Central government : 18 ವರ್ಷದೊಳಗಿನವರಿಗೆ ಆಯಂಟಿಬಾಡಿ ಔಷಧಿ ಬೇಡ.

ನವದೆಹಲಿ: ಕೋವಿಡ್ ಸೋಂಕಿನ ತೀವ್ರತೆ ಎಷ್ಟೇ ಇದ್ದರೂ 18 ವರ್ಷದೊಳಗಿನ ಮಕ್ಕಳಿಗೆ, ಪ್ರತಿಕಾಯ ಸೃಷ್ಟಿಗೆ ಪೂರಕವಾದ ಆಯಂಟಿಬಾಡಿ ಔಷಧಗಳನ್ನು ಬಳಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಮಕ್ಕಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋವಿಡ್‌ ಮಾರ್ಗ ಸೂಚಿಯನ್ನು ಹೊರಡಿಸಿದ್ದು, 5 ವರ್ಷ ಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್‌ ಅಗತ್ಯವಿಲ್ಲ.

6 ರಿಂದ 11 ವರ್ಷದ ಮಕ್ಕಳು ಪಾಲಕರ ನಿಗಾದಲ್ಲಿ ಮಾಸ್ಕ್‌ ಹಾಕಬೇಕು. 12 ರಿಂದ 18 ವರ್ಷದ ಮಕ್ಕಳು ದೊಡ್ಡವರಂತೆ ಮಾಸ್ಕ್‌ ಧರಿಸಬೇಕು ಎಂದು ಸೂಚಿಸಿದೆ.

ಕೊರೋನಾ, ಓಮಿಕ್ರಾನ್ ಸೋಂಕು ತೀವ್ರತೆ ಎಷ್ಟೇ ಇದ್ದರೂ 18 ವರ್ಷದೊಳಗಿನ ಮಕ್ಕಳಿಗೆ, ರೋಗ ನಿರೋಧಕ ಸೃಷ್ಟಿಗೆ ಪೂರಕವಾದ ಆಯಂಟಿಬಾಡಿ ಔಷಧಗಳನ್ನು ಬಳಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ. ಸ್ಟಿರಾಯ್ಡ್ ಅನ್ನು ಬಳಸುವುದಾದರೂ ಅದು 10 ರಿಂದ 14 ದಿನಕ್ಕೆ ಸೀಮಿತವಾಗಿರಬೇಕು ಎಂದು ಹೇಳಿದೆ.

ಒಮಿಕ್ರಾನ್‌ ರೂಪಾಂತರ ತಳಿಯ ಕೋವಿಡ್‌ ಸೋಂಕು ಪ್ರಕರಣ ಏರಿಕೆಯ ಹಿನ್ನೆಲೆಯಲ್ಲಿ ತಜ್ಞರ ಸಮಿತಿಯು ಗುರುವಾರ ಕೋವಿಡ್‌ ಮಾರ್ಗಸೂಚಿಗಳನ್ನು ಪರಿಷ್ಕರಿಸಿತು. ಇತರೆ ದೇಶಗಳಿಗೆ ಸಂಬಂಧಿಸಿದ ಅಂಕಿ ಅಂಶಗಳ ಪ್ರಕಾರ, ಓಮೈಕ್ರಾನ್‌ ಸೋಂಕಿನ ಪರಿಣಾಮ, ತೀವ್ರತೆ ಕಡಿಮೆ ಆಗಿದೆ. ಆದರೂ, ಪ್ರಸ್ತುತ ಏರಿಕೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವುದು
ಅಗತ್ಯವಾಗಿದೆ ಎಂದು ಹೇಳಿದೆ.

About The Author