ್ತಾ ಸಂಚರಿಸುವ ಜನರ ಗಮನ ಸೆಳೆಯುತ್ತಿದೆ. ಕೆ.ಎಚ್. ಪಾಟೀಲ್ ಕರುನಾಡು ಕಂಡ ಸರ್ವ...

₹8,500 ಕೋಟಿ ನೆರವು ಬೇಕು : ಕೇಂದ್ರದ ವಿರುದ್ಧ ಚಲುವರಾಯಸ್ವಾಮಿ ಕಿಡಿ!

ಮಂಡ್ಯ: ರಾಜ್ಯದಲ್ಲಿ 14 ಲಕ್ಷ ಹೆಕ್ಟೇರ್‌ ಬೆಳೆ ನಷ್ಟ ಸಂಭವಿಸಿದ್ದು, 15 ಜಿಲ್ಲೆಗಳು ತೀವ್ರ ಹಾನಿಗೆ ಒಳಗಾಗಿವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ನಿಗದಿಪಡಿಸಿದ ಮೊತ್ತಕ್ಕಿಂತಲೂ ₹8,500 ಕೋಟಿ ಹೆಚ್ಚುವರಿ ನೆರವು ಅಗತ್ಯವಿದೆ ಎಂದು ಹೇಳಿದ ಅವರು, ಕೇಂದ್ರ ಸಚಿವರು ಮತ್ತು ಸಂಸದರು ರಾಜ್ಯದ ಪರವಾಗಿ ಧ್ವನಿ ಎತ್ತಬೇಕು ಎಂದು...

ದಶಕದ ಮೈಸೂರು ಪಾಲಿಕೆ ಕನಸು ಭಗ್ನ: ಗ್ರೇಡ್-1 ಯೋಜನೆ ಸ್ಥಗಿತ

ಮೈಸೂರು: ಆರ್ಥಿಕ ಇಲಾಖೆಯ ಅನುಮೋದನೆ ಲಭ್ಯವಾಗದ ಹಿನ್ನೆಲೆಯಲ್ಲಿ, ಮೈಸೂರು ಮಹಾನಗರ ಪಾಲಿಕೆಯನ್ನು ಈ ವರ್ಷ ಗ್ರೇಡ್–1 ಪಾಲಿಕೆಯಾಗಿ ಮೇಲ್ದರ್ಜೆಗೇರಿಸುವ ಸರ್ಕಾರದ ಯೋಜನೆ ಕೈಬಿಡಲಾಗಿದೆ. ಮೈಸೂರನ್ನು ಬೆಂಗಳೂರಿನ ಬಿಬಿಎಂಪಿ ಮಾದರಿಯಲ್ಲಿ ಬೃಹತ್ ಮಹಾನಗರ ಪಾಲಿಕೆಯನ್ನಾಗಿ ರೂಪಿಸುವ ಕುರಿತು ಸರ್ಕಾರ ಚಿಂತನೆ ನಡೆಸಿತ್ತು. ಈ ಯೋಜನೆಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಆಸಕ್ತಿ...

ರಮೇಶ್ ಕತ್ತಿಯನ್ನ ಬಂಧಿಸದಿದ್ದರೆ ಅಕ್ಟೊಬರ್ 24ಕ್ಕೆ ಬೆಳಗಾವಿ ಬಂದ್!

ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾಜಿ ಸಂಸದ ರಮೇಶ್ ಕತ್ತಿಯ ವಿರುದ್ಧ ವಾಲ್ಮೀಕಿ ಸಮುದಾಯದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಕತ್ತಿಯವರು ಸಮುದಾಯದ ಬಗ್ಗೆ ನೀಡಿದ ಅವಹೇಳನಕಾರಿ ಹೇಳಿಕೆಗೆ ಆಕ್ರೋಶಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿದರೆ ಮಾತ್ರವಲ್ಲದೇ, ಟೈರ್‌ಗೆ ಬೆಂಕಿ ಹಚ್ಚಿ, ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ತಮ್ಮ ವಿರೋಧ ವ್ಯಕ್ತಪಡಿಸಿದರು. ಕೇವಲ ಬೆಳಗಾವಿ...

ಕೆರೆಯಾದ ತಿಪಟೂರು ಹೆದ್ದಾರಿ, ಅಂಡರ್‌ಪಾಸ್!

ತುಮಕೂರು ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗ್ತಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ತಿಪಟೂರು ಬಳಿಯ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದ್ದು, ಮಳೆ ನೀರಿನಿಂದ ಆವೃತವಾಗಿದೆ. ಮೇಲ್ಸೇತುವೆ ಕೆಳಗಿನ ಅಂಡರ್‌ಪಾಸ್‌, ರಸ್ತೆಗಳಲ್ಲಿ ನೀರು ನಿಂತಿದ್ದು, ಕೆರೆಯಂತೆ ಭಾಸವಾಗ್ತಿದೆ. ಅಕ್ಕಪಕ್ಕದ ಜಮೀನುಗಳಿಗೂ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ. ಹೆದ್ದಾರಿಯಲ್ಲಿ ವಾಹನ ಸಂಚಾರ ಭಾರೀ ಕಷ್ಟವಾಗಿದ್ದು, ಅಕ್ಕಪಕ್ಕದ ಗ್ರಾಮಗಳ ಪ್ರಯಾಣಿಕರು ಪರದಾಡುವಂತಾಗಿದೆ.

ಹಾಸನಾಂಬೆ ದರ್ಶನಕ್ಕೆ ಇನ್ನು 2 ದಿನವಷ್ಟೇ ಬಾಕಿ!

ಪ್ರಖ್ಯಾತ ಹಾಸನಾಂಬ ಉತ್ಸವ ಆರಂಭವಾಗಿ 11 ದಿನಕ್ಕೆ ಕಾಲಿಟ್ಟರೂ, ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು, ಕೇವಲ 2 ದಿನ ಮಾತ್ರ ಹಾಸನಾಂಬ ದರ್ಶನ ಸಿಗಲಿದೆ. ಈಗ ಬಿಟ್ರೆ ಮುಂದಿನ ವರ್ಷದವರೆಗೂ ಕಾಯಲೇಬೇಕು. ಹೀಗಾಗಿ ಸಾಗರೋಪಾದಿಯಲ್ಲಿ ಭಕ್ತರು ಆಗಮಿಸುತ್ತಿದ್ದು, ಪ್ರತಿ ದಿನ ಭಕ್ತರ ಸಂಖ್ಯೆ ಎರಡ್ಮೂರು ಲಕ್ಷ ದಾಟುತ್ತಿದೆ. ಇಂದು ಕೂಡ ಮುಂಜಾನೆ 5 ಗಂಟೆಯಿಂದಲೇ...
- Advertisement -spot_img

Latest News

Political News: ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಂಸದ ಡಾ.ಸಿ.ಎನ್. ಮಂಜುನಾಥ್

Political News: ಇಂದು ಸಂಸದ ಡಾ.ಸಿ.ಎನ್. ಮಂಜುನಾಥ್ ಅವರ ಜನ್ಮದಿನವಾಗಿದ್ದು, ಅರ್ಥಪೂರ್ಣವಾಗಿ ಅವರಿಂದು ಜನ್ಮ ದಿನವನ್ನು ಆಚರಿಸಿಕ``ಂಡಿದ್ದಾರೆ. ಇಂದು ಪೌರಕಾರ್ಮಿಕರ ದಿನವೂ ಆದ್ದರಿಂದ, ಮಂಜುನಾಥ್ ಮತ್ತು ಅವರ...
- Advertisement -spot_img