Chanakya Neeti: ಚಾಣಕ್ಯರು ನಮಗೆ ಹಲವು ವಿಷಯಗಳ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೆ. ಜೀವನ, ಸಂಬಂಧ, ವಿವಾಹ, ಆರ್ಥಿಕತೆ, ಹಣ ಸಂಪಾದನೆ, ಸ್ನೇಹ ಹೀಗೆ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ. ಇದೀಗ ಮಾನಸಿಕ ನೆಮ್ಮದಿಗೆ ಸಂಬಂಧಿಸಿದಂತೆ ಚಾಣಕ್ಯರು ಹೇಳಿದ್ದೇನು ಎಂದು ತಿಳಿಯೋಣ ಬನ್ನಿ..
ವಾಸ್ತವದಲ್ಲಿ ಬದುಕಿ: ಚಾಣಕ್ಯರು ಹೇಳುವ ಪ್ರಕಾರ, ಮನುಷ್ಯ ಹಲವು ಬಾರಿ ಭ್ರಮೆಯಲ್ಲಿ ಬದುಕಿಯೇ, ತನ್ನ ನೆಮ್ಮದಿಯನ್ನು ಹಾಳುಗೆಡುವುತ್ತಾನೆ. ನಿಮ್ಮ ಪರಿಸ್ಥಿತಿ, ನಿಮ್ಮ ಸುತ್ತಮುತ್ತಲಿನ ಜನರನ್ನು ಸರಿಯಾಗಿ ಅರ್ಥ ಮಾಡಿಕ“ಂಡು ಬದುಕಿ. ಆಗ ನೆಮ್ಮದಿ ತಾನಾಗಿಯೇ ಸಿಗುತ್ತದೆ.
ತಾಳ್ಮೆಯಿಂದ ಇರಿ: ನೆಮ್ಮದಿ ಬೇಕು ಅಂದ್ರೆ, ನಾವು ಜೀವನದಲ್ಲಿ ತಾಳ್ಮೆಯಿಂದ ಇರಬೇಕಾಗಿದ್ದು ಕೂಡ ಅಷ್ಟೇ ಮುಖ್ಯ. ತಾಳ್ಮೆ ಇರುವ ಮನುಷ್ಯ ದುಡುಕುವುದಿಲ್ಲ. ಮಾತು ಮಿತಿ ಮೀರುವುದಿಲ್ಲ. ಆತನ ಆಲೋಚನಾ ಶಕ್ತಿ ಅತ್ಯುತ್ತಮವಾಗಿರುತ್ತದೆ. ಹೀಗಾಗಿ ನೆಮ್ಮದಿ ಬೇಕು ಅಂದ್ರೆ ತಾಳ್ಮೆಯೂ ಮುಖ್ಯ ಅಂತಾರೆ ಚಾಣಕ್ಯರು.
ನಿರೀಕ್ಷೆ ಬಿಡಿ: ನಿಮಗೆ ನಿಜವಾದ ನೆಮ್ಮದಿ ಬೇಕು ಅಂದ್ರೆ, ನೀವು ಯಾರ ಮೇಲೆಯೂ ನಿರೀಕ್ಷೆ ಇಡಬೇಡಿ. ನಿರೀಕ್ಷೆ ಇದ್ದಷ್ಟು ನಿರಾಸೆ ಹೆಚ್ಚು. ಹಾಗಾಗಿ ನಿರೀಕ್ಷೆ ಇಟ್ಟು ಮನಸ್ಸು ಮುರಿದುಕ“ಳ್ಳುವ ಬದಲು, ಯಾವ ನಿರೀಕ್ಷೆ ಇಲ್ಲದೆ ಬದುಕುವುದನ್ನು ಕಲಿಯಿರಿ.
ಗುರಿಯೆಡೆಗೆ ಗಮನವಿರಲಿ: ನಮಗೆ ನಿಜವಾದ ನೆಮ್ಮದಿ ಸಿಗುವುದು ನಮ್ಮ ಯಶಸ್ಸು ಸಾಧಿಸುವಲ್ಲಿ. ಹಾಗಾಗಿ ಯಾವುದಾದರೂ ಕೆಲಸದಲ್ಲಿ ನೀವು ಯಶಸ್ಸು ಕಾಣಬೇಕು ಎಂಬ ಗುರಿಯ“ಂದಿಗೆ ನೀವು ಮುನ್ನಡೆಯಿರಿ. ಮತ್ತು ಆ ಗುರಿಯೆಡೆಗೆ ನಿಮ್ಮ ಗಮನವಿರಲಿ.
ಶಿಸ್ತಿನಿಂದಿರಿ: ಜೀವನದಲ್ಲಿ ಯಶಸ್ಸು, ಗೌರವ, ಶ್ರೀಮಂತಿಕೆ, ನೆಮ್ಮದಿ, ಆರೋಗ್ಯ ಏನೇ ಸಿಗಬೇಕು ಅಂದ್ರೆ ಶಿಸ್ತಿನಿಂದ ಇರುವುದು ತುಂಬಾ ಮುಖ್ಯ. ಶಿಸ್ತಿನ ಜೀವನ ನಿಮಗೆನೂ ಬೇಕೋ ಅದೆಲ್ಲವನ್ನೂ ನೀಡುತ್ತದೆ.




