Udupi News : ಬಗೆದಷ್ಟು ಬಯಲಾಗುತ್ತಿದೆ ಚೈತ್ರಾ ಕುಂದಾಪುರ ವಂಚನೆ ಜಾಲ. ಇದೀಗ ಮತ್ತೆ ಚೈತ್ರಾ ಮೇಲೆ ಮತ್ತೊಂದು ಕೇಸ್ ಫೈಲ್ ಆಗಿದೆ. ಅದು ಕೂಡಾ ಉಡುಪಿ ಕೋಟಾ ದಲ್ಲೇ ಕೇಸ್ ಫೈಲ್ ಆಗಿದೆ. ಚೈತ್ರ ಕುಂದಾಪುರ ವಿರುದ್ದ ಮತ್ತೊಂದು ವಂಚನೆ ಪ್ರಕರಣ ಬಯಲಾಗಿದೆ. ಈ ಸಂಬಂಧ ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವೃತ್ತಿಯಲ್ಲಿ ಮೀನುಗಾರನಾಗಿರುವ ಬ್ರಹ್ಮಾವರ ನಿವಾಸಿ ಸುದೀನ ಎಂಬುವರು ಚೈತ್ರಾ ವಿರುದ್ಧ ದೂರು ನೀಡಿದ್ದಾರೆ. ಬಟ್ಟೆ ಅಂಗಡಿ ಹಾಕಿಸಿಕೊಡುತ್ತೇನೆ ಎಂದು ಚೈತ್ರಾ ಕುಂದಾಪುರ ಐದು ಲಕ್ಷ ರೂಪಾಯಿ ವಂಚಿಸಿದ್ದಾರೆ ಅಂತ ಸುದೀನ ಆರೋಪಿಸಿದ್ದಾರೆ.
2015ರಲ್ಲಿ ಸುದೀನ ಅವರಿಗೆ ಚೈತ್ರಾ ಕುಂದಾಪುರ ಪರಿಚಯವಾಗಿತ್ತು. ಈ ವೇಳೆ ನನಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಸ್ಥಾನದಲ್ಲಿರುವ ಸಚಿವರು, ಮಂತ್ರಿಗಳು, ಶಾಸಕರ ನಿಕಟ ಸಂಪರ್ಕವಿದೆ ಎಂದು ಚೈತ್ರಾ ನಂಬಿಸಿದ್ದರಂತೆ.
2018-2023ರ ಅವಧಿಯಲ್ಲಿ ಅಂಗಡಿ ನಿರ್ಮಾಣಕ್ಕೆ ಐದು ಲಕ್ಷ ಹಂತ ಹಂತವಾಗಿ ಸುದೀನ್ ಅವರಿಂದ ಚೈತ್ರಾ ಪಡೆದಿದ್ದರಂತೆ. ಈ ಪೈಕಿ ಮೂರು ಲಕ್ಷವನ್ನ ಚೈತ್ರಾ ಖಾತೆಗೆ ಸುದೀನ ವರ್ಗಾಯಿಸಿದ್ದರು.
ಉಳಿದ ಎರಡು ಲಕ್ಷ ಹಣವನ್ನ ನಗದು ರೂಪದಲ್ಲಿ ಸುದೀನ ನೀಡಿದ್ದರಂತೆ. ಕೋಟ ಗ್ರಾಮದಲ್ಲಿ ಬಟ್ಟೆ ಅಂಗಡಿ ಮಾಡಿಸಿಕೊಡುವುದಾಗಿ ಚೈತ್ರಾ ಕುಂದಾಪುರ ವಂಚಿಸಿದ್ದಾರಂತೆ.ಬಟ್ಟೆ ಅಂಗಡಿಗೆ ಹಣ ಪಡೆದು ನಿರ್ಮಾಣ ವಿಳಂಬವಾದಾಗ ಇನ್ನಷ್ಟು ಹಣದ ಬೇಡಿಕೆ ಇಟ್ಟಿದ್ದರಂತೆ. ಅಂಗಡಿ ನಿರ್ಮಣ ವಿಳಂಬವಾಗಿರುವುದಕ್ಕೆ ಸ್ಥಳೀಯ ಮುಖಂಡರಲ್ಲಿ ಮತುಕತೆ ನಡೆಸಿದ್ದೇನೆ, ಇನ್ನೇನು ಅಂತಿಮ ಹಂತದಲ್ಲಿದೆ ಅಂತ ಚೈತ್ರಾ ನಂಬಿಸಿದ್ದರಂತೆ.ಕೊನೆಗೆ ಚುನಾವಣಾ ಪ್ರಚಾರ, ಭಾಷಣ, ಕಾರ್ಯ ಕಾರಿಣಿ ಸಭೆ, ಪಕ್ಷದ ಮುಖಂಡರ ಭೇಟಿ ನೆಪ ಹೇಳಿ ಸುದೀನನಿಂದ ಚೈತ್ರಾ ತಪ್ಪಿಸಿಕೊಳ್ಳುತ್ತಿದ್ದರಂತೆ. ಈಕೆಯ ನಡೆಯಿಂದ ಅನುಮಾನಗೊಂಡ ಸುದೀನ, ಕೂಡಲೇ ಬಟ್ಟೆ ಅಂಗಡಿ ಮಾಡಿಸಿಕೊಡಿ ಅಂತ ಒತ್ತಾಯಿಸಿದ್ರಂತೆ.ಕೂಡಲೇ ಬೆದರಿಕೆ ಹಾಕಿದ್ರಂತೆ. ಸಾಲದ್ದಕ್ಕೆ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆ, ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು ಅಂತ ದೂರುದಾರ ಆರೋಪಿಸಿದ್ದಾರೆ.
ಇದೀಗ ಸುದೀನ ಅವರು ಚೈತ್ರಾ ಕುಂದಾಪುರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರಂತೆ ಚೈತ್ರ ವಿರುದ್ದ 506, 417, 420 ಐಪಿಸಿ ಸೆಕ್ಷನ್ ಅಡಿ ಎಫ್ಐಆರ್ ದಾಖಲಾಗಿದೆ.
Chaitra kundapura: ಚೈತ್ರಾ ಭಾಷಣ ಸ್ಥಳವನ್ನು ತೀರ್ಥ ಸಿಂಪಡಿಸಿ ಶುದ್ದಿ ಮಾಡಿದ ಗ್ರಾಮಸ್ಥರು..!
Mobile Video: ಬಸ್ ನಲ್ಲಿ ಕಳ್ಳತನ ಮಾಡುತ್ತಿರುವದು ಮೊಬೈಲ್ ನಲ್ಲಿ ವೀಡಿಯೋ ಸೆರೆಯಾಗಿದೆ.