Sunday, September 8, 2024

Latest Posts

ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಎಂಬ ಬಗ್ಗೆ ಚಾಣಕ್ಯರು ಈ ರೀತಿ ಹೇಳಿದ್ದಾರೆ ನೋಡಿ

- Advertisement -

Spiritual: ಇಂದಿನ ಕಾಲದಲ್ಲಿ ಶಿಕ್ಷಣ ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಚೆನ್ನಾಗಿ ಶಿಕ್ಷಣ ಪಡೆದು, ಉತ್ತಮ ಉದ್ಯೋಗ ಗಳಿಸಿದವರಿಗೆ ಹೆಚ್ಚಿನ ಬೆಲೆ. ಹಾಾಗಾಗಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವುದು ಮುಖ್ಯವಾಗಿದೆ. ಚಾಣಕ್ಯರು ಕೂಡ ಮಕ್ಕಳಿಗೆ ಶಿಕ್ಷಣ ಕೊಡಿಸುವ ಬಗ್ಗೆ ಕೆಲ ಮಾತುಗಳನ್ನು ಹೇಳಿದ್ದಾರೆ.

ಮಕ್ಕಳಿಗೆ ಶಿಕ್ಷಣ ಕೊಡಿಸದಿದ್ದಲ್ಲಿ, ಅವರಿಗೆ ಸಮಾಜದಲ್ಲಿ ಗೌರವ ಸಿಗುವುದಿಲ್ಲ. ಹಾಗಾಗಿ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಅತ್ಯಗತ್ಯ. ಹಿರಿಯರೇ ಹೇಳಿದ ಹಾಗೆ ವಿದ್ಯೆ ಇಲ್ಲದವ ಹದ್ದಿಗಿಂತ ಕೀಳು ಅನ್ನೋ ಮಾತಿದೆ. ವಿದ್ಯೆ ಇಲ್ಲದ ವ್ಯಕ್ತಿಯನ್ನು ಕೀಳಾಗಿ ನೋಡುತ್ತಾರೆ. ತಮ್ಮ ತಮ್ಮ ಕೆಲಸಕ್ಕೆ ಸುಲಭವಾಗಿ ಬಳಸಿಕೊಳ್ಳುತ್ತಾರೆ. ವಿದ್ಯಾವಂತರಾಗಿಲ್ಲದ ಕಾರಣ, ಅವರು ಪದೇ ಪದೇ ಮೋಸ ಹೋಗುವ ಸಾಧ್ಯತೆಯೂ ಇರುತ್ತದೆ. ಹಾಾಗಾಗಿ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ತುಂಬ ಮುಖ್ಯವಾಗಿದೆ.

ಅದರಲ್ಲೂ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲೇಬೇಕು. ಹೆಣ್ಣೊಂದು ಕಲಿತರೆ, ಶಾಲೆಯೊಂದು ತೆರೆದಂತೆ ಅನ್ನೋ ಮಾತಿದೆ. ಅದೇ ರೀತಿ ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ, ಅವರು ಮುಂದೆ ವಿವಾಹವಾದ ಬಳಿಕ, ಮಕ್ಕಳಿಗೂ ಉತ್ತಮ ಶಿಕ್ಷಣ ಕಲಿಸಲು ಮುಂದಾಗುತ್ತಾಳೆ. ಇದರಿಂದ ಮಕ್ಕಳಿಗೆ ಹೆಚ್ಚಿನ ಜ್ಞಾನ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೇ, ಆಕೆ ವಿದ್ಯಾವಂತೆಯಾಗಿರುವುದರಿಂದ ಕುಟುಂಬದಲ್ಲಿ ಜಗಳ, ಸಮಸ್ಯೆ ಆದಾಗ, ಯಾವ ರೀತಿ ಮಾತನಾಡಬೇಕು. ಯಾವ ರೀತಿ ಇರಬೇಕು ಎಂದು ಕೂಡ ಕಲಿತಿರುತ್ತಾಳೆ. ಹಾಗಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಅತ್ಯಗತ್ಯ.

ಇನ್ನು ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಂದರ್ಭದಲ್ಲಿ, ಅವರನ್ನು ಉತ್ತಮ ಮನುಷ್ಯನನ್ನಾಗಿ ಮಾಡುವ ಸಂದರ್ಭದಲ್ಲಿ ಬೈಯ್ಯುವುದು, ಗದರುವುದು ಕೂಡ ಸಾಮಾನ್ಯವಾಗಿರಬೇಕು. ನಾನು ನನ್ನ ಮಗುವಿಗೆ ಬೈದರೆ, ಶಿಕ್ಷಿಸಿದರೆ, ಎಲ್ಲಿ ಅದಕ್ಕೆ ಬೇಸರವಾಗುತ್ತದೆಯೋ, ನೋವಾಗುತ್ತದೆಯೋ ಎಂಬ ಕೊರಗು ತಂದೆ ತಾಯಿಯಲ್ಲಿ ಇರುವುದು ಸಹಜ. ಆದರೆ ಅದು ನಾಳೆ ಸಮಾಜದಲ್ಲಿ ಒಳ್ಳೆಯ ಹೆಸರು ಪಡೆಯಬೇಕು. ತನ್ನ ಕಾಲ ಮೇಲೆ ತಾನು ನಿಂತು, ಸ್ವಾಭೀಮಾನದಿಂದ ಜೀವನ ಮಾಡಬೇಕು ಎಂದಲ್ಲಿ, ಮಗು ತಪ್ಪು ಮಾಡಿದಾಗ, ಅದಕ್ಕೆ ಬೈದು ಬುದ್ಧಿ ಹೇಳುವುದು ತಪ್ಪಲ್ಲ ಅಂತಾರೆ ಚಾಣಕ್ಯರು.

ಅಧಿವೇಶನ ಬೆನ್ನಲ್ಲೇ ಮತ್ತೆ ಮುನ್ನೆಲೆಗೆ ಬಂದ ಧಾರವಾಡ ಪ್ರತ್ಯೇಕ ಪಾಲಿಕೆ ಕೂಗು

ಪೊಲೀಸ್ ಪೇದೆಯಿಂದ ಪತ್ನಿ ಕೊ* ಪ್ರಕರಣ: ಶಾಕಿಂಗ್ ಸತ್ಯ ಹೇಳಿದ ಪುತ್ರ

ಅಪ್ಪುವಿಗಾಗಿ ಬರೆದಿದ್ದ ಭೂಮಿಗೆ ಬಂದ ಭಗವಂತ ಹಾಡು ರಿಲೀಸ್ ಮಾಡಿದ ಅಪ್ಪ, ಅಮ್ಮ, ಅಪ್ಪು ತಂಡ

- Advertisement -

Latest Posts

Don't Miss