Tuesday, July 16, 2024

Latest Posts

ಸಂಸದೆ ಸುಮಲತಾ ಬಗ್ಗೆ ನಿಖಿಲ್ ಕುಮಾರ್ ವ್ಯಂಗ್ಯ..!

- Advertisement -

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ವಿರುದ್ಧ ಸ್ಪರ್ಧಿಸಿ ಸೋಲನುಭವಿಸಿದ್ದ ನಿಖಿಲ್ ಕುಮಾರ್ ಕಾವೇರಿ ವಿಚಾರವಾಗಿ ಸಂಸದೆ ಸುಮಲತಾ ಅಂಬರೀಶ್ ವಿರುದ್ಧ ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

ಕಾವೇರಿ ನೀರು ಹಂಚಿಕೆ ವಿಚಾರವಾಗಿ ಚರ್ಚೆ ಮಾಡುತ್ತಿದ್ದ ನಿಖಿಲ್ ಕುಮಾರ್, ಕಾವೇರಿ ನೀರು ವಿಚಾರವಾಗಿ ನೀವು ಆರಿಸಿದ ಸಂಸದರೇ ಹೋರಾಟ ಮಾಡ್ತಾರೆ ಬಿಡಿ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವರು. ಅವರಿಗೆ ಒಳ್ಳೇ ಕಾಂಟ್ಯಾಕ್ಟ್ಸ್ ಇವೆ. ಪ್ರಧಾನಿ ಮೋದಿವರೆಗೂ ಅವರಿಗೆ ಕಾಂಟ್ಯಾಕ್ಟ್ ಇದೆ. ನಾವೆಲ್ಲಾ ಯಾರು ಸ್ವಾಮಿ, ಸಣ್ಣವರು. ಆದ್ರೆ ನಾವು ಕಾವೇರಿ ವಿಚಾರವಾಗಿ ದೇವೇಗೌಡರು ನಡೆಸುತ್ತಿರೋ ಹೋರಾಟ ಮುಂದುವರೆಸೋದಕ್ಕೆ ಅತ್ಯಂತ ಪ್ರಾಮಾಣಿಕವಾಗಿ ಪ್ರಯತ್ನಿಸ್ತೇವೆ. ಆದ್ರೆ ನೀವು ಆಯ್ಕೆ ಮಾಡಿ ಕಳುಹಿಸಿರೋ ಸಂಸದರದ್ದೂ ಜವಾಬ್ದಾರಿ ಇದೆ. ಅವರ ಜವಾಬ್ದಾರಿಯನ್ನು ನಿಭಾಯಿಸ್ತಾರೆ ಅನ್ನೋ ನಂಬಿಕೆ ನನ್ನಲ್ಲಿ ಹಾಗೂ ಜನಗಳಲ್ಲಿದೆ ಅಂತ ನಿಖಿಲ್ ಕುಮಾರ್ ಸಂಸದೆ ಸುಮಲತಾರನ್ನು ವ್ಯಂಗ್ಯ ಮಾಡಿದ್ದಾರೆ.

ಸುಮಲತಾ ಬಗ್ಗೆ ನಿಖಿಲ್ ಮಾತನಾಡಿರೋ ವಿಡಿಯೋ ನೋಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. https://m.facebook.com/story.php?story_fbid=947054885626182&id=392102277788115

ರಾಜ್ಯದಲ್ಲಿ ಜಲ ಸಂಕಟ ಇರೋವಾಗ ತಮಿಳುನಾಡಿಗೆ ನೀರು ಬಿಡ್ಬೇಕಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=PnWTRFiQDUI

- Advertisement -

Latest Posts

Don't Miss