Bigg Boss News: ನಿನ್ನೆಯಷ್ಟೇ ಬಿಗ್‌ಬಾಸ್ ಮನೆಯಿಂದ ಶೋಭಾಶೆಟ್ಟಿ ಹೊರಬಂದಿದ್ದರು. ಹಾಗಾಗಿ ಹೊರಹೋಗಬೇಕಿದ್ದ ಐಶ್ವರ್ಯಾ ಒಳಗೇ ಉಳಿದುಕೊಂಡರು. ಆದರೆ ಇಂದು ಸಡನ್ ಆಗಿ ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆಯಿಂದ ಹೊರನಡೆದಿದ್ದಾರೆ.
ಇದಕ್ಕೆ ಕಾರಣವೇನು ಅಂದ್ರೆ, ಚೈತ್ರಾ ವಿರುದ್ಧ ಕುಂದಾಪುರದ ಉದ್ಯಮಿಯೊಬ್ಬರಿಗೆ ಚೈತ್ರಾ, ಎಂಎಲ್‌ಎ ಟಿಕೇಟ್ ಕೊಡಿಸುವುದಾಗಿ, 5 ಕೋಟಿ ರೂಪಾಯಿ ವಂಚನೆ ಮಾಡಿದ್ದರು. ಈ ಪ್ರಕರಣ ಸದ್ಯ ಕೋರ್ಟ್‌ನಲ್ಲಿ ಇದೆ. ಈ ಪ್ರಕರಣದಲ್ಲಿ ವಾರಂಟ್ ಜಾರಿಯಾದ ಹಿನ್ನೆಲೆ ಚೈತ್ರಾ ಕುಂದಾಪುರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಇನ್ನು ಅವರು ಕೋರ್ಟ್‌ಗೆ ಹಾಜರಾಗಬೇಕಿದೆ.
ಹಾಗಂತ ಚೈತ್ರಾ ಹೊರಗೆ ಉಳಿದುಕೊಂಡಿಲ್ಲ. ಬದಲಾಗಿ ಕೋರ್ಟ್‌ಗೆ ಹೋಗಿ, ತಮ್ಮ ಕೆಲಸ ಮುಗಿಸಿ, ವಾಪಸ್ ಬಿಗ್‌ಬಾಸ್ ಮನೆಗೆ ಬಂದು, ಆಟ ಮುಂದುವರಿಸಲಿದ್ದಾರೆ.
ಕುಂದಾಪುರದ ಉದ್ಯಮಿ ಗೋವಿಂದಬಾಬು ಪೂಜಾರಿ ಅವರಿಗೆ ಚೈತ್ರಾ ಮತ್ತು ಶ್ರೀಕಾಂತ್ ಸೇರಿ, ಕೆಲವರು ಬಿಜೆಪಿ ಎಂಎಲ್‌ಎ ಟಿಕೇಟ್ ಕೊಡಿಸುವುದಾಗಿ ಹೇಳಿ, 5 ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದರು. ಹೀಗಾಗಿ ಕೆಲ ತಿಂಗಳ ಹಿಂದೆ ಚೈತ್ರಾ ಗ್ಯಾಂಗ್ ಅರೆಸ್ಟ್ ಆಗಿತ್ತು. ಈ ವೇಳೆ ಚೈತ್ರಾ ಬಾಯಲ್ಲಿ ಸೋಪ್ ನೊರೆ ಹಾಕಿ, ದೊಡ್ಡ ಡ್ರಾಮಾ ಸೃಷ್ಟಿಸಿದ್ದರು. ಬಳಿಕ ಬೇಲ್ ಮೇಲೆ ರಿಲೀಸ್ ಆಗಿದ್ದರು.
ಈ ಬಾರಿಯ ಬಿಗ್‌ಬಾಸ್ ಸೀಸನ್ 11ಗೆ ಎಂಟ್ರಿ ಕೊಟ್ಟಿದ್ದ ಚೈತ್ರಾ ಕುಂದಾಪುರ, ಟಾಸ್ಕ್ ಆಗಿ ಫೇಮಸ್ ಆಗುವುದಕ್ಕಿಂತ, ಜಗಳವಾಡಿಯೇ ಸುದ್ದಿಯಾಗಿದ್ದಾರೆ.

