Monday, February 3, 2025

Latest Posts

Chanakya Neeti: ಹಣಕ್ಕಿಂತ ಈ ವಿಚಾರಕ್ಕೆ ಹೆಚ್ಚು ಬೆಲೆ ಕೊಡಿ ಅಂದಿದ್ದಾರೆ ಚಾಣಕ್ಯರು.

- Advertisement -

Chanakya Neeti: ಇಂದಿನ ಕಾಲದಲ್ಲಿ ಹಲವರು ಚೆನ್ನಾಗಿ ಹಣ ಸಂಂಪಾದನೆ ಮಾಡಬೇಕು ಎನ್ನುವ ಗುರಿ ಹೊಂದಿದ್ದಾರೆ. ಇದಕ್ಕೆ ಹಲವು ಕಾರಣಗಳೂ ಇದೆ. ಹಲವು ಸಂಂಬಂಧಗಳು ಹಣದಾಸೆಗೆ ಬಲಿಯಾಗುತ್ತಿದೆ. ಮೊದಲೆಲ್ಲ ಹೆಣ್ಣು ಕೊಡುವವರು ಅಥವಾ ಪತ್ನಿಯಾದವಳು ಪತಿಯ ಹಣ ಬಯಸುತ್ತಿದ್ದಳು ಅಂತಾ ಹೇಳುತ್ತಿದ್ದರು. ಆದರೆ ಇಂದಿನ ಕಾಲದಲ್ಲಿ ರಕ್ತ ಸಂಬಂಧದಲ್ಲೇ ಹಣಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿದೆ. ಹೆತ್ತ ಮಗನಿಗೆ ಸರಿಯಾಗಿ ಸಂಬಳ ಬರದಿದ್ದರೆ, ಅಥವಾ ಮಗ ಮನೆಗೆ ಸಂಬಳ ಕೊಡದಿದ್ದರೆ, ಅಪ್ಪ ಅಮ್ಮನೇ ಆ ಮಗನಿಗೆ ಬೈದುಕೊಂಡೇ ಊಟ ಹಾಕುತ್ತಾರೆ. ಅಂಥ ಪರಿಸ್ಥಿತಿ ಇದೆ.

ಅಲ್ಲದೇ, ದಿನದಿಂದ ದಿನಕ್ಕೆ ಎಲ್ಲ ವಸ್ತುವಿನ ಬೆಲೆಗಳು ಗಗನಕ್ಕೇರುತ್ತಿದೆ. ಹೊಸ ಹೊಸ ವಸ್ತುಗಳು ಮಾರುಕಟ್ಟೆಗೆ ಬರುತ್ತಿದೆ. ಕೆಲವು ವಸ್ತುಗಳು ಜೀವನಕ್ಕೆ ಅನಿವಾರ್ಯ ಎಂಬಂತಾಗಿದೆ. ಮತ್ತೆ ಕೆಲವು ವಸ್ತುಗಳು ತೋರಿಕೆಗಾಗಿ ಬಲಸಲಾಗುತ್ತಿದೆ. ಹೀಗೆ ಈ ಎಲ್ಲ ಶೋಕಿ, ಕೊಂಕು ಮಾತು ಇವೆಲ್ಲವೂ ಮನುಷ್ಯ ದುಡ್ಡು ಮಾಡಬೇಕು ಎಂದು ಹಂಬಲಿಸಲು ಕಾರಣವಾಗಿದೆ. ಆದರೆ ಚಾಣಕ್ಯರು ಹಣಕ್ಕಿಂತ ಈ ವಿಷಯಗಳು ತುಂಬಾನೇ ಮುಖ್ಯ ಎಂದಿದ್ದಾರೆ. ಆ ವಿಷಯಗಳು ಯಾವುದು ಅಂತಾ ತಿಳಿಯೋಣ ಬನ್ನಿ.

ಚಾಣಕ್ಯರು ಹೇಳುವ ಪ್ರಕಾರ ನಾಾವು ನಮ್ಮ ಧರ್ಮವನ್ನು ಗೌರವಿಸಬೇಕು. ಧರ್ಮಕ್ಕೆ ತಕ್ಕಂತೆ ಜೀವನ ಮಾಡಬೇಕು. ದೇವರಲ್ಲಿ ಭಕ್ತಿ ಹೊಂದಬೇಕು. ಶುದ್ಧ ಮನಸ್ಸಿನವರಾಗಿರಬೇಕು. ಇನ್ನೊಬ್ಬರಿಗೆ ಕೇಡು ಬಯಸಿ, ಹಿರಿಯರಿಗೆ ಗೌರವಿಸದೇ, ಕಿರಿಯರನ್ನ ಪ್ರೀತಿಸದೇ, ದೇವರ ಭಕ್ತಿ ಮಾಡಿದರೆ, ಅದೆಂದೂ ದೇವರಿಗೆ ಸಲ್ಲುವುದಿಲ್ಲ. ಹಾಗಾಗಿ ಧರ್ಮವನ್ನು ಗೌರವಿಸುವವರು ಸಂಬಂಧವನ್ನೂ ಗೌರವಿಸಬೇಕು. ಧಾರ್ಮಿಕ ಆಚರಣೆ, ಧರ್ಮದ ಗೌರವ ಕಾಪಾಡುವುದರಿಂದ ಮನುಷ್ಯನ ಉನ್ನತಿಯಾಗುತ್ತದೆ. ಆತ ಸಮಾಜದಲ್ಲಿ ಗೌರವಯುತನಾಗಿ ಇರುವವನಲ್ಲದೇ, ಜೀವನದಲ್ಲಿ ಹಲವು ಕಷ್ಟಗಳನ್ನು ಎದುರಿಸುವ ಶಕ್ತಿ ಹೊಂದುತ್ತಾನೆ.

ಎರಡನೇಯದಾಗಿ ಸ್ವಾಭಿಮಾನಕ್ಕೆ ನಾವು ಹೆಚ್ಚು ಬೆಲೆ ಕೊಡಬೇಕು. ಜೀವಿಸಲು ದುಡ್ಡು ಬೇಕು ಎನ್ನುವುದು ಎಷ್ಟು ಮುಖ್ಯವೋ, ಅದನ್ನು ಸಂಪಾದನೆ ಮಾಡುವಾಗ, ನಾವು ಸ್ವಾಭಿಮಾನಿಗಳಾಗಿರಬೇಕು ಅನ್ನೋದು ಅಷ್ಟೇ ಮುಖ್ಯ. ನಮಗೆ ಗೌರವ ತರುವ ಕೆಲಸವನ್ನೇ ನಾವು ಆಯ್ಕೆ ಮಾಡಬೇಕು. ಹೆಚ್ಚು ದುಡ್ಡು ಸಿಗುತ್ತದೆ ಎಂದು ಕಂಡ ಕಂಡವರ ಬಳಿ ಕೆಲಸ ಮಾಡುವುದು, ಕಂಡ ಕಂಡಲ್ಲಿ ಕೆಲಸ ಮಾಡುವುದೆಲ್ಲ ಮಾಡಿದರೆ, ಸಮಾಜದಲ್ಲಿ ನಮ್ಮ ಗೌರವ ಕಡಿಮೆಯಾಗುತ್ತದೆ. ನಮಗಿರುವ ಸ್ವಾಭಿಮಾನವೇ ನಮ್ಮ ಮರ್ಯಾದೆ ಕಾಪಾಡುತ್ತದೆ.

ಮೂರನೇಯದಾಗಿ ನಾವು ಹಣ ಗಳಿಸುವ ಓಟದಲ್ಲಿ ನಮ್ಮ ಆರೋಗ್ಯವನ್ನು ಕಡೆಗಣಿಸಬಾರದು. ಕೆಲಸ ಮಾಡುವ ಭರದಲ್ಲಿ ನಾವು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದನ್ನು, ಆರೋಗ್ಯದ ಬಗ್ಗೆ ಗಮನ ಕೊಡುವುದನ್ನು ಮರೆಯಬಾರದು ಅಂತಾರೆ ಚಾಣಕ್ಯರು.

ಇನ್ನು ಕೊನೆಯದಾಗಿ ಹಣ ಮಾಡುವ ಭರದಲ್ಲಿ ನಾವು ಸಂಬಂಧಗಳನ್ನು ಮರೆಯಬಾರದು. ಉದಾಹರಣೆಗೆ ಪತಿಯಾದವನು ಪತ್ನಿ ಮತ್ತು ಮಕ್ಕಳಿಗಾಗಿ ದುಡಿಯಬೇಕು, ಹಣ ಕೂಡಿಡಬೇಕು ಎಂಬ ಭರದಲ್ಲಿ, ಅವರಿಗೆ ಸಮಯವೇ ಕೊಡದಿದ್ದರೆ, ಅಲ್ಲಿಗೆ ಸಂಬಂಧ ಹಳಸಿ ಹೋಗುತ್ತದೆ. ಹಾಗಾಗಿ ದುಡಿಯುವುದರ ಜೊತೆಗೆ ಕುಟುಂಬಕ್ಕೂ ಸಮಯ ಮೀಸಲಿಡಬೇಕು ಅಂತಾರೆ ಚಾಣಕ್ಯರು.

- Advertisement -

Latest Posts

Don't Miss