Sunday, September 15, 2024

Latest Posts

ರೈತರಿಗಾಗಿ ಸಂಸದೆ ಸುಮಲತಾ ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ..!

- Advertisement -

ಬೆಂಗಳೂರು: ದೆಹಲಿಗೆ ಭೇಟಿ ನೀಡಿದ್ದ ಮೊದಲ ದಿನವೇ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಂಡ್ಯ ರೈತರು ಎದುರಿಸುತ್ತಿರೋ ನೀರಿನ ಸಮಸ್ಯೆ ಬಗ್ಗೆ ಸಂಸದೆ ಸುಮಲತಾ ಚರ್ಚಿಸಿದ್ರು. ಇದೀಗ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಯುತ್ತಿದ್ದು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತೆ ಅಂತ ಕೇಂದ್ರ ಸಚಿವ ಸದಾನಂದ ಗೌಡ ಭರವಸೆ ನೀಡಿದ್ದಾರೆ.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ದೆಹಲಿಯಲ್ಲಿಂದು ಸಭೆ ನಡೆಯುತ್ತಿದೆ. ಈ ಹಿಂದೆ ಸಂಸದೆ ಸುಮಲತಾ ರೈತರ ಬೆಳೆ ನೀರಿಲ್ಲದೆ ಒಣಗುತ್ತಿದ್ದು ಅವರಿಗೆ ನೀರು ಹರಿಸುವ ಅಗತ್ಯವಿದೆ ಹೀಗಾಗಿ ಕೆ ಆರ್ ಎಸ್ ನಿಂದ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರೋ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ,-‘ಬೆಳೆದಿರುವ ಫಸಲನ್ನು ಉಳಿಸಲಿಕ್ಕಾಗಿ ಕೆ.ಅರ.ಎಸ ನಿಂದ 2 TMC ನೀರನ್ನು ಮಂಡ್ಯ ಜಿಲ್ಲೆಗೆ ಬಿಡುವಂತೆ ಕಾವೇರಿ ನಿರ್ವಹಣಾ ಮಂಡಳಿಯ ಅಧ್ಯಕ್ಷರಿಗೆ ಪತ್ರ ಬರೆಯಲಾಗಿತ್ತು . ನಾಳೆ ಸೇರುವ ಮಂಡಳಿಯ ಸಭೆಯಲ್ಲಿ ಸೂಕ್ತ ನಿರ್ಧಾರ ತೆಗೆದುಕ್ಕೊಳ್ಳುವುದಾಗಿ ತಿಳಿಸಿದ್ದಾರೆ’ ಅಂತ ಹೇಳಿದ್ದಾರೆ. ಈ ಮೂಲಕ ಮಂಡ್ಯ ಜಿಲ್ಲೆಯ ರೈತರಿಗೆ ನೀರು ಹರಿಸುವ ಕುರಿತಂತೆ ಮಾಡಿದ್ದ ಮನವಿಗೆ ಸದಾನಂದಗೌಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ರಾಜ್ಯಕ್ಕೆ ಜಲಸಂಕಟದ ಭೀತಿ..! ಹೀಗಿರೋವಾಗ ತಮಿಳುನಾಡಿಗೆ ನೀರು ಬಿಡ್ಬೇಕಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=PnWTRFiQDUI
- Advertisement -

Latest Posts

Don't Miss